ನವದೆಹಲಿ(ಫೆ.06): ಕ್ರಿಕೆಟ್‌ನಿಂದ ಬಿಡುವು ಪಡೆದುಕೊಂಡಿರುವ ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ, ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಅವರೊಂದಿಗೆ ಆಪ್ತ ಸ್ನೇಹಿತರಾದ ಮಾಜಿ ವೇಗಿ ಆರ್‌.ಪಿ.ಸಿಂಗ್‌, ಸ್ಪಿನ್ನರ್‌ ಪೀಯೂಷ್‌ ಚಾವ್ಲಾ ಸಹ ಹೋಗಿದ್ದು, ಈ ಇಬ್ಬರಿಗೆ ಧೋನಿ ಪಾನಿಪುರಿ ಮಾಡಿಕೊಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

 

ಇದನ್ನೂ ಓದಿ: IPL 2020: ತಯಾರಿ ಆರಂಭಿಸಿದ ಧೋನಿ-ರೈನಾ!

ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ ಕುಟುಂಬದ ಜೊತೆ ಹೆಚ್ಚಿನ  ಸಮಯ ಕಳೆಯುತ್ತಿದ್ದಾರೆ. ಪ್ರಮೋಶನ್, ಜಾಹೀರಾತು ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಧೋನಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ  ಬಿಡುವಿನಲ್ಲಿ ಪತ್ನಿ ಸಾಕ್ಷಿ ಧೋನಿ, ಪುತ್ರಿ ಝಿವಾ ಧೋನಿ ಹಾಗೂ ಗೆಳೆಯರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. 

ಇದನ್ನೂ ಓದಿ: ರಾಹುಲ್‌ಗೆ ಕೀಪಿಂಗ್; ಕೊಹ್ಲಿ- ಧೋನಿ ನಾಯಕತ್ವ ವ್ಯತ್ಯಾಸ ಹೇಳಿದ ಸೆಹ್ವಾಗ್!

ಪ್ರವಾಸದ ವೇಳೆ ಕ್ರಿಕೆಟಿಗರಾದ ಆರ್‌ಪಿ ಸಿಂಗ್ ಹಾಗೂ ಚಾವ್ಲಾಗೆ ಪಾನಿಪೂರಿ ಮಾಡಿಕೊಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

2019ರ ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್.ಧೋನಿ ಯಾವುದೇ ಕ್ರಿಕೆಟ್ ಆಡಿಲ್ಲ. ವೆಸ್ಟ್ ಇಂಡೀಸ ಪ್ರವಾಸದ ವೇಳೆ ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಉದ್ದೇಶ ಪೂರ್ವಕವಾಗಿ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಆದರೆ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಧೋನಿಯನ್ನು ಕಡೆಗಣಿಸಲಾಗಿದೆ ಅನ್ನೋ ಮಾತ ಕೇಳಿ ಬಂದಿದೆ.