Asianet Suvarna News Asianet Suvarna News

IND vs NZ ಟಿ20 ಸರಣಿಗೂ ಮುನ್ನ ಪಾಂಡ್ಯ ಸೈನ್ಯಕ್ಕೆ ಅಚ್ಚರಿ, ಡ್ರೆಸ್ಸಿಂಗ್ ರೂಂಗೆ ಧೋನಿ ಭೇಟಿ!

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಜನವರಿ 27ರಿಂದ ಆರಂಭಗೊಳ್ಳುತ್ತಿದೆ. ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದ ಟೀಂ ಇಂಡಿಯಾಗೆ ಅಚ್ಚರಿ ಎದುರಾಗಿದೆ. ಕಾರಣ ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಪ್ರತ್ಯಕ್ಷರಾಗಿದ್ದಾರೆ.

MS Dhoni visit Team India Ranchi dressing room met Hardik squad ahead of New zealand t20 series ckm
Author
First Published Jan 26, 2023, 8:05 PM IST

ರಾಂಚಿ(ಜ.26): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಬಳಿಕ ಇದೀಗ ಎಲ್ಲರ ಚಿತ್ತ ಟಿ20 ಸರಣಿಯತ್ತ ನೆಟ್ಟಿದೆ. ಚುಟುಕು ಮಾದರಿಯಲ್ಲೂ ಭಾರತ ಕ್ಲೀನ್ ಸ್ವೀಪ್ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ ರಾಂಚಿಯಲ್ಲಿ ಅಭ್ಯಾಸ ನಡೆಸುತ್ತಿದೆ. ತಯಾರಿ ನಡೆಸುತ್ತಿದ್ದ ಟೀಂ ಇಂಡಿಯಾಗೆ ಅಚ್ಚರಿ ಎದುರಾಗಿದೆ. ಡ್ರೆಸ್ಸಿಂಗ್ ರೂಂನಲ್ಲಿ ದಿಢೀರ್ ಮಾಜಿ ನಾಯಕ ಎಂ.ಎಸ್.ಧೋನಿ ಪ್ರತ್ಯಕ್ಷರಾಗಿದ್ದಾರೆ. ರಾಂಚಿಯಲ್ಲಿ ಧೋನಿ ಐಪಿಎಲ್ ಅಭ್ಯಾಸ ಆರಂಭಿಸಿದ್ದಾರೆ. ಇದೇ ಕ್ರೀಡಾಂಗದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಅಭ್ಯಾಸ ಮುಗಿಸಿ ಹಿಂತಿರುಗಿದ ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ಎಂಟ್ರಿ ಕೊಟ್ಟ ಧೋನಿ, ಆಟಗಾರರ ಜೊತೆ ಕೆಲ ಹೊತ್ತು ಕಳೆದರು.

ಧೋನಿ ನೋಡುತ್ತಿದ್ದಂತೆ ನಾಯಕ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಸೇರಿದಂತೆ ಆಟಾಗಾರರು ಮುಗಿಬಿದ್ದರು. ಧೋನಿ ಜೊತೆ ಮಾತನಾಡುತ್ತ ಕೆಲ ಹೊತ್ತು ಕಳೆದರು. ಈ ವೇಳೆ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಹಳೇ ನೆನಪುಗಳನ್ನು ಮೆಲುಕು ಹಾಕಿ ನಗೆ ಚಟಾಕಿಹಾರಿಸಿದರು.

IPL 2023 ವೇಳಾಪಟ್ಟಿ ಚರ್ಚೆ, ಎಪ್ರಿಲ್ 1ಕ್ಕೆ ಟೂರ್ನಿ ಆರಂಭ, ಮೇ. 28ಕ್ಕೆ ಫೈನಲ್!

ಎಲ್ಲಾ ಆಟಗಾರರಿಗೆ ಧೋನಿ ಶುಭಕೋರಿದರು. ಇದೇ ವೇಳೆ ಯುವ ಆಟಗಾರರು ಧೋನಿ ಜೊತೆ ಮಾತುಕತೆ ನಡೆಸಿ ಸಂಭ್ರಮಿಸಿದರು. ಇದೇ ವೇಳೆ ತಂಡದ ಸಹಾಯ ಸಿಬ್ಬಂದಿಗಳ ಜೊತೆಗೂ ಧೋನಿ ಮಾತುಕತೆ ನಡೆಸಿದರು. ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡ ರಾಂಚಿ ಮುಖ್ಯ ಮೈದಾನದಲ್ಲಿ ಅಭ್ಯಾಸ ನಡೆಸಿದ್ದರು. ಇತ್ತ ಧೋನಿ ಅಭ್ಯಾಸಕ್ಕಾಗಿ ಮೀಸಲಿಟ್ಟಿರುವ ನೆಟ್ ಪ್ರಾಕ್ಟೀಸ್ ಗ್ರೌಂಡ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಧೋನಿ ಅಭ್ಯಾಸ ಮುಗಿಸಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಭೇಟಿ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. 

 

 

ಐಪಿಎಲ್ 2023ರ ಟೂರ್ನಿಗೆ ಧೋನಿ ಇತ್ತೀಚೆಗೆ ಅಭ್ಯಾಸ ಆರಂಭಿಸಿದ್ದಾರೆ. ಭರ್ಜರಿ ಸಿಕ್ಸರ್ ಮೂಲಕ ಧೋನಿ ಅಭ್ಯಾಸ ನಡೆಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ, ಮತ್ತೆ ಸಿಎಸ್‌ಕೆ ಚಾಂಪಿಯನ್ ಪಟ್ಟ ಕಟ್ಟಲು ಪಣತೊಟ್ಟಿದ್ದಾರೆ. ಇದಕ್ಕಾಗಿ ಈಗಾಗಲೇ ಅಭ್ಯಾಸ ನಡೆಸುತ್ತಿದ್ದಾರೆ.

IND vs NZ ಟಿ20 ಸರಣಿ ಆರಂಭಕ್ಕೂ ಮುನ್ನ ಭಾರತಕ್ಕೆ ಶಾಕ್, ಸ್ಟಾರ್ ಪ್ಲೇಯರ್ ಔಟ್!

ಇತ್ತೀಚೆಗೆ ಧೋನಿ ಮಂಗಳೂರಿನ ಸಮೀಪದಲ್ಲಿರುವ ಕಾಸರಗೋಡಿಗೆ ಭೇಟಿ ನೀಡಿದ್ದರು.  ಕಾಸರಗೋಡು ಭೇಟಿ ಮಧ್ಯೆ ಕಡಲ ನಗರಿ ಮಂಗಳೂರಿಗೆ ಆಗಮಿಸಿದ್ದು. ಧೋನಿ ಅವರಿಂದ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮುತ್ತಿಗೆ ಹಾಕಿದ್ದು, ಅದಕ್ಕೆ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಕಾಸರಗೋಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳಲು ಧೋನಿ ಅವರು ಮುಂಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇಲ್ಲಿಂದ ನೇರವಾಗಿ ಕಾಸರಗೋಡಿಗೆ ತೆರಳಿದರು.

ಸೌದಿ ಅರೇಬಿಯಾದಲ್ಲಿ ಆಸ್ಪತ್ರೆ ಹೊಂದಿರುವ ಧೋನಿ ಸ್ನೇಹಿತ ಡಾ.ಶಾಜಿರ್‌ ಗಫರ್‌ ಎಂಬುವವರ ತಂದೆ ಪ್ರೊ.ಕೆ.ಕೆ.ಅಬ್ದುಲ್‌ ಗಫರ್‌ ಅವರ ‘ಆಟೋ ಬಯೋಗ್ರಫಿ’ ಬಿಡುಗಡೆ ಸಮಾರಂಭದಲ್ಲಿ ಧೋನಿ ಭಾಗವಹಿಸಿದ್ದರು.
 

Follow Us:
Download App:
  • android
  • ios