Asianet Suvarna News Asianet Suvarna News

ಬಿಗ್‌ಬ್ಯಾಶ್‌ನಲ್ಲಿ ವಿವಾದಾತ್ಮಕ ಕ್ಯಾಚ್‌! ಇದು ಔಟ್/ನಾಟೌಟ್? ವಿಡಿಯೋ ವೈರಲ್‌

ವಿವಾದಾತ್ಮಕ ಕ್ಯಾಚ್‌ಗೆ ಸಾಕ್ಷಿಯಾದ ಬಿಗ್‌ಬ್ಯಾಶ್ ಲೀಗ್
ಕ್ಷೇತ್ರರಕ್ಷಕ ಮೈಕಲ್‌ ನೆಸರ್‌ ಹಿಡಿದ ಕ್ಯಾಚ್ ಟಾಕ್ ಆಪ್‌ ದಿ ಟೌನ್
ಬ್ರಿಸ್ಬೇನ್ ಹೀಟ್‌ ಹಾಗೂ ಸಿಡ್ನಿ ಸಿಕ್ಸರ್ಸ್‌ ನಡುವಿನ ಪಂದ್ಯದ ಕ್ಯಾಚ್ ವೈರಲ್

Michael Neser brilliant catch in Big Bash League leaves fans and experts perplexed video goes viral kvn
Author
First Published Jan 2, 2023, 12:01 PM IST

ಬ್ರಿಸ್ಬೇನ್‌(ಜ.02): ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಟಿ20 ಲೀಗ್‌ನಲ್ಲಿ ಭಾನುವಾರ ಬ್ರಿಸ್ಬೇನ್‌ ಹೀಟ್‌ ಹಾಗೂ ಸಿಡ್ನಿ ಸಿಕ್ಸರ್‌ ನಡುವಿನ ಪಂದ್ಯ ವಿವಾದಾತ್ಮಕ ಕ್ಯಾಚ್‌ಗೆ ಸಾಕ್ಷಿಯಾಯಿತು. ಮಾರ್ಕ್ ಸ್ಟಿಕೀಟೆ ಎಸೆತದಲ್ಲಿ ಸಿಡ್ನಿಯ ಜೋರ್ಡನ್‌ ಸಿಲ್ಕ್‌ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಇದ್ದ ಕ್ಷೇತ್ರರಕ್ಷಕ ಮೈಕಲ್‌ ನೆಸರ್‌ ಹಿಡಿಯುವ ಯತ್ನ ನಡೆಸಿದರು. ಮೊದಲು ಬೌಂಡರಿ ಗೆರೆ ಆಚೆ ಚೆಂಡಿನ ಸಂಪರ್ಕಕ್ಕೆ ಬಂದ ನೆಸರ್‌, ಚೆಂಡನ್ನು ಗಾಳಿಯಲ್ಲಿ ಎಸೆದು ಬೌಂಡರಿ ಒಳಗೆ ಕಾಲಿಟ್ಟರು. ಬೌಂಡರಿ ಒಳಗೇ ಮತ್ತೆ ನೆಗೆದು ಚೆಂಡನ್ನು ಹೊರಕ್ಕೆ ಎಸೆದ ನೆಸರ್‌, ಗೆರೆಯಿಂದ ಒಳಬಂದು ಕ್ಯಾಚ್‌ ಪೂರ್ಣಗೊಳಿಸಿದರು. 

ಬಿಗ್‌ಬ್ಯಾಶ್‌ ಲೀಗ್ ಟೂರ್ನಿಯಲ್ಲಿ ಬ್ರಿಸ್ಬೇನ್ ಹೀಟ್‌ ಹಾಗೂ ಸಿಡ್ನಿ ಸಿಕ್ಸರ್ಸ್‌ ನಡುವಿನ ಪಂದ್ಯವು ಹೈಸ್ಕೋರಿಂಗ್ ಪಂದ್ಯಕ್ಕೆ ಸಾಕ್ಷಿಯಾಯಿತು. ಮೊದಲು ಬ್ಯಾಟ್‌ ಮಾಡಿದ ಬ್ರಿಸ್ಬೇನ್ ಹೀಟ್ ತಂಡವು 5 ವಿಕೆಟ್ ಕಳೆದುಕೊಂಡು 224 ರನ್‌ ಬಾರಿಸಿತ್ತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ ತಂಡವು ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗೆಲುವಿನತ್ತ ಮುಖ ಮಾಡಿತ್ತು. ಆದರೆ 19ನೇ ಓವರ್‌ನ ಎರಡನೇ ಎಸೆತದಲ್ಲಿ ಈ ವಿವಾದಾತ್ಮಕ ಕ್ಯಾಚ್‌ಗೆ ಜೋರ್ಡನ್ ಸಿಲ್ಕ್‌ ಪೆವಿಲಿಯನ್ ಸೇರಿದರು. ಜೋರ್ಡನ್‌ ಸಿಲ್ಕ್ ವಿಕೆಟ್ ಒಪ್ಪಿಸುವ ಮುನ್ನ ಕೇವಲ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 41 ರನ್ ಬಾರಿಸಿದ್ದರು. ಅಂತಿಮವಾಗಿ ಸಿಡ್ನಿ ಸಿಕ್ಸರ್ಸ್‌ ತಂಡವು 209 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 15 ರನ್‌ಗಳ ಸೋಲು ಅನುಭವಿಸಿತು.

ಟೀಂ ಇಂಡಿಯಾಗೆ ಆಯ್ಕೆಗೆ ಯೋ-ಯೋ ಟೆಸ್ಟ್‌ ಕಡ್ಡಾಯ..!

ಐಸಿಸಿ ನಿಯಮದ ಪ್ರಕಾರ ಈ ಕ್ಯಾಚ್‌ ನ್ಯಾಯಸಮ್ಮತ. ಆದರೆ ಸಾಮಾಜಿಕ ತಾಣಗಳಲ್ಲಿ ಹಲವು ಮಾಜಿ, ಹಾಲಿ ಆಟಗಾರರು ಸೇರಿದಂತೆ ಸಾವಿರಾರು ಅಭಿಮಾನಿಗಳು ಈ ನಿಯಮವನ್ನು ಬದಲಿಸುವಂತೆ ಪ್ರತಿಕ್ರಿಯಿಸಿದ್ದಾರೆ. ಈ ಕ್ಯಾಚ್‌ನ ವಿಡಿಯೋ ವೈರಲ್‌ ಆಗಿದೆ.

ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಕೇಟ್ ಕ್ರಾಸ್, ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಹೇಗೆ ಔಟ್ ಎಂದು ತೀರ್ಮಾನ ನೀಡಿದರು, ನನಗಂತೂ ಅರ್ಥವಾಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆಡಂ ಗಿಲ್‌ಕ್ರಿಸ್ಟ್‌ ಕೂಡಾ ಪಂದ್ಯದ ಕಾಮೆಂಟ್ರಿ ಮಾಡುವ ವೇಳೆ ಅಂಪೈರ್ ಔಟ್ ನೀಡಿದ್ದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ನಂತರ ಈ ರೀತಿಯ ಕ್ಯಾಚ್ ನಿಯಮಬದ್ದವಾದದ್ದು ಎಂದು ತಿಳಿದ ಬಳಿಕ ಅಂಪೈರ್ ನಿಯಮವನ್ನು ಒಪ್ಪಿಕೊಂಡಿದ್ದಾರೆ. 

ಅಷ್ಟಕ್ಕೂ ನಿಯಮವೇನು ಹೇಳುತ್ತದೆ..?

ಕ್ರಿಕೆಟ್ ನೀತಿ-ನಿಯಮಗಳನ್ನು ರೂಪಿಸುವ ಮೆರಿಲ್ಬೋನ್‌ ಕ್ರಿಕೆಟ್ ಕ್ಲಬ್(ಎಂಸಿಸಿ) ನಿಯಮ 19.5.2 ಪ್ರಕಾರ, " ಕ್ಷೇತ್ರರಕ್ಷಕನೊಬ್ಬ ಬೌಂಡರಿ ಗೆರೆ ದಾಟುವ ಮುನ್ನ ಕ್ಯಾಚ್ ಹಿಡಿದು, ನಂತರ ಬೌಂಡರಿಯಾಚೆಗೆ ನೆಲಕ್ಕೆ ತಾಗದಂತೆ ಕ್ಯಾಚ್‌ ಸಂಪೂರ್ಣಗೊಳಿಸದೇ, ಮೈದಾನದೊಳಗೆ ಬಂದು ಕ್ಯಾಚ್ ಪೂರ್ಣಗೊಳಿಸಿದರೇ  ಅದು ಔಟ್ ಎಂದು ತೀರ್ಮಾನ ನೀಡಲು ಅವಕಾಶವಿದೆ."

Follow Us:
Download App:
  • android
  • ios