Asianet Suvarna News

ಮಿಥಾಲಿ ರಾಜ್ ಅರ್ಧಶತಕ ವ್ಯರ್ಥ: ಇಂಗ್ಲೆಂಡ್‌ ಎದುರು ಭಾರತಕ್ಕೆ ಹೀನಾಯ ಸೋಲು

* ಇಂಗ್ಲೆಂಡ್ ಎದುದು ಮೊದಲ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್‌ ಪಡೆಗೆ ಸೋಲು

* ಭಾರತ ಎದುರು 8 ವಿಕೆಟ್‌ಗಳ ಜಯ ಸಾಧಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ

* ಮಿಥಾಲಿ ರಾಜ್‌ ಬಾರಿಸಿದ ಅರ್ಧಶತಕ ವ್ಯರ್ಥ

Mithali Raj fifty in vain as England Women Cricket Team beat India Women by 8 wickets in Bristol kvn
Author
Bristol, First Published Jun 28, 2021, 11:40 AM IST
  • Facebook
  • Twitter
  • Whatsapp

ಬ್ರಿಸ್ಟಲ್(ಜೂ.28)‌: ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 8 ವಿಕೆಟ್‌ಗಳ ಸೋಲು ಅನುಭವಿಸಿದೆ. 

ಮೊದಲು ಬ್ಯಾಟ್‌ ಮಾಡಿದ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ ಉತ್ತಮ ಆರಂಭವನ್ನು ಪಡೆಯಲು ವಿಫಲವಾಯಿತು. ಮೊದಲ 10 ಓವರ್‌ಗಳಲ್ಲಿ ತಂಡ 27 ರನ್‌ ಗಳಿಸುವಷ್ಟರಲ್ಲೇ ಆರಂಭಿಕ ಬ್ಯಾಟರ್‌ಗಳಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಪೆವಿಲಿಯನ್ ಸೇರಿದ್ದರು. ಮಧ್ಯಮ ಕ್ರಮಾಂಕದಲ್ಲಿ ಮಿಥಾಲಿ ರಾಜ್‌ ಬಾರಿಸಿದ ಸಮಯೋಚಿತ ಅರ್ಧಶತಕ(72 ರನ್‌ 108 ಎಸೆತ)ದ ನೆರವಿನಿಂದ 50 ಓವರಲ್ಲಿ 8 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತು. 

ಶ್ರೀಲಂಕಾಗಿಂದು ಧವನ್ ನೇತೃತ್ವದ ಟೀಂ ಇಂಡಿಯಾ ಪ್ರಯಾಣ

ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 34.5 ಓವರಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಟ್ಯಾಮಿ ಬ್ಯುಯೊಮೊಂಟ್‌ ಅಜೇಯ 87 ಹಾಗೂ ನಥಾಲಿ ಶೀವರ್‌ ಅಜೇಯ 74 ರನ್‌ ಗಳಿಸಿದರು. 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ 1-0 ಮುನ್ನಡೆ ಸಾಧಿಸಿತು.

ಭಾರತದ ಪರ ಮೂರೂ ಮಾದರಿಗೆ ಕಾಲಿಟ್ಟ ಕಿರಿಯ ಕ್ರಿಕೆಟರ್‌ ಶಫಾಲಿ!

ಬ್ರಿಸ್ಟಲ್‌: ಇಂಗ್ಲೆಂಡ್‌ ವಿರುದ್ಧ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟ ಶಫಾಲಿ ವರ್ಮಾ, ಮೂರೂ ಮಾದರಿಯ ಕ್ರಿಕೆಟ್‌ ಆಡಿದ ಭಾರತದ ಅತಿಕಿರಿಯ ಕ್ರಿಕೆಟರ್‌ ಎನ್ನುವ ದಾಖಲೆ ಬರೆದಿದ್ದಾರೆ. ಶಫಾಲಿ (17 ವರ್ಷ 150 ದಿನ)ಗೂ ಮೊದಲು ಈ ದಾಖಲೆಯನ್ನು ಸ್ಮೃತಿ ಮಂಧನಾ ಹೊಂದಿದ್ದರು. ಸ್ಮೃತಿ, ಇಶಾಂತ್‌ ಶರ್ಮಾ ದಾಖಲೆಯನ್ನು ಮುರಿದಿದ್ದರು. ಒಟ್ಟಾರೆಯಾಗಿ ಮೂರೂ ಮಾದರಿ ಆಡಿದ ಅತಿಕಿರಿಯ ಆಟಗಾರ ಎನ್ನುವ ದಾಖಲೆ ಆಫ್ಘಾನಿಸ್ತಾನದ ಮುಜೀಬ್‌ ಉರ್‌ ರಹಮಾನ್‌ (17 ವರ್ಷ 78 ದಿನ) ಹೆಸರಿನಲ್ಲಿದೆ.

Follow Us:
Download App:
  • android
  • ios