ಭಾರತದ ಮೇಲೆ ಕಿಡಿಕಾರುವ ಪಾಕ್ ಆಟಗಾರನ ಪ್ರೀತಿ ಬಲೆಗೆ ಬಿದ್ದ ನಮ್ಮ ದೇಶದ ಪ್ಲೈಟ್ ಇಂಜಿನಿಯರ್..!
ಇತ್ತೀಚೆಗಷ್ಟೇ ಬಿಸಿಸಿಐ ಮೇಲೆ ಕಿಡಿಕಾರಿದ್ದ ಪಾಕಿಸ್ತಾನ ಕ್ರಿಕೆಟಿಗ, ಮಾರಕ ವೇಗಿ ಹಸನ್ ಅಲಿ ಪತ್ನಿ ಭಾರತೀಯ ಮೂಲದವರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಯಾರೀಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ
ಬೆಂಗಳೂರು: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಈ ಬಾರಿ ಸಂಪೂರ್ಣ ಟೂರ್ನಿಯನ್ನು ಪಾಕಿಸ್ತಾನದಲ್ಲೇ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಟ್ಟು ಹಿಡಿದಿದೆ. ಇನ್ನು ಭದ್ರತೆ ಹಾಗೂ ರಾಜತಾಂತ್ರಿಕ ಕಾರಣಗಳಿಂದಾಗಿ ಬಿಸಿಸಿಐ ಭಾರತ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಲು ನಿರಾಕರಿಸುತ್ತಲೇ ಬಂದಿದೆ. ಇದೆಲ್ಲದರ ನಡುವೆ ಪಾಕಿಸ್ತಾನದ ಅನುಭವಿ ವೇಗಿ ಹಸನ್ ಅಲಿ, ಬಿಸಿಸಿಐ ಹಾಗೂ ಭಾರತದ ರಾಜಕಾರಣದ ಬಗ್ಗೆ ಕಿಡಿಕಾರಿದ್ದು, ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಬರಬೇಕು. ಇಲ್ಲದಿದ್ದರೇ ಅವರನ್ನು ಬಿಟ್ಟು ನಾವು ಟೂರ್ನಿ ಆಯೋಜಿಸಲಿದ್ದೇವೆ ಎನ್ನುವ ಬೆದರಿಕೆಯೊಡ್ಡಿದ್ದಾರೆ.
ಸಮಯ ಸಿಕ್ಕಾಗಲೆಲ್ಲಾ ಟೀಂ ಇಂಡಿಯಾ ಹಾಗೂ ಭಾರತದ ಮೇಲೆ ಸದಾ ಕಿಡಿಕಾರುತ್ತಲೇ ಬಂದಿರುವ ಹಸನ್ ಅಲಿ ಮದುವೆಯಾಗಿದ್ದು ಭಾರತದ ಸುಂದರಿಯನ್ನು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಹಸನ್ ಅಲಿ ಪತ್ನಿ ಭಾರತೀಯ ಮೂಲದ ಶಾಮಿಯಾ ಅರ್ಝೂ.
ಯಾರೀಕೆ ಹಸನ್ ಅಲಿ ಪತ್ನಿ ಶಾಮಿಯಾ ಅರ್ಝೂ?
ಪಾಕಿಸ್ತಾನ ಮಧ್ಯಮ ವೇಗದ ಬೌಲರ್ ಹಸನ್ ಅಲಿ ಪತ್ನಿ ಶಾಮಿಯಾ ಅರ್ಝೂ ಓರ್ವ ಪ್ಲೈಟ್ ಇಂಜಿನಿಯರ್ ಆಗಿದ್ದು, ಎಮಿರಾಯಿಟ್ಸ್ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 15, 1995ರಲ್ಲಿ ಹರ್ಯಾಣ ವೀವತ್ ಜಿಲ್ಲೆಯಲ್ಲಿ ಜನಿಸಿದ ಶಾಮಿಯಾ ಅರ್ಝೂ ಬಿ.ಟೆಕ್ ಪದವೀಧರೆ ಕೂಡಾ ಹೌದು. ಭಾರತದ ಫರೀದಾಬಾದ್‌ನಲ್ಲಿರುವ ಮಾನವ್ ರಚನಾ ಯೂನಿವರ್ಸಿಟಿಯಲ್ಲಿ ಶಾಮಿಯಾ ಅರ್ಝೂ ಏರೋನಾಟಿಕ್ ಇಂಜಿನಿಯರ್‌ನಲ್ಲಿ ಪದವಿ ಪಡೆದಿದ್ದಾರೆ. ಹಸನ್ ಅಲಿ ಪತ್ನಿ ಶಾಮಿಯಾ ಅರ್ಝೂ ನೋಡುವುದಕ್ಕೆ ಯಾವ ಬಾಲಿವುಡ್ ಹೀರೋಯಿನ್‌ಗೂ ಕಡಿಮೆಯಿಲ್ಲ.
ಜೆಟ್ ಏರ್‌ವೇಸ್‌ನಲ್ಲಿ ಗಗನ ಸಖಿಯಾಗಿ ವೃತ್ತಿಬದುಕು ಆರಂಭಿಸಿದ ಶಾಮಿಯಾ ಅರ್ಝೂ, ಇದಾದ ಬಳಿಕ ಎಮಿರಾಯಿಟ್ಸ್ ಏರ್‌ಲೈನ್ಸ್‌ನಲ್ಲಿ ಪ್ಲೈಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಲು ದುಬೈಗೆ ಹಾರಿದರು. ಅಲ್ಲಿ ಅಸಾಧಾರಣ ಅನುಭವ ಸಂಪಾದಿಸಿದ ಶಾಮಿಯಾ ಅರ್ಝೂ, ಗಗನಯಾನ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.
ಶಾಮಿಯಾ ಅರ್ಝೂ ದುಬೈನಲ್ಲಿ ನೆಲೆನಿಂತರೆ, ಆಕೆಯ ಕುಟುಂಬ ಗುರುಗ್ರಾಮದಲ್ಲಿ ವಾಸವಾಗಿದ್ದರು. ಮ್ಯೂಚುವಲ್ ಫ್ರೆಂಡ್ ಮೂಲಕ 2019ರಲ್ಲಿ ಹಸನ್ ಅಲಿಗೆ ಶಾಮಿಯಾ ಅರ್ಝೂ ಪರಿಚಯವಾಯಿತು. ಎರಡು ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದರು. ಈ ಜೋಡಿಗೆ 2021ರಲ್ಲಿ ಮುದ್ದಾದ ಹೆಣ್ಣು ಮಗು ಜನಿಸಿತು.