ಧೋನಿ ಪುತ್ರಿಗೆ ವಿಶೇಷ ಗಿಫ್ಟ್ ಕಳಿಸಿಕೊಟ್ಟ ಲಿಯೋನೆಲ್ ಮೆಸ್ಸಿಲಿಯೋನೆಲ್ ಮೆಸ್ಸಿ ಆಟೋಗ್ರಾಫ್‌ ಹೊಂದಿದ ಜರ್ಸಿ ಧರಿಸಿದ ಝಿವಾ ಧೋನಿತಂದೆಯಂತೆ ಮಗಳು ಝಿವಾ ಕೂಡಾ ಅರ್ಜೆಂಟೀನಾ ತಂಡದ ಅಭಿಮಾನಿ

ನವದೆಹಲಿ(ಡಿ.28): ಭಾರತದ ಫುಟ್ಬಾಲ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಓರ್ವ ಫುಟ್ಬಾಲ್ ಪ್ರೇಮಿ ಎನ್ನುವುದೇನು ರಹಸ್ಯವಾಗಿ ಉಳಿದಿಲ್ಲ. ಇದೀಗ ತಂದೆಯಂತೆ ಎಂ ಎಸ್ ಧೋನಿ ಪುತ್ರಿ ಝಿವಾ ಧೋನಿ ಕೂಡಾ ಫುಟ್ಬಾಲ್‌ ಕ್ರೀಡೆಯನ್ನು ಇಷ್ಟಪಡುತ್ತಾರೆ. 7 ವರ್ಷದ ಝಿವಾ ಧೋನಿ ಕೂಡಾ ಅರ್ಜೆಂಟೀನಾ ತಂಡದ ಅಭಿಮಾನಿಯಾಗಿದ್ದು, ಇದೀಗ ಅರ್ಜೆಂಟೀನಾ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯವರಿಂದ ವಿಶೇಷ ಗಿಫ್ಟ್ ಪಡೆದುಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಇತ್ತೀಚೆಗಷ್ಟೇ ಮುಕ್ತಾಯವಾದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಝಿವಾ ಧೋನಿ, ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯವರ ಅಪ್ಪಟ ಅಭಿಮಾನಿಯಾಗಿದ್ದು, ಇದೀಗ ಸ್ವತಃ ಮೆಸ್ಸಿಯವರೇ ಸಹಿ ಮಾಡಿದ ಜೆರ್ಸಿಯೊಂದನ್ನು ಧೋನಿ ಪುತ್ರಿಗೆ ಕಳಿಸಿಕೊಟ್ಟಿದ್ದಾರೆ. ಇದೀಗ ಝಿವಾ ಧೋನಿ, ಮೆಸ್ಸಿ ಕಳಿಸಿಕೊಟ್ಟ ಜೆರ್ಸಿಯನ್ನು ತೊಟ್ಟ ಫೋಟೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

ಝಿವಾ ಧೋನಿ ಧರಿಸಿರುವ ಆಟೋಗ್ರಾಫ್‌ ಜೆರ್ಸಿಯಲ್ಲಿ ಝಿವಾ, ಮೆಸ್ಸಿ ಸಹಿ ಮಾಡಿರುವ ಕಡೆ ಕೈ ಸನ್ನೆ ಮಾಡಿದ್ದಾರೆ. ಇದರಲ್ಲಿ "Para Ziva" ಎಂದು ಬರೆದು ಮೆಸ್ಸಿ ಸಹಿ ಮಾಡಿದ್ದಾರೆ. ಇದರರ್ಥ "For Ziva"(ಝಿವಾಳಿಗಾಗಿ) ಎಂದು ಬರೆದು ಮೆಸ್ಸಿ ಸಹಿ ಮಾಡಿದ್ದಾರೆ. ಈ ಫೋಟೋದೊಂದಿಗೆ " ತಂದೆಯಂತೆ ಮಗಳು" ಎಂದು ಅಡಿ ಬರಹ ಬರೆದು ಝಿವಾ ಈ ಫೋಟೋ ಶೇರ್ ಮಾಡಿದ್ದಾಳೆ.

View post on Instagram

ಮಹೇಂದ್ರ ಸಿಂಗ್ ಧೋನಿಯವರ ಫುಟ್ಬಾಲ್ ಒಡನಾಟ ಇಂದು-ನಿನ್ನೆಯದಲ್ಲ. ಕ್ರಿಕೆಟ್‌ ಆಡುವುದಕ್ಕಿಂತ ಮೊದಲು ಅವರು ಆರಂಭದಲ್ಲಿ ಫುಟ್ಬಾಲ್ ಗೋಲ್ ಕೀಪರ್ ಆಗಲು ಬಯಸಿದ್ದರು. ನಂತರ ಕ್ರಿಕೆಟ್ ಆಯ್ದುಕೊಂಡ ಧೋನಿ, ಕ್ಯಾಪ್ಟನ್ ಕೂಲ್ ಎನಿಸಿಕೊಂಡಿದ್ದು ಈಗ ಇತಿಹಾಸ. ಇದರ ಜತೆಗೆ ಕ್ರಿಕೆಟಿಗನಾಗಿದ್ದರೂ, ಧೋನಿಗೆ ಫುಟ್ಬಾಲ್ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಧೋನಿ ಕೂಡಾ ಅರ್ಜೆಂಟೀನಾ ತಂಡದ ಅಭಿಮಾನಿಯಾಗಿದ್ದಾರೆ. ಇದಷ್ಟೇ ಅಲ್ಲದೇ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಧೋನಿ ಚೆನ್ನೈಯಿನ್ ಎಫ್‌ಸಿ ತಂಡದ ಸಹ ಮಾಲೀಕರೆನಿಸಿಕೊಂಡಿದ್ದಾರೆ.

FIFA ವಿಶ್ವಕಪ್‌ ಟ್ರೋಫಿ ತಬ್ಬಿಕೊಂಡೇ ಮಲಗಿದ ಲಿಯೋನೆಲ್‌ ಮೆಸ್ಸಿ..!

ಇನ್ನು ಕೆಲವು ದಿನಗಳ ಹಿಂದಷ್ಟೇ ಲಿಯೋನೆಲ್ ಮೆಸ್ಸಿ, ತಮ್ಮ ಆಟೋಗ್ರಾಫ್‌ನ ಜೆರ್ಸಿಯೊಂದನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರಿಗೆ ಕಳಿಸಿಕೊಟ್ಟಿದ್ದರು. ಈ ಫೋಟೋವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು.

View post on Instagram

7 ಬಾರಿಯ ಬಾಲನ್ ಡಿ ಓರ್ ಪ್ರಶಸ್ತಿ ವಿಜೇತ ಲಿಯೋನೆಲ್‌ ಮೆಸ್ಸಿಯವರು, ತಮ್ಮ ದಶಕದ ಕನಸಾದ ಫಿಫಾ ವಿಶ್ವಕಪ್ ಗೆಲ್ಲುವ ಕನಸನ್ನು ಈ ಬಾರಿ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಫ್ರಾನ್ಸ್ ವಿರುದ್ದ ನಡೆದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ಪೆನಾಲ್ಟಿಶೂಟೌಟ್‌ನಲ್ಲಿ ರೋಚಕ ಜಯ ಸಾಧಿಸುವ ಮೂಲಕ ಮೂರನೇ ಬಾರಿಗೆ ಫುಟ್ಬಾಲ್ ವಿಶ್ವಕಪ್ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.