ಮುಂಬೈ(ಜ.17): ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಎಂ.ಎಸ್.ಧೋನಿ ಕೈಬಿಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣಾಗಿದೆ. ಇದರ ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಧೋನಿ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಬಲವಾಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಧೋನಿ ಟೀಂ ಇಂಡಿಯಾ ಆಯ್ಕೆಗೆ ಲಭ್ಯರಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ: ಮುಗಿಯಿತಾ ಧೋನಿ ಕ್ರಿಕೆಟ್ ಬದುಕು..?...

ಧೋನಿ ಸೆಲೆಕ್ಷನ್‌ಗೆ ಲಭ್ಯ ಅನ್ನೋ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ. ಧೋನಿ ಕೇವಲ ಟಿ20 ಮಾದರಿಗೆ ಮಾತ್ರ ಲಭ್ಯವಿದ್ದಾರೆ. ಐಪಿಎಲ್ ಟೂರ್ನಿ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಧೋನಿ ಕೂಡ ಲಭ್ಯವಿದ್ದಾರೆ. ಈ ಕುರಿತು ಆಯ್ಕೆ ಸಮಿತಿಗೆ ಶೀಘ್ರದಲ್ಲೇ ಸಂದೇಶ ರವಾನಿಸಲಿದ್ದಾರೆ. ಆದರೆ ಧೋನಿ ಆಯ್ಕೆ ಐಪಿಎಲ್ ಟೂರ್ನಿ ಪ್ರದರ್ಶನದ ಮೇಲೆ ನಿಂತಿದೆ.

ಇದನ್ನೂ ಓದಿ: #BreakingNews: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!

ಧೋನಿ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡೋ ಮೂಲಕ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಲಿ ಅನ್ನೋದು ಅಭಿಮಾನಿಗಳು ಆಶಯವಾಗಿದೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್.ಧೋನಿ ಒಂದೇ ಒಂದು ಪಂದ್ಯ ಆಡಿಲ್ಲ. ಆರಂಭಿಕ 2 ಸರಣಿಗಳಿಂದ ಸ್ವತಃ ಧೋನಿ ದೂರ ಉಳಿದಿದ್ದರು. ಇನ್ನುಳಿದ ಸರಣಿಗಳಿಂದ ಆಯ್ಕೆ ಸಮಿತಿ ದೂರ ಮಾಡಿತ್ತು. ಹೀಗಾಗಿ ಧೋನಿ ನಿವೃತ್ತಿ ಮಾತುಗಳು ಕೇಳಿ ಬಂದಿತ್ತು.