Asianet Suvarna News Asianet Suvarna News

ರಣಜಿ ಟ್ರೋಫಿ ಫೈನಲ್‌ಗೆ ಮುಂಬೈ, ಮಧ್ಯಪ್ರದೇಶ ಲಗ್ಗೆ..!

ರಣಜಿ ಟ್ರೋಫಿ ಫೈನಲ್‌ಗೆ ಲಗ್ಗೆಯಿಟ್ಟ ಮುಂಬೈ, ಮಧ್ಯಪ್ರದೇಶ
ಬೆಂಗಾಲ್ ಬಗ್ಗುಬಡಿದು ಫೈನಲ್ ಪ್ರವೇಶಿಸಿದ ಮಧ್ಯಪ್ರದೇಶ
ಉತ್ತರ ಪ್ರದೇಶ ಎದುರು ಪ್ರಾಬಲ್ಯ ಮೆರೆದ 41 ಬಾರಿಯ ಚಾಂಪಿಯನ್ ಮುಂಬೈ

Mumbai enter Ranji Trophy final to meet Madhya Pradesh kvn
Author
Bengaluru, First Published Jun 18, 2022, 5:01 PM IST | Last Updated Jun 18, 2022, 5:06 PM IST

ಬೆಂಗಳೂರು(ಜೂ.18): ದೇಶಿ ಕ್ರಿಕೆಟ್‌ನ ಬಲಿಷ್ಠ ತಂಡವಾದ ಮುಂಬೈ ತಂಡವು ಸೆಮಿಫೈನಲ್‌ನಲ್ಲಿ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ 2022ನೇ ಸಾಲಿನ ರಣಜಿ ಟ್ರೋಫಿ (Ranji Trophy) ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ಎದುರು ಭರ್ಜರಿ ಗೆಲುವು ದಾಖಲಿಸಿದ ಮಧ್ಯಪ್ರದೇಶ ತಂಡವು ಫೈನಲ್ ಪ್ರವೇಶಿಸಿದ್ದು, ರಣಜಿ ಟ್ರೋಫಿ ಪ್ರಶಸ್ತಿಗಾಗಿ ಈ ಎರಡು ತಂಡಗಳು ಹೋರಾಟ ನಡೆಸಲಿವೆ. ಜೂನ್ 22ರಿಂದ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯ ಜರುಗಲಿದೆ. 

41 ಬಾರಿ ರಣಜಿ ಟ್ರೋಫಿ ಚಾಂಪಿಯನ್ ತಂಡವಾದ ಮುಂಬೈ (Mumbai Cricket Team), ಇಲ್ಲಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ (Uttar Pradesh Cricket Team) ಎದುರು ಮೊದಲ ಎಸೆತದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಅಂತಿಮವಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಮೊದಲ ಇನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಮುಂಬೈ ತಂಡವು ಫೈನಲ್ ಪ್ರವೇಶಿಸಿದೆ. ಮುಂಬೈ ತಂಡವು ಮೊದಲ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 393 ರನ್ ಬಾರಿಸಿತ್ತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ್ದ ಉತ್ತರ ಪ್ರದೇಶ ತಂಡವು ಕೇವಲ 180 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಬರೋಬ್ಬರಿ 213 ರನ್‌ಗಳ ಹಿನ್ನಡೆ ಅನುಭವಿಸಿತ್ತು.

ಮೊದಲ ಇನಿಂಗ್ಸ್‌ನಲ್ಲಿ 213 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಮುಂಬೈ 4 ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 449 ರನ್ ಕಲೆಹಾಕಿತ್ತು. ಎರಡನೇ ಇನಿಂಗ್ಸ್‌ನಲ್ಲೂ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಚಚ್ಚಿದರು. ಮತ್ತೊಂದು ತುದಿಯಲ್ಲಿ ಅರ್ಮಾನ್ ಜಾಫರ್ ಕೂಡಾ ಶತಕ ಸಿಡಿಸಿ ಮುಂಬೈ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಕೊನೆಯ ದಿನದಾಟದಲ್ಲಿ ಸರ್ಫರಾಜ್ ಖಾನ್(59*) ಹಾಗೂ ಶಮ್ಸ್ ಮುಲಾನಿ(51*) ಅಜೇಯ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಎರಡನೇ ಇನಿಂಗ್ಸ್‌ನಲ್ಲಿ ಮುಂಬೈ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 533 ರನ್ ಕಲೆಹಾಕಿತ್ತು. ಇದಾದ ಬಳಿಕ ಎರಡೂ ತಂಡದ ನಾಯಕರು ಡ್ರಾ ಮಾಡಿಕೊಳ್ಳುವ ತೀರ್ಮಾನ ತೆಗೆದುಕೊಂಡರು. ಮುಂಬೈ ಕ್ರಿಕೆಟ್ ತಂಡವು ದಾಖಲೆಯ 47ನೇ ಬಾರಿಗೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ್ದು, 42ನೇ ರಣಜಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಬೆಂಗಾಲ್ ಎದುರು ಮಧ್ಯಪ್ರದೇಶ ಜಯಭೇರಿ

ಕುಮಾರ್ ಕಾರ್ತಿಕೇಯ ಮಾರಕ ದಾಳಿಗೆ ತತ್ತರಿಸಿದ ಬೆಂಗಾಲ್ ತಂಡವು ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ 174 ರನ್‌ಗಳ ಅಂತರದಲ್ಲಿ ಮಧ್ಯಪ್ರದೇಶಕ್ಕೆ ಶರಣಾಗಿದೆ. ಈ ಗೆಲುವಿನೊಂದಿಗೆ ಮಧ್ಯಪ್ರದೇಶ ತಂಡವು 1998-99ರ ಬಳಿಕ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. 

Ranji Trophy: ಫೈನಲ್‌ನತ್ತ ಮುಂಬೈ, ಮಧ್ಯಪ್ರದೇಶ ದಾಪುಗಾಲು

ಮಧ್ಯಪ್ರದೇಶ ತಂಡವು ನೀಡಿದ್ದ 350 ರನ್‌ಗಳ ಗುರಿ ಬೆನ್ನತ್ತಿದ ಬೆಂಗಾಲ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 96 ರನ್ ಬಾರಿಸಿತ್ತು. ಅಜೇಯ 52 ಬಾರಿಸಿದ್ದ ಅಭಿಮನ್ಯು ಈಶ್ವರನ್ ಅವರನ್ನು ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಮಧ್ಯಪ್ರದೇಶ ಬೌಲರ್‌ಗಳು ಅವಕಾಶ ನೀಡಲಿಲ್ಲ. ಅಭಿಮನ್ಯು ಈಶ್ವರನ್ 157 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 78 ರನ್ ಬಾರಿಸಿ ಕುಮಾರ್ ಕಾರ್ತಿಕೇಯನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಚಚ್ಚಿದ್ದ ಶಾಬಾಜ್ ಅಹಮ್ಮದ್ ಅಜೇಯ 22 ರನ್ ಬಾರಿಸಿದಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.


 

Latest Videos
Follow Us:
Download App:
  • android
  • ios