ಢಾಕಾ(ಫೆ.05): ಮೆಹದಿ ಹಸನ್‌ (103) ಬಾರಿಸಿದ ಚೊಚ್ಚಲ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ, ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 430 ರನ್‌ಗಳ ದೊಡ್ಡ ಮೊತ್ತ ದಾಖಲಿಸಿದೆ. 

ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ವಿಂಡೀಸ್‌ ಸದ್ಯ 39 ಓವರ್‌ ಮುಕ್ತಾಯದ ವೇಳೆಗೆ 3 ವಿಕೆಟ್‌ ಕಳೆದುಕೊಂಡು 122 ರನ್‌ ಬಾರಿಸಿದ್ದು, ಇನ್ನೂ 308 ರನ್‌ಗಳ ಹಿನ್ನಡೆಯಲ್ಲಿದೆ. ವೆಸ್ಟ್ ಇಂಡೀಸ್ ಪರ ಕ್ರೆಗ್ ಬ್ರಾಥ್‌ವೇಟ್‌ ಅಜೇಯ 70 ರನ್‌ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದರೆ, ಕೈಲ್‌ ಮೆರೀಸ್ 25  ರನ್ ಬಾರಿಸಿ ಉತ್ತಮ ಸಾಥ್‌ ನೀಡಿದ್ದಾರೆ.

ವಿಂಡೀಸ್‌ ವಿರುದ್ಧ ಬಾಂಗ್ಲಾದೇಶ ಗೌರವಾನ್ವಿತ ಮೊತ್ತ

ಸ್ಕೋರ್‌: ಬಾಂಗ್ಲಾ 430/10, 
ವಿಂಡೀಸ್‌ 75/2

ಪಾಕಿಸ್ತಾನ-ದ.ಆಫ್ರಿಕಾ 2ನೇ ಟೆಸ್ಟ್‌ಗೆ ಮಳೆ ಕಾಟ

ರಾವಲ್ಪಿಂಡಿ: ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಗುರುವಾರ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಪಾಕಿಸ್ತಾನ 22 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತು.  ನಾಯಕ ಬಾಬರ್‌ ಅಜಾಂ (77), ಫವಾದ್‌ ಆಲಂ (42) ಪಾಕ್‌ಗೆ ಆಸರೆಯಾದರು. ದಿನದಂತ್ಯಕ್ಕೆ ಪಾಕಿಸ್ತಾನ 3 ವಿಕೆಟ್‌ಗೆ 145 ರನ್‌ಗಳಿಸಿತು.

ಸ್ಕೋರ್‌: ಪಾಕಿಸ್ತಾನ 145/3 (ಮೊದಲ ದಿನದಂತ್ಯಕ್ಕೆ)