2011ರಲ್ಲಿ ಯುವಿ, 2023ರಲ್ಲಿ ಶಮಿ..! ನೋವಿನಲ್ಲೂ ದೇಶಕ್ಕಾಗಿ ಹೋರಾಡಿದ ಕೆಚ್ಚೆದೆಯ ವೇಗಿ..!
ಯುವರಾಜ್ ಸಿಂಗ್.! ಭಾರತ 2011ರ ಏಕದಿನ ವಿಶ್ವಕಪ್ ವೀರ. ಕ್ಯಾನ್ಸರ್ನಿಂದ ಬಳಲುತ್ತಿದ್ದರೂ, ತನ್ನ ದೇಶದ ಕ್ರಿಕೆಟ್ ಮಹಾಸಂಗ್ರಾಮದಲ್ಲಿ ಹೋರಾಡಿದ ಮಗಧೀರ. ಈ ಪಂಜಾಬ್ ಪುತ್ತರ್ ಇಲ್ಲದಿದ್ದರೆ, ಧೋನಿ ಸೈನ್ಯ ವಿಶ್ವಕಪ್ ಗೆಲ್ಲಲು ಸಾಧ್ಯವಾಗ್ತಿರಲಿಲ್ಲ. ಯುವಿಯ ಈ ಕೆಚ್ಚೆದೆಯ ಹೋರಾಟ, ಹಿಡಿದ ಗುರಿ ಸಾಧಿಸೋ ಛಲ ಎಂತವರಿಗೂ ಸ್ಫೂರ್ತಿ.
ಬೆಂಗಳೂರು(ಡಿ.31) ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದ್ರು. ಖತರ್ನಾಕ್ ಬೌಲಿಂಗ್ ಮೂಲಕ ಮಿಂಚಿದ್ರು. ಇದೆಲ್ಲಾ ನಿಮಗೆ ಗೊತ್ತಿರೋದೆ. ಆದ್ರೆ, ಶಮಿಯ ಈ ಸಕ್ಸಸ್ನ ಹಿಂದೆ ಎಂತಹ ರೋಚಕ ಸಂಗತಿ ಅಡಗಿದೆ ಅನ್ನೋದು ನಿಮಗೆ ಗೊತ್ತಿದ್ಯಾ..? ಹಾಗಾದ್ರೆ ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
2011ರಲ್ಲಿ ಯುವಿ, 2023ರಲ್ಲಿ ಶಮಿ..!
ಯುವರಾಜ್ ಸಿಂಗ್.! ಭಾರತ 2011ರ ಏಕದಿನ ವಿಶ್ವಕಪ್ ವೀರ. ಕ್ಯಾನ್ಸರ್ನಿಂದ ಬಳಲುತ್ತಿದ್ದರೂ, ತನ್ನ ದೇಶದ ಕ್ರಿಕೆಟ್ ಮಹಾಸಂಗ್ರಾಮದಲ್ಲಿ ಹೋರಾಡಿದ ಮಗಧೀರ. ಈ ಪಂಜಾಬ್ ಪುತ್ತರ್ ಇಲ್ಲದಿದ್ದರೆ, ಧೋನಿ ಸೈನ್ಯ ವಿಶ್ವಕಪ್ ಗೆಲ್ಲಲು ಸಾಧ್ಯವಾಗ್ತಿರಲಿಲ್ಲ. ಯುವಿಯ ಈ ಕೆಚ್ಚೆದೆಯ ಹೋರಾಟ, ಹಿಡಿದ ಗುರಿ ಸಾಧಿಸೋ ಛಲ ಎಂತವರಿಗೂ ಸ್ಫೂರ್ತಿ.
ಯೆಸ್, ಒಂದು ಸಣ್ಣ ಇಂಜುರಿ ಆದ್ರೇನೆ, ರೆಸ್ಟ್ ಬೇಕು ಅನ್ನೋ ಆಟಗಾರನ್ನ ನೋಡಿದ್ದೀವಿ. ಆದ್ರೆ, ಯುವರಾಜ್, ಕ್ಯಾನ್ಸರ್ ಅನ್ನೋ ಮಹಾಮಾರಿಯನ್ನೂ ಲೆಕ್ಕಿಸದೇ, ದೇಶಕ್ಕೆ ವಿಶ್ವಕಪ್ ಗೆದ್ದುಕೊಡುವ ಪಣ ತೊಟ್ಟಿದ್ರು. ಅದರಂತೆ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಜಬರ್ದಸ್ತ್ ಪ್ರದರ್ಶನ ನೀಡಿದ್ರು. ಬ್ಯಾಟಿಂಗ್ನಲ್ಲಿ 4 ಅರ್ಧಶತಕ 1 ಶತಕ ಸಹಿತ 362 ರನ್ಗಳಿಸಿದ್ರು. ಬೌಲಿಂಗ್ನಲ್ಲಿ 15 ವಿಕೆಟ್ ಬೇಟೆಯಾಡಿದ್ರು.
ಒಂದೇ ಸರಣಿಯಿಂದ ಟೀಂ ಇಂಡಿಯಾ ಇಬ್ಬರನ್ನು ಡ್ರಾಪ್ ಮಾಡಿದ್ದು ತಪ್ಪಾಯ್ತಾ..?
ಯುವಿಯ ಈ ಕೆಚ್ಚೆದೆಯ ಆಟವನ್ನ ಎಷ್ಟು ಕೊಂಡಾಡಿದ್ರೂ ಸಾಲಲ್ಲ. ಇನ್ನು 2011ರಲ್ಲಿ ವರ್ಷಗಳ ಹಿಂದೆ ಯುವಿ ದೇಶಕ್ಕಾಗಿ ಹೋರಾಡಿದಂತೆ, 2023ರಲ್ಲಿ ಮತ್ತೊಬ್ಬ ಆಟಗಾರ ಹೋರಾಡಿದ್ರು. ಅದು ಬೇಱರು ಅಲ್ಲ. ಮೊಹಮ್ಮದ್ ಶಮಿ.
ಇಂಜೆಕ್ಷನ್ ಪಡೆದು ವಿಶ್ವಕಪ್ ಟೂರ್ನಿ ಆಡಿದ ವೇಗಿ..!
ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ ಆಟ ಹೇಗಿತ್ತು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೆಂಕಿಚೆಂಡಿನಂತಹ ಎಸೆತಗಳ ಮೂಲಕ ವಿಶ್ವಕಪ್ ಸಮರದಲ್ಲಿ ಆರ್ಭಟಿಸಿದ್ರು. ಆ ಮೂಲಕ ತಂಡದ ಗೆಲುವಿನಲ್ಲಿ ಮಿಂಚಿದ್ರು. ಆದ್ರೆ, ಶಮಿಯ ಈ ಸಕ್ಸಸ್ನ ಹಿಂದೆ ನೋವಿನ ಕಥೆ ಇದೆ ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ.
ಅರ್ಜುನ, ಖೇಲ್ ರತ್ನವನ್ನು ರಸ್ತೆಯಲ್ಲೇ ಬಿಟ್ಟ ವಿನೇಶ್ ಫೋಗಟ್!
ಯೆಸ್, ಮೊಹಮ್ಮದ್ ಶಮಿ ದೀರ್ಘ ಕಾಲದ ಪಾದದ ನೋವಿನಿಂದ ಬಳಲುತ್ತಿದ್ದರು. ಹಾಗಾಗಿಯೇ ಆರಂಭದಲ್ಲಿ ಕೆಲ ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ರು. ಆದ್ರೆ, ಹಾರ್ದಿಕ್ ಪಾಂಡ್ಯ ಇಂಜುದ್ಮೇಲೆ ವಿಧಿಯಿಲ್ಲದೆ ಆ ನೋವನ್ನ ಲೆಕ್ಕಿಸದೇ, ಪ್ರತಿದಿನ ಇಂಜೆಕ್ಷನ್ ಪಡೆದು ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನ ಆಡಿದ್ರು ಅನ್ನೋ ರೋಚಕ ಸಂಗತಿ ಬಯಲಾಗಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಶಮಿಯ ಕಮಿಟ್ಮೆಂಟ್ಗೆ ಸಲಾಂ ಅಂತಿದ್ದಾರೆ.
ಟೂರ್ನಿಯಲ್ಲಿ 7 ಪಂದ್ಯಗಳಿಂದ 24 ವಿಕೆಟ್ ಬೇಟೆ..!
ಯೆಸ್, ವಿಶ್ವಕಪ್ನಲ್ಲಿ ಶಮಿ ಖತರ್ನಾಕ್ ಬೌಲಿಂಗ್ ಮೂಲಕ ಆರ್ಭಟಿಸಿದ್ರು. 7 ಪಂದ್ಯಗಳಿಂದ 24 ವಿಕೆಟ್ ಕಿತ್ತು, ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ರು. ದಾಖಲೆಗಳೇನೆ ಇರಲಿ, ನೋವಿನ ನಡುವೆಯೂ ತಂಡಕ್ಕಾಗಿ ಆಡಿದ ಪರಿ ನಿಜಕ್ಕೂ ಗ್ರೇಟ್. ಸದ್ಯ ಇಂಜುರಿಯಿಂದ ಬಳಲುತ್ತಿರೋ ಶಮಿ ಆದಷ್ಟು ಬೇಗ ರಿಕವರಿ ಆಗಲಿ. ಟೀಮ್ ಇಂಡಿಯಾಗೆ ಮತ್ತಷ್ಟು ಪಂದ್ಯಗಳನ್ನ ಗೆದ್ದು ಕೊಡಲಿ ಅನ್ನೋದೆ ನಮ್ಮ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್