ಕೊರೋನಾ ಆತಂಕದ ನಡುವೆಯೇ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸಿಕ್ತು ಮತ್ತೊಂದು ಗುಡ್ ನ್ಯೂಸ್
ಕೊರೋನಾ ಆತಂಕದ ನಡುವೆಯೇ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ವಲಯದಿಂದ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಸಿಡ್ನಿ: ಕೊರೋನಾ ನಡುವೆ ಆಯೋಜಿಸಿರುವ ಭಾರತ ಮತ್ತು ಆಸ್ಪ್ರೇಲಿಯಾ ನಡುವಿನ ‘ಬಾಕ್ಸಿಂಗ್ ಡೇ’ ಟೆಸ್ಟ್ ಸರಣಿಯ ಪಂದ್ಯ ವೀಕ್ಷಣೆಗೆ 25,000 ಮಂದಿಗೆ ಅವಕಾಶ ಮಾಡಿಕೊಡಲು ಮೆಲ್ಬರ್ನ್ ಕ್ರಿಕೆಟ್ ಆಡಳಿತ ಮಂಡಳಿ (ಎಂಸಿಜಿ) ನಿರ್ಧರಿಸಿದೆ.
ನವೆಂಬರ್ 27ರಿಂದ ಜನವರಿ 19ರ ನಡುವೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ 4 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮೆಲ್ಬರ್ನ್ ಅಂಗಣದಲ್ಲಿ ಒಂದು ಲಕ್ಷ ಮಂದಿ ಏಕಕಾಲದಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಕಾಲು ಭಾಗ ಅಂದರೆ ಶೇ.25ರಷ್ಟು ಮಂದಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರಾಹುಲ್‌ಗೆ ಉಪನಾಯಕ ಪಟ್ಟ!
ಇದರಿಂದ ಸಾಮಾಜಿಕ ಅಂತರಕ್ಕೂ ಸಹಕಾರಿ ಆಗಲಿದೆ. ಕೊರೋನಾ ನಿಯಮಗಳನ್ನೆಲ್ಲಾ ಅನುಸರಿಸಲಾಗುತ್ತದೆ ಎಂದು ಎಂಸಿಜಿ ತಿಳಿಸಿದೆ. ಭಾರತ ತಂಡ ಈ ಪ್ರವಾಸದ ವೇಳೆ 4 ಟೆಸ್ಟ್ ಹಾಗೂ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನಾಡಲಿದೆ.
ರಾಹುಲ್ ಟೆಸ್ಟ್ ಆಯ್ಕೆ ಸಮರ್ಥಿಸಿದ ಶ್ರೀಕಾಂತ್
ಚೆನ್ನೈ(ಅ.29): ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಟೆಸ್ಟ್ ತಂಡಕ್ಕೆ ಕೆ.ಎಲ್. ರಾಹುಲ್ ಆಯ್ಕೆಯನ್ನು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಸಂಜಯ್ ಮಂಜ್ರೇಕರ್ ಬಾಂಬೆ ಮೀರಿ ಯೋಚಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಹುಲ್ ಟೆಸ್ಟ್ ತಂಡಕ್ಕೆ ಪರಿಗಣಿಸಿ, ರಣಜಿ ಆಟಗಾರರನ್ನು ಆಯ್ಕೆ ಮಾಡದ್ದರಿಂದ ಮಂಜ್ರೇಕರ್ ಆಯ್ಕೆ ಸಮಿತಿ ವಿರುದ್ಧ ಟೀಕೆ ಮಾಡಿದ್ದರು. ಐಪಿಎಲ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ರಾಹುಲ್ ಆಯ್ಕೆ ಮಾಡಿದ್ದು ಸರಿಯಲ್ಲ ಎಂದಿದ್ದರು. ಮಂಜ್ರೇಕರ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ರಾಹುಲ್ ಆಸೀಸ್ ವಿರುದ್ಧದ ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ರಾಹುಲ್ ವೇಗದ ಬೌಲಿಂಗ್‌ನ ಎದುರಿಸುವ ವಿಚಾರದಲ್ಲಿ ಉತ್ತಮ ಆಟಗಾರ ಎಂದು ಶ್ರೀಕಾಂತ್ ಹೇಳಿದ್ದಾರೆ.