ಮುಂಬೈ(ಮಾ.09): ಕನ್ನಡಿಗ ಸುನಿಲ್ ಜೋಶಿ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಸಮಿತಿ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಆಯ್ಕೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಬೆನ್ನಲ್ಲೇ ಹಿರಿಯ ಕ್ರಿಕೆಟಿಗ ಧೋನಿ ಆಯ್ಕೆ ಕುರಿತು ಸ್ಪಷ್ಟ ನಿಲುವನ್ನೂ ಹೊಂದಿದೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

ಇದನ್ನೂ ಓದಿ: ಧೋನಿ ಅಭ್ಯಾಸ ನೋಡಲು ಕ್ರೀಡಾಂಗಣ ಫುಲ್, ಬ್ಯಾರಿಕೇಡ್ ಹಾರಿದ ಅಭಿಮಾನಿ!.

ಐಪಿಎಲ್ 2020ರಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಧೋನಿ ಟೀಂ ಇಂಡಿಯಾಗೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ನೂತನ ಆಯ್ಕೆ ಸಮಿತಿ ಹೇಳಿದೆ. ಇದೇ ಮಾತನ್ನು ಈ ಹಿಂದಿನ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಕೂಡ ಹೇಳಿತ್ತು. ಇದೀಗ ಅಭಿಮಾನಿಗಳು ಐಪಿಎಲ್ ಟೂರ್ನಿ ಎದುರುನೋಡುತ್ತಿದ್ದಾರೆ. 

ಇದನ್ನೂ ಓದಿ:6,6,6,6,6 ಧೋನಿ ಸುನಾಮಿ, CSK ಅಭ್ಯಾಸದ MSD ಸಿಕ್ಸರ್ ಸುರಿಮಳೆ!...

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಧೋನಿ ಅಬ್ಬರಿಸಲಿದ್ದಾರೆ ಅನ್ನೋ ವಿಶ್ವಾಸ ಅಭಿಮಾನಿಗಳದ್ದು. ಕಾರಣ ಈಗಾಗಲೇ ಅಭ್ಯಾಸದಲ್ಲಿ ಧೋನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಒಂದೇ ಓವರ್‌ನ 5 ಎಸೆತಗಳನ್ನೂ ಸಿಕ್ಸರ್ ಸಿಡಿಸಿ ಧೋನಿ ತಮ್ಮಲ್ಲಿನ್ನು ಕ್ರಿಕೆಟ್ ಬಾಕಿ ಇದೆ ಅನ್ನೋದನ್ನು ಸಾಬೀತು ಮಾಡಿದ್ದರು.

ಧೋನಿ ಮತ್ತೆ ಟೀಂ ಇಂಡಿಯಾದಲ್ಲಿ ಆಡಲಿದ್ದಾರೆ ಅನ್ನೋ ಕುರಿತು ಅಭಿಮಾನಿಗಳಲ್ಲಿ ಗೊಂದಲವಿಲ್ಲ. ಆದರೆ ಈ ಬಾರಿಯ ಐಪಿಎಲ್ ಟೂರ್ನಿ ನಡೆಯುತ್ತಾ ಅನ್ನೋ ಅನುಮಾನಗಳು ಅಭಿಮಾನಿಗಳನ್ನುಕಾಡತೊಡಗಿದೆ. ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ.
 

ಮಾರ್ಚ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ