* ನಿರ್ಣಾಯಕ ಘಟ್ಟದತ್ತ ಮಹಾರಾಜ ಟಿ20 ಟ್ರೋಫಿ* ಎಲಿಮಿನೇಟರ್‌ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ಮತ್ತು ಹುಬ್ಬಳ್ಳಿ ಟೈಗರ್ಸ್ ಫೈಟ್* ಮೊದಲ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಗುಲ್ಬರ್ಗಾ ಮೈಸ್ಟಿಕ್ಸ್‌ ಫೈಟ್

ಬೆಂಗಳೂರು(ಆ.23): ಮಹರಾಜ ಟ್ರೋಫಿ ಟಿ20 ಟೂರ್ನಿಯ ಪ್ಲೇ-ಆಫ್ ವೇಳಾಪಟ್ಟಿ ಅಂತಿಮಗೊಂಡಿದೆ. ಮಂಗಳವಾರ ಎಲಿಮಿನೇಟರ್‌ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ಮತ್ತು ಹುಬ್ಬಳ್ಳಿ ಟೈಗರ್ಸ್ ಸೆಣಸಲಿದ್ದು, ಮೊದಲ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಗುಲ್ಬರ್ಗಾ ಮೈಸ್ಟಿಕ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಸೋಮವಾರ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ವಿರುದ್ದ 6 ವಿಕೆಟ್ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತು. 14 ಅಂಕಗಳೊಂದಿಗೆ ಬೆಂಗಳೂರು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, 12 ಅಂಕಗಳೊಂದಿಗೆ ಗುಲ್ಬರ್ಗಾ ಎರಡನೇ ಸ್ಥಾನ ಗಳಿಸಿತು. ತಲಾ 10 ಅಂಕ ಪಡೆದ ಮೈಸೂರು ಮತ್ತು ಹುಬ್ಬಳ್ಳಿ ಕ್ರಮವಾಗಿ ಮೂರು ಹಾಗೂ 4ನೇ ಸ್ಥಾನ ಪಡೆದವು.

ಜಯದೊಂದಿಗೆ ಶಿವಮೊಗ್ಗ ಗುಡ್‌ಬೈ

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಸ್ಟ್ರೈಕ​ರ್ಸ್‌ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಸೋಮವಾರ ಗುಲ್ಬರ್ಗಾ ಮೈಸ್ಟಿಕ್ಸ್‌ ವಿರುದ್ಧ ವಿಜೆಡಿ ನಿಯಮದನ್ವಯ 6 ವಿಕೆಟ್‌ ಜಯಗಳಿಸಿದರೂ ಶಿವಮೊಗ್ಗ 10 ಪಂದ್ಯಗಳಲ್ಲಿ 3ನೇ ಜಯದೊಂದಿಗೆ ಕೊನೆ ಸ್ಥಾನದಲ್ಲೇ ಉಳಿಯಿತು. ಸೋಲಿನ ಹೊರತಾಗಿಯೂ ಗುಲ್ಬರ್ಗಾ 12 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಪ್ಲೇ-ಆಫ್‌ಗೇರಿತು.

ಮೊದಲು ಬ್ಯಾಟ್‌ ಮಾಡಿದ ಮನೀಶ್‌ ಪಾಂಡೆ ನಾಯಕತ್ವದ ಗುಲ್ಬರ್ಗಾ 20 ಓವರಲ್ಲಿ 9 ವಿಕೆಟ್‌ಗೆ 118 ರನ್‌ ಕಲೆ ಹಾಕಿತು. ರಿತೇಶ್‌ ಭಟ್ಕಳ್‌ 38, ಜೆಸ್ವತ್‌ ಆಚಾರ್ಯ 22 ರನ್‌ ಗಳಿಸಿದರು. ಅವಿನಾಶ್‌ ಡಿ. 24 ರನ್‌ಗೆ 3 ವಿಕೆಟ್‌ ಕಿತ್ತರು. ಬಳಿಕ ಶಿವಮೊಗ್ಗ ಬ್ಯಾಟಿಂಗ್‌ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ 7 ಓವರಲ್ಲಿ 54 ರನ್‌ ಗುರಿ ಪಡೆದ ತಂಡ 6.3 ಓವರಲ್ಲಿ 4 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು. ಸಿದ್ದಾಥ್‌ರ್‍ 18 ರನ್‌ ಗಳಿಸಿದರು.

Maharaja Trophy ಮಂಗಳೂರು ಯುನೈಟೆಡ್‌ಗೆ ಸೋಲಿನ ಶಾಕ್ ನೀಡಿದ ಶಿವಮೊಗ್ಗ ಸ್ಟ್ರೈಕರ್ಸ್

ಇನ್ನು ಭಾನುವಾರ ರಾತ್ರಿ ನಡೆದ 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗ​ರ್‍ಸ್ ವಿರುದ್ಧ ಬೆಂಗಳೂರು ಬ್ಲಾಸ್ಟ​ರ್‍ಸ್ 2 ರನ್‌ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 8 ವಿಕೆಟ್‌ಗೆ 171 ರನ್‌ ಕಲೆ ಹಾಕಿತು. ಹುಬ್ಬಳ್ಳಿ 7 ವಿಕೆಟ್‌ಗೆ 169 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಮೊಹಮ್ಮದ್‌ ತಾಹ 71(47 ಎಸೆತ) ಹೋರಾಟ ವ್ಯರ್ಥವಾಯಿತು.

ಸ್ಕೋರ್‌:

ಗುಲ್ಬರ್ಗಾ 20 ಓವರಲ್ಲಿ 118/9 (ರಿತೇಶ್‌ 38, ಜೆಸ್ವತ್‌ 22, ಅವಿನಾಶ್‌ 3-24), 
ಶಿವಮೊಗ್ಗ 6.3 ಓವರಲ್ಲಿ 54/4 (ಸಿದ್ದಾರ್ಥ್‌ 18, ರಿತೇಶ್‌ 1-8)