ರಾಂಚಿ(ಜ.24): ಟೀಂ ಇಂಡಿಯಾದಿಂದ ದೂರ ಉಳಿದಿರು ಎಂ.ಎಸ್.ಧೋನಿ ಮತ್ತೆ ಬ್ಲೂ ಜರ್ಸಿಯಲ್ಲಿ ಕಾಣಿಸಿಕೊಳ್ಳುತ್ತಾರಾ ಅನ್ನೋ ಕುತೂಹಲಕ್ಕೆ ಇನ್ನು ಸ್ಪಷ್ಟ ಉತ್ತರ ಸಿಕ್ಕಿಲ್ಲ. ಧೋನಿ ವಿದಾಯ ಹೇಳಿದ್ದಾರೆ ಅನ್ನೋ ಮಾತುಗಳ  ನಡುವೆ, ಮುಂಬರುವ ಐಪಿಎಲ್ ಟೂರ್ನಿಗೆ ಅಭ್ಯಾಸ ಆರಂಭಿಸಿದ್ದಾರೆ.

ಇದನ್ನೂ ಓದಿ: ರಾಹುಲ್‌ಗೆ ಕೀಪಿಂಗ್; ಕೊಹ್ಲಿ- ಧೋನಿ ನಾಯಕತ್ವ ವ್ಯತ್ಯಾಸ ಹೇಳಿದ ಸೆಹ್ವಾಗ್!

2020ರ  ಐಪಿಎಲ್ ಟೂರ್ನಿಗೆ ಎಂ.ಎಸ್.ಧೋನಿ ತಯಾರಿ ಆರಂಭಿಸಿದ್ದಾರೆ. ಈ ಕುರಿತು ಜಾರ್ಖಂಡ್ ಕೋಚ್ ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಆಡುವ ಕುರಿತು ಧೋನಿ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ. ಧೋನಿ ಕೂಡ ಈ ಕುರಿತು ಯಾವ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಧೋನಿ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿದ್ದಾರೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: 2021ರ ಐಪಿಎಲ್‌ನಲ್ಲೂ ಧೋನಿ ನಮ್ಮ ತಂಡದಲ್ಲಿರುತ್ತಾರೆ ಎಂದ ಶ್ರೀನಿ..!.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಯನ್ನು ಮೈದಾನದಲ್ಲಿ ನೋಡಲು ಕಾತರರಾಗಿರುವ ಅಭಿಮಾನಿಗಳು ಇದೀಗ ಐಪಿಎಲ್ ಟೂರ್ನಿಗೆ ಕಾಯುತ್ತಿದ್ದಾರೆ. ಧೋನಿ ರಾಂಚಿಯಲ್ಲಿ ತಯಾರಿ ಆರಂಭಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ಆಯೋಜಿಸಿರುವ ತರಬೇತಿ ಶಿಬಿರದಲ್ಲಿ ಸುರೇಶ್ ರೈನಾ ಹಾಗೂ ಅಂಬಾಟಿ ರಾಯುಡು ಪಾಲ್ಗೊಂಡಿದ್ದಾರೆ.

 

ಸಿಎಸ್‌ಕೆ ಫ್ರಾಂಚೈಸಿ ಖರೀದಿಸುವ ಲಭ್ಯವಿರುವ ಆಟಗಾರರಿಗೆ ತರಬೇತಿ ಶಿಬಿರ ಆಯೋಜಿಸಿದೆ. ಈ ಕ್ಯಾಂಪ್‌ನಲ್ಲಿ ರೈನಾ ಹಾಗೂ ಅಂಬಾಟಿ ರಾಯುಡು ಕಸರತ್ತು ಆರಂಭಿಸಿದ್ದಾರೆ. ಈ ಬಗ್ಗೆ ಸಿಎಸ್‌ಕೆ ಅಧೀಕೃತ  ಟ್ವಿಟರರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.