Asianet Suvarna News Asianet Suvarna News

ರಾಂಚಿಯ ರಸ್ತೆಯಲ್ಲಿ ಜಾಲಿ ರೈಡ್ ಹೊರಟ ಧೋನಿ; ಕ್ಯಾಪ್ಟನ್ ಕೂಲ್ ಮೇಲೆ ಕೇಸ್‌ ಜಡಿಯಲು ನೆಟ್ಟಿಗರ ಆಗ್ರಹ..!

ದೀಗ ಸದ್ಯ ಬಿಡುವಿನ ಸಮಯವನ್ನು ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿರುವ ಧೋನಿ, ತಮ್ಮ ಬಳಿ ಇರುವ ಹಲವಾರು ಬೈಕ್ ಹಾಗೂ ಕಾರುಗಳಲ್ಲಿ ರಾಂಚಿ ರಸ್ತೆಗಳಲ್ಲಿ ಬಿಂದಾಸ್ ರೈಡ್ ಮಾಡುವುದು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದವು. ನಿವೃತ್ತಿ ಬಳಿಕ ನಿವೃತ್ತಿ ಬದುಕನ್ನು ಎಂಜಾಯ್ ಮಾಡುತ್ತಿರುವ ಧೋನಿಯನ್ನು ಕಣ್ತುಂಬಿಕೊಳ್ಳುವುದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹಬ್ಬದ ವಾತಾವರಣ ಎನಿಸಿದೆ.

MS Dhoni Goes For Drive In Ranchi Netizens Call For Legal Action To Be Taken Against Him kvn
Author
First Published Sep 22, 2023, 6:17 PM IST

ಬೆಂಗಳೂರು(ಸೆ.22): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಆಧುನಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕ್ಯಾಪ್ಟನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಐಸಿಸಿಯ ಪ್ರಮುಖ ಮೂರು ಟ್ರೋಫಿ ಗೆದ್ದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಧೋನಿ ಅವರಿಗಿದೆ. ಧೋನಿ ಕೇವಲ ಯಶಸ್ವಿ ನಾಯಕ ಮಾತ್ರವಾಗಿರದೇ ಚಾಣಾಕ್ಷ ವಿಕೆಟ್ ಕೀಪರ್ ಹಾಗೂ ಗ್ರೇಟ್ ಮ್ಯಾಚ್‌ ಫಿನಿಶರ್ ಆಗಿಯೂ ಸೈ ಎನಿಸಿಕೊಂಡಿದ್ದರು. ಎತ್ತಹದ್ದೇ ಒತ್ತಡದ ಪರಿಸ್ಥಿತಿಯಿರಲಿ ತಾಳ್ಮೆಗೆಡದೇ ಕೂಲ್ ಆಗಿ ಕೊನೆಯ ಓವರ್‌ನಲ್ಲಿ ಮ್ಯಾಚ್ ಫಿನಿಶ್ ಮಾಡಿ ಧೋನಿ ಮಿಂಚಿದ್ದಾರೆ. ಧೋನಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ರಾಂಚಿ ರೋಡಲ್ಲಿ ಬಿಂದಾಸ್ ಡ್ರೈವ್ ಹೊರಟ ಧೋನಿ:

ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ, 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾತ್ರ ಧೋನಿ ಮೈದಾನಕ್ಕಿಳಿಯುತ್ತಿದ್ದಾರೆ. ಇದೀಗ ಸದ್ಯ ಬಿಡುವಿನ ಸಮಯವನ್ನು ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿರುವ ಧೋನಿ, ತಮ್ಮ ಬಳಿ ಇರುವ ಹಲವಾರು ಬೈಕ್ ಹಾಗೂ ಕಾರುಗಳಲ್ಲಿ ರಾಂಚಿ ರಸ್ತೆಗಳಲ್ಲಿ ಬಿಂದಾಸ್ ರೈಡ್ ಮಾಡುವುದು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದವು. ನಿವೃತ್ತಿ ಬಳಿಕ ನಿವೃತ್ತಿ ಬದುಕನ್ನು ಎಂಜಾಯ್ ಮಾಡುತ್ತಿರುವ ಧೋನಿಯನ್ನು ಕಣ್ತುಂಬಿಕೊಳ್ಳುವುದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹಬ್ಬದ ವಾತಾವರಣ ಎನಿಸಿದೆ.

ಇದೀಗ ಹೊಸದೊಂದು ವಿಡಿಯೋ ವೈರಲ್ ಆಗಿದ್ದು, ಧೋನಿ ಕಾರು ಓಡಿಸುತ್ತಿರುವುದು ಕಂಡು ಬಂದಿದೆ. ಆದರೆ ಇದೇ ವಿಡಿಯೋ ಕೆಲವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಧೋನಿ ಮೇಲೆ ಕೇಸ್ ಜಡಿಯಲು ಆಗ್ರಹಿಸಿದ್ದಾರೆ. ಹೌದು, ಧೋನಿ ಪಕ್ಕ ಕುಳಿತು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿರುವ ವ್ಯಕ್ತಿಯು ಸೀಟ್ ಬೆಲ್ಟ್ ಹಾಕದೇ ಕಾನೂನು ಉಲ್ಲಂಘಿಸಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸೀಟ್ ಬೆಲ್ಟ್ ಧರಿಸದೇ ಕಾರಿನಲ್ಲಿ ಪ್ರಯಾಣಿಸುವುದು ರಸ್ತೆ ಸಂಚಾರ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಈ ರೀತಿ ಕಾನೂನು ಉಲ್ಲಂಘಿಸಿದವರನ್ನು ಭಾರೀ ದಂಡದ ಸಹಿತ ಜೈಲಿಗೆ ಕಳಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿಯೇ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನೆಟ್ಟಿಗರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದು ಹೀಗೆ:

2024ರ ಐಪಿಎಲ್ ಆಡ್ತಾರಾ ಧೋನಿ?

ಇನ್ನು ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ 2023ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗುಬಡಿದು 5ನೇ ಬಾರಿಗೆ ಕಪ್‌ ಗೆಲ್ಲುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಟ್ರೋಫಿ ಗೆದ್ದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದೆ. ಇನ್ನು ದೇಹ ಸ್ಪಂದಿಸಿದರೆ ತಾವು 2024ರ ಐಪಿಎಲ್ ಆಡುವುದಾಗಿ ಧೋನಿ ಈಗಾಗಲೇ ಘೋಷಿಸಿದ್ದಾರೆ. 2024ರ ಐಪಿಎಲ್‌ವರೆಗೂ ಧೋನಿ ಫಿಟ್ ಇರುತ್ತಾರಾ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios