ನವ​ದೆ​ಹ​ಲಿ(ಜೂ.12): ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬಾರದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ತಂಡ ಕೈಗೊ​ಳ್ಳ​ಬೇ​ಕಿದ್ದ ಶ್ರೀಲಂಕಾ ಹಾಗೂ ಜಿಂಬಾಬ್ವೆ ಪ್ರವಾಸವನ್ನು ರದ್ದು ಮಾಡಿದೆ.

ಈ ಹಿಂದಿನ ನಿಗದಿಯಂತೆ ಟೀಂ ಇಂಡಿಯಾ ಜೂನ್ 24 ರಿಂದ ಲಂಕಾ ವಿರುದ್ಧ 3 ಏಕ​ದಿನ ಹಾಗೂ 3 ಪಂದ್ಯ​ಗಳ ಟಿ20 ಸರ​ಣಿ​ಯಲ್ಲಿ ಪಾಲ್ಗೊ​ಳ್ಳ​ಬೇ​ಕಿತ್ತು. ಇದಾದ ಬಳಿಕ ಆಗಸ್ಟ್ 22 ರಿಂದ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿತ್ತು. ‘ಸ​ದ್ಯದ ಪರಿ​ಸ್ಥಿ​ತಿ​ಯಲ್ಲಿ ಪ್ರವಾಸ ಕೈಗೊ​ಳ್ಳಲು ಸಾಧ್ಯ​ವಿಲ್ಲ. ಮುಂದಿನ ದಿನ​ಗ​ಳಲ್ಲಿ ಸರಣಿ ಆಡಲು ಬದ್ಧ​ರಿದ್ದೇವೆ’ ಎಂದು ಬಿಸಿ​ಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿ​ದ್ದಾರೆ.

ಕೊರೋನಾ ಪರಿಸ್ಥಿತಿ ಹತೋಟಿಗೆ ಬಂದರಷ್ಟೇ ದೇಸಿ ಹಾಗೂ ಅಂತಾರಾಷ್ಟ್ರೀಯ ಟೂರ್ನಿ ಆಯೋಜಿಸುವ ಕುರಿತಂತೆ ಬಿಸಿಸಿಐ ತೀರ್ಮಾನ ತೆಗೆದುಕೊಳ್ಳಲಿದೆ. ಪರಿಸ್ಥಿತಿ ಬದಲಾಗುವುದರ ಕುರಿತಂತೆ ಬಿಸಿಸಿಐ ಆಶಾವಾದವನ್ನು ಹೊಂದಿದೆ ಎಂದು ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.

ಈ ವರ್ಷ ಖಾಲಿ ಮೈದಾನದಲ್ಲಾದರೂ ಐಪಿಎಲ್ ನಡೆಸಿಯೇ ಸಿದ್ಧ: ಗಂಗೂಲಿ

ಕೊರೋನಾ ವೈರಸ್‌ನಿಂದಾಗಿ ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಅರ್ಧದಲ್ಲೇ ರದ್ದಾಗಿತ್ತು. ಮಾರ್ಚ್‌ 12ರಂದು ನಡೆಯಬೇಕಿದ್ದ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದಾಗಿ ಎರಡನೇ ಪಂದ್ಯಕ್ಕೂ ಮುನ್ನ ಕೊರೋನಾ ಭೀತಿಯಿಂದಾಗಿ ಸರಣಿ ಅರ್ಧಕ್ಕೆ ಮೊಟಕುಗೊಂಡಿತ್ತು. ಇದಾದ ಬಳಿಕ ದೇಶದಲ್ಲಿ ಮಾರ್ಚ್‌ನಿಂದ ಜೂನ್‌ವರೆಗೂ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ.

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"