ಮಹಾರಾಜ ಟಿ20 ಟೂರ್ನಿಯಲ್ಲಿ ಮುಂದುವರೆದ ಶಿವಮೊಗ್ಗ ಸ್ಟ್ರೈಕರ್ಸ್‌ ವೈಪಲ್ಯಟೂರ್ನಿಯಲ್ಲಿ 5ನೇ ಸೋಲು ಅನುಭವಿಸಿದ ಶಿವಮೊಗ್ಗ ಸ್ಟ್ರೈಕರ್ಸ್‌ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿ ಉಳಿದುಕೊಂಡ ಶಿವಮೊಗ್ಗ ಸ್ಟ್ರೈಕರ್ಸ್‌

ಮೈಸೂರು(ಆ.14): ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹುಬ್ಬಳ್ಳಿ ಟೈಗ​ರ್ಸ್‌ ತಂಡ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧದ ಮಹಾರಾಜ ಟ್ರೋಫಿ ಟಿ20 ಪಂದ್ಯದಲ್ಲಿ 6 ವಿಕೆಟ್‌ ಗೆಲುವು ಸಾಧಿಸಿದೆ. ಹುಬ್ಬಳ್ಳಿ ಟೂರ್ನಿಯಲ್ಲಿ 2ನೇ ಜಯಗಳಿಸಿದರೆ, 5ನೇ ಪಂದ್ಯದಲ್ಲೂ ಸೋಲುಂಡ ಶಿವಮೊಗ್ಗ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿದುಕೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ 6 ವಿಕೆಟ್‌ಗೆ ಕೇವಲ 133 ರನ್‌ ಕಲೆ ಹಾಕಿತು. ಕೆ.ಸಿದ್ಧಾರ್ಥ್‌(ಔಟಾಗದೆ 62), ಡಿ. ಅವಿನಾಶ್‌(41) ಹೊರತುಪಡಿಸಿ ಉಳಿದವರು ಟೈಗ​ರ್ಸ್‌ ಬೌಲಿಂಗ್‌ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ವಾಸುಕಿ ಕೌಶಿಕ್‌ 3, ಅಭಿಮನ್ಯು ಮಿಥುನ್‌ 2 ವಿಕೆಟ್‌ ಪಡೆದರು. ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿ 17.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಮುಹಮ್ಮದ್‌ ತಾಹ ಔಟಾಗದೆ 78(49 ಎಸೆತ), ಶ್ರೀನಿವಾಸ್‌ ಶರತ್‌ 41 ರನ್‌ ಗಳಿಸಿದರು.

ಶುಕ್ರವಾರ ರಾತ್ರಿ ನಡೆದ 2ನೇ ಪಂದ್ಯದಲ್ಲಿ ಶಿವಮೊಗ್ಗ ವಿರುದ್ಧ ಬೆಂಗಳೂರು ಬ್ಲಾಸ್ಟ​ರ್ಸ್‌ ವಿಜೆಡಿ ನಿಯಮದನ್ವಯ 9 ವಿಕೆಟ್‌ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮಳೆ ಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ ನಿಗದಿತ 19 ಓವರಲ್ಲಿ 2 ವಿಕೆಟ್‌ಗೆ 173 ರನ್‌ ಕಲೆ ಹಾಕಿತು. ರೋಹನ್‌ ಕದಂ 84 ರನ್‌ ಗಳಿಸಿದರು. ಬೆಂಗಳೂರು 15.4 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟದಲ್ಲಿ ಜಯಿಸಿತು. ಮಯಾಂಕ್‌ 49 ಎಸೆತಗಳಲ್ಲಿ ಔಟಾಗದೆ 102 ರನ್‌ ಸಿಡಿಸಿದರು.

ಸ್ಕೋರ್‌: 
ಶಿವಮೊಗ್ಗ 20 ಓವರಲ್ಲಿ 133/6 (ಸಿದ್ಧಾಥ್‌ರ್‍ 62*, ಅವಿನಾಶ್‌ 41, ಕೌಶಿಕ್‌ 3-25), 
ಹುಬ್ಬಳ್ಳಿ 17.2 ಓವರಲ್ಲಿ 134/4 (ತಾಹ 78*, ಶರತ್‌ 41, ಸ್ಟಾಲಿನ್‌ 1-13)

2.15 ಕೋಟಿ ರುಪಾಯಿಯ ಕಾರು ಖರೀದಿಸಿದ ಸೂರ್ಯ!

ಮುಂಬೈ: ಭಾರತದ ತಾರಾ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌ 2.15 ಕೋಟಿ ರು. ಮೌಲ್ಯದ ಮರ್ಸಿಡೀಸ್‌ ಜಿಎಲ್‌ಎಸ್‌ ಕೂಪ್‌ ಕಾರನ್ನು ಖರೀದಿಸಿದ್ದಾರೆ. ಸೂರ್ಯ ಹೊಸ ಕಾರಿನೊಂದಿಗೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಏಷ್ಯಾಕಪ್‌ ಟಿ20 ಟೂರ್ನಿಗೆ ಆಯ್ಕೆಯಾಗಿರುವ ಸೂರ್ಯಕುಮಾರ್‌ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

ಐಪಿಎಲ್‌ನಲ್ಲಿ ನಡೆದಿತ್ತು ಮತ್ತೊಂದು ಕಪಾಳಮೋಕ್ಷ , 4 ಬಾರಿ ಕೆನ್ನಗೆ ಬಾರಿಸಿದ್ದರು ಎಂದ ರಾಸ್ ಟೇಲರ್!

ಕೌಂಟಿ: 73 ಎಸೆತದಲ್ಲಿ ಚೇತೇಶ್ವರ್‌ ಪೂಜಾರ ಶತಕ!

ಬರ್ಮಿಂಗ್‌ಹ್ಯಾಮ್‌: ಭಾರತ ಟೆಸ್ಟ್‌ ತಂಡದ ಬ್ಯಾಟರ್‌ ಚೇತೇಶ್ವರ್‌ ಪೂಜಾರ ಇಂಗ್ಲೆಂಡ್‌ನ ರಾಯಲ್‌ ಲಂಡನ್‌ ಏಕದಿನ ಕೌಂಟಿ ಟೂರ್ನಿಯಲ್ಲಿ ಅಬ್ಬರದ ಶತಕ ಬಾರಿಸಿದ್ದಾರೆ. ಟೂರ್ನಿಯಲ್ಲಿ ಸಸೆಕ್ಸ್‌ ಪರ ಆಡುತ್ತಿರುವ ಪೂಜಾರ ಶುಕ್ರವಾರ ವಾರ್ವಿಕ್‌ಶೈರ್‌ ವಿರುದ್ಧ 73 ಎಸೆತಗಳಲ್ಲಿ ಶತಕ ಪೂರೈಸಿದರು. 79 ಎಸೆತಗಳ ಅವರ ಇನ್ನಿಂಗ್ಸಲ್ಲಿ 7 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 107 ರನ್‌ ಸಿಡಿಸಿದರು. ಅಲ್ಲದೇ ಲಿಯಾಮ್‌ ನಾರ್ವೆಲ್‌ ಎಸೆದ 45ನೇ ಓವರ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಒಳಗೊಂಡ 22 ರನ್‌ ಸಿಡಿಸಿ ಗಮನ ಸೆಳೆದರು.