Asianet Suvarna News Asianet Suvarna News

ಮಯಾಂಕ್ ಅಗರ್‌ವಾಲ್ ಭರ್ಜರಿ ಶತಕ: ಪಂಜಾಬ್ ಎದುರು ಕರ್ನಾಟಕ ಬಿಗಿ ಹಿಡಿತ

ರಾಜ್ಯದ ವೇಗಿಗಳ ದಾಳಿಗೆ ತತ್ತರಿಸಿದ್ದ ಗುಜರಾತ್‌, ಮೊದಲ ದಿನವೇ 264ಕ್ಕೆ ಆಲೌಟಾಗಿತ್ತು. ಶನಿವಾರ ಇನ್ನಿಂಗ್ಸ್‌ ಶುರು ಮಾಡಿದ ಕರ್ನಾಟಕಕ್ಕೆ ಭರ್ಜರಿ ಆರಂಭ ಲಭಿಸಿತು. ಮೊದಲ ವಿಕೆಟ್‌ಗೆ ಮಯಾಂಕ್‌ ಅಗರ್‌ವಾಲ್ ಹಾಗೂ ಆರ್‌.ಸಮರ್ಥ್‌ 172 ರನ್‌ ಜೊತೆಯಾಟವಾಡಿದರು.

Mayanak Agarwal Century powers Karnataka driver seat against Gujarat kvn
Author
First Published Jan 14, 2024, 9:42 AM IST | Last Updated Jan 14, 2024, 9:42 AM IST

ಅಹಮದಾಬಾದ್‌(ಜ.14): ನಿರ್ಣಾಯಕ ಸಮಯದಲ್ಲಿ ಮತ್ತೆ ಫಾರ್ಮ್‌ಗೆ ಮರಳಿರುವ ಮಯಾಂಕ್‌ ಅಗರ್‌ವಾಲ್‌, ಭರ್ಜರಿ ಶತಕದೊಂದಿಗೆ ಕರ್ನಾಟಕಕ್ಕೆ ಆಸರೆಯಾಗಿದ್ದಾರೆ. ಗುಜರಾತ್‌ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ 2ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 328 ರನ್‌ ಕಲೆಹಾಕಿದೆ. ತಂಡ ಸದ್ಯ 64 ರನ್‌ ಮುನ್ನಡೆಯಲ್ಲಿದ್ದು, ಬೃಹತ್‌ ಮೊತ್ತದ ನಿರೀಕ್ಷೆಯಲ್ಲಿದೆ.

ರಾಜ್ಯದ ವೇಗಿಗಳ ದಾಳಿಗೆ ತತ್ತರಿಸಿದ್ದ ಗುಜರಾತ್‌, ಮೊದಲ ದಿನವೇ 264ಕ್ಕೆ ಆಲೌಟಾಗಿತ್ತು. ಶನಿವಾರ ಇನ್ನಿಂಗ್ಸ್‌ ಶುರು ಮಾಡಿದ ಕರ್ನಾಟಕಕ್ಕೆ ಭರ್ಜರಿ ಆರಂಭ ಲಭಿಸಿತು. ಮೊದಲ ವಿಕೆಟ್‌ಗೆ ಮಯಾಂಕ್‌ ಅಗರ್‌ವಾಲ್ ಹಾಗೂ ಆರ್‌.ಸಮರ್ಥ್‌ 172 ರನ್‌ ಜೊತೆಯಾಟವಾಡಿದರು. ಸಮರ್ಥ್‌ 60 ರನ್‌ಗಳಿಸಿದ ಔಟಾದರೆ, ಗುಜರಾತ್‌ ಬೌಲರ್‌ಗಳನ್ನು ಚೆಂಡಾಡಿದ ಮಯಾಂಕ್‌ 16ನೇ ಪ್ರಥಮ ದರ್ಜೆ ಶತಕ ಪೂರ್ಣಗೊಳಿಸಿದರು. ಅವರು 124 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್‌ನೊಂದಿಗೆ 109 ರನ್‌ ಸಿಡಿಸಿ ನಿರ್ಗಮಿಸಿದರು. ಇವರಿಬ್ಬರು ಒಟ್ಟೊಟ್ಟಿಗೇ ಪೆವಿಲಿಯನ್ ಸೇರಿದರು.

ಸಿಕ್ಕ ಅವಕಾಶಗಳನ್ನ ಬಳಸಿಕೊಳ್ತಿಲ್ವಾ ತಿಲಕ್ ವರ್ಮಾ? ಕೊಹ್ಲಿ ಕಮ್‌ಬ್ಯಾಕ್, ತಿಲಕ್ ಕಿಕೌಟ್..!

ಬಳಿಕ ಕ್ರೀಸ್‌ಗೆ ಬಂದ ದೇವದತ್‌ ಪಡಿಕ್ಕಲ್‌ 42, ಉಪನಾಯಕ ನಿಕಿನ್‌ ಜೋಸ್‌ 22 ರನ್ ಕೊಡುಗೆ ನೀಡಿದರು. ಸದ್ಯ ಮನೀಶ್‌ ಪಾಂಡೆ 97 ಎಸೆತಗಳಲ್ಲಿ 56 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದು, ಪಾದಾರ್ಪಣಾ ಪಂದ್ಯವಾಡುತ್ತಿರುವ ಸುಜತ್‌ ಸತೇರಿ(24) ಕೂಡಾ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: 
ಗುಜರಾತ್‌ 264/10, ಕರ್ನಾಟಕ 328/5 (2ನೇ ದಿನದಂತ್ಯಕ್ಕೆ)
(ಮಯಾಂಕ್‌ 109, ಸಮರ್ಥ್‌ 60, ಮನೀಶ್‌ 568, ಚಿಂತನ್ ಗಾಜ 2-43)

ಟಿ20: ಪಾಕಿಸ್ತಾನ ವಿರುದ್ಧ ಕಿವೀಸ್‌ಗೆ 46 ರನ್‌ ಜಯ

ಅಕ್ಲೆಂಡ್‌(ನ್ಯೂಜಿಲೆಂಡ್‌): ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಡ್ಯಾರಿಲ್‌ ಮಿಚೆಲ್‌, ಕೇನ್‌ ವಿಲಿಯಮ್ಸನ್‌ರ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್‌ 46 ರನ್‌ ಜಯಗಳಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಾತಿಗೆ ಸೊಪ್ಪು ಹಾಕದ ಇಶಾನ್ ಕಿಶನ್..!​

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 8 ವಿಕೆಟ್‌ಗೆ 226 ರನ್‌ ಗಳಿಸಿತು. ವಿಲಿಯಮ್ಸನ್‌ 2 ಜೀವದಾನ ಪಡೆದು 57 ರನ್‌ ಗಳಿಸಿದರೆ, ಮಿಚೆಲ್‌ 27 ಎಸೆತಗಳಲ್ಲಿ 61 ರನ್‌ ಕಾಣಿಕೆ ನೀಡಿದರು. ದೊಡ್ಡ ಗುರಿ ಬೆನ್ನತ್ತಿದ ಪಾಕ್‌ 18 ಓವರಲ್ಲಿ 180ಕ್ಕೆ ಆಲೌಟಾಯಿತು. ಸೈಮ್‌ ಅಯೂಬ್‌ 8 ಎಸೆತಗಳಲ್ಲಿ 27 ರನ್‌ ಗಳಿಸಿದರೆ, ಬಾಬರ್‌ ಆಜಂ(57) ಹೋರಾಟ ವ್ಯರ್ಥವಾಯಿತು.25 ರನ್‌ಗೆ 4 ವಿಕೆಟ್‌ ಕಿತ್ತ ಸೌಥಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ ಗಳಿದ ಮೊದಲ ಬೌಲರ್‌ ಆಗಿ ಹೊರಹೊಮ್ಮಿದರು.
 

Latest Videos
Follow Us:
Download App:
  • android
  • ios