Asianet Suvarna News Asianet Suvarna News

ಇಂದಿನಿಂದ ಮೈಸೂರಿನಲ್ಲಿ ಮಹಾರಾಜ ಟ್ರೋಫಿ ಟಿ20

ಮಹಾರಾಜ ಟಿ20 ಟೂರ್ನಿ ಟ್ರೋಫಿ ಭಾನುವಾರ ಮೈಸೂರಿನಲ್ಲಿ ಆರಂಭ
ಮೊದಲ ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ ಹಾಗೂ ಹುಬ್ಬಳ್ಳಿ ಟೈಗ​ರ್‍ಸ್ ತಂಡಗಳು ಸೆಣಸಾಟ
ರಾಜವಂಶಸ್ಥೆ ಪ್ರಮೋದಾ ದೇವಿ ಟೂರ್ನಿಗೆ ಚಾಲನೆ 

Maharani Pramoda Devi to inaugurate Maharaja T20 Trophy kvn
Author
First Published Aug 7, 2022, 7:57 AM IST

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟಿ20 ಟೂರ್ನಿ ಟ್ರೋಫಿ ಭಾನುವಾರ ಮೈಸೂರಿನಲ್ಲಿ ಆರಂಭವಾಗಲಿದ್ದು, ರಾಜವಂಶಸ್ಥೆ ಪ್ರಮೋದಾ ದೇವಿ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಮೊದಲ ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ ಹಾಗೂ ಹುಬ್ಬಳ್ಳಿ ಟೈಗ​ರ್‍ಸ್ ತಂಡಗಳು ಸೆಣಸಾಡಲಿದ್ದು, 2ನೇ ಪಂದ್ಯದಲ್ಲಿ ಮೈಸೂರು ವಾರಿಯ​ರ್‍ಸ್ ಹಾಗೂ ಶಿವಮೊಗ್ಗ ಸ್ಟೆ್ರೖಕ​ರ್‍ಸ್ ಮುಖಾಮುಖಿಯಾಗಲಿವೆ. ಎರಡೂ ಪಂದ್ಯಗಳಿಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯ್‌್ರ ಮೈದಾನ ಆತಿಥ್ಯ ವಹಿಸಲಿದೆ.

ಆರಂಭಿಕ ಹಂತದ ಕೆಲ ಪಂದ್ಯಗಳು ಮೈಸೂರಿನಲ್ಲೇ ನಡೆಯಲಿದ್ದು, ಬಳಿಕ ಫೈನಲ್‌ ಸೇರಿದಂತೆ ಕೊನೆ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ. 6 ತಂಡಗಳ ನಡುವಿನ ಟೂರ್ನಿ ಆ.26ರಂದು ಕೊನೆಗೊಳ್ಳಲಿದೆ. ಬೆಂಗಳೂರು ತಂಡಕ್ಕೆ ಮಯಾಂಕ್‌ ಅಗರ್‌ವಾಲ್‌, ಗುಲ್ಬರ್ಗಾಕ್ಕೆ ಮನೀಶ್‌ ಪಾಂಡೆ, ಮೈಸೂರಿಗೆ ಕರುಣ್‌ ನಾಯರ್‌, ಶಿವಮೊಗ್ಗ ತಂಡಕ್ಕೆ ಕೆ.ಗೌತಮ್‌, ಹುಬ್ಬಳ್ಳಿ ತಂಡಕ್ಕೆ ಅಭಿಮನ್ಯು ಮಿಥುನ್‌ ಮತ್ತು ಮಂಗಳೂರಿಗೆ ಆರ್‌.ಸಮಥ್‌ರ್‍ ನಾಯಕತ್ವ ವಹಿಸಲಿದ್ದಾರೆ.

2ನೇ ಟಿ20: ಐರ್ಲೆಂಡ್‌ ವಿರುದ್ಧ ಗೆದ್ದ ದ.ಆಫ್ರಿಕಾ

ಬ್ರಿಸ್ಟೋಲ್‌: ಐರ್ಲೆಂಡ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ದ.ಆಫ್ರಿಕಾ 44 ರನ್‌ ಗೆಲುವು ಸಾಧಿಸಿದ್ದು, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 6 ವಿಕೆಟ್‌ ಕಳೆದುಕೊಂಡು 182 ರನ್‌ ಕಲೆ ಹಾಕಿತು. ಹೆಂಡ್ರಿಕ್ಸ್‌ 42 ಹಾಗೂ ಕ್ಲಾಸೆನ್‌ 39 ರನ್‌ ಸಿಡಿಸಿದರು. ಕಠಿಣ ಗುರಿ ಬೆನ್ನತ್ತಿದ ಐರ್ಲೆಂಡ್‌ 18.5 ಓವರ್‌ಗಳಲ್ಲಿ 138 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ವೇಯ್‌್ನ ಪಾರ್ನೆಲ್‌ 30 ರನ್‌ಗೆ 5 ವಿಕೆಟ್‌ ಕಿತ್ತರು.

ಟಿ20: ನೆದರ್ಲೆಂಡ್‌್ಸ ವಿರುದ್ಧ ನ್ಯೂಜಿಲೆಂಡ್‌ಗೆ 2-0 ಜಯ

ಆಮ್ಸ್‌ಟೆರ್ಡಾಮ್‌: ನೆದೆರ್ಲೆಂಡ್‌್ಸ ವಿರುದ್ಧದ 2ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ 8 ವಿಕೆಟ್‌ ಗೆಲುವು ಸಾಧಿಸಿದ್ದು, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿದೆ. ಮೊದಲು ಬ್ಯಾಟ್‌ ಮಾಡಿದ ನೆದರ್ಲೆಂಡ್‌್ಸ 4 ವಿಕೆಟ್‌ಗೆ 147 ರನ್‌ ಕಲೆ ಹಾಕಿತು. ಬಸ್‌ ಡೆ ಲೀಡ್‌ 53 ರನ್‌ ಗಳಿಸಿದರೆ, ಟಾಮ್‌ ಕೂಪರ್‌ 26, ಎಡ್ವರ್ಡ್ಸ್ 26 ರನ್‌ ಕೊಡುಗೆ ನೀಡಿದರು. ಸಾಧಾರಣ ಗುರಿ ಬೆನ್ನತ್ತಿದ ಕಿವೀಸ್‌ 14 ಓವರಲ್ಲಿ 2 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು. ಮಿಚೆಲ್‌ ಸ್ಯಾಂಟ್ನರ್‌ 77 ಹಾಗೂ ಡ್ಯಾರಿಲ್‌ ಮಿಚೆಲ್‌ 51 ರನ್‌ ಬಾರಿಸಿ ತಂಡವನ್ನು ಗೆಲ್ಲಿಸಿದರು.

Follow Us:
Download App:
  • android
  • ios