Asianet Suvarna News Asianet Suvarna News

ಚಾಣಾಕ್ಯನ 3ಡಿ ಇಮೇಜ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು, ಇದು ಕ್ರಿಕೆಟ್ ಚಾಣಾಕ್ಯ ಎಂದ ಫ್ಯಾನ್ಸ್!

ಮಗಧ ಡಿಎಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶ್ರೇಷ್ಠ ತತ್ವಜ್ಞಾನಿ ಚಾಣಾಕ್ಯನ 3ಡಿ ಇಮೇಜ್ ಅಭಿವೃದ್ಧಿಪಡಿಸಿದ್ದಾರೆ. ಆದರೆ ಚಿತ್ರ ಪೂರ್ಣಗೊಂಡಾಗ ಕ್ರಿಕೆಟಿಗ ಎಂಎಸ್ ಧೋನಿಯಂತೆ ಕಾಣುತ್ತಿದೆ. ಇದೀಗ ಈ ಚಿತ್ರ ಭಾರಿ ವೈರಲ್ ಆಗಿದೆ. ನೀವು ಅಭಿವೃದ್ಧಿಪಡಿಸಿದ್ದು, ಕ್ರಿಕೆಟ್ ಚಾಣಾಕ್ಯನ ಚಿತ್ರ, ತತ್ವಜ್ಞಾನಿ ಅಲ್ಲ ಎಂದಿದ್ದಾರೆ.
 

Magadh ds university Scientist develops Philosopher Chanakya 3D image look like MS Dhoni goes viral ckm
Author
First Published Mar 10, 2024, 11:02 PM IST

ಪಾಟ್ನಾ(ಮಾ.10) ತಂತ್ರಜ್ಞಾನ ಬಳಿಸಿಕೊಂಡು ಗತಕಾಲದ ರಾಜ ಮಹಾರಾಜರು, ಹೋರಾಟಗಾರರ 3ಡಿ ಚಿತ್ರಗಳನ್ನು ಅಭಿವೃದ್ಧಿಪಡಿಸುವ ಹಲವು ಪ್ರಯತ್ನಗಳು ನಡೆದಿದೆ. ಇದೇ ರೀತಿ ಬಿಹಾರದ ಮಗಧಾ ಡಿಎಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿಶ್ವ ಶ್ರೇಷ್ಠ ತತ್ವಜ್ಞಾನಿ ಚಾಣಾಕ್ಯನ ಚಿತ್ರವನ್ನು 3ಡಿ ಇಫೆಕ್ಟ್ಸ್ ಮೂಲಕ ಅಭಿವೃದ್ಧಿಪಡಿಸಿದ್ದಾರೆ. ಆದರೆ ಈ ಚಿತ್ರ ಪೂರ್ಣಗೊಂಡಾಗ ಸಿಎಸ್‌ಕೆ ನಾಯಕ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಧೋನಿಯಂತೆ ಕಾಣುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ವೈರಲ್ ಆಗಿದ್ದು, ವಿಜ್ಞಾನಿಗಳು ಕನ್ಫ್ಯೂಸ್ ಆಗಿದ್ದಾರೆ, ನೀವು ಅಭಿವೃದ್ಧಿಪಿಡಿಸಿದ್ದು, ಕ್ರಿಕೆಟ್ ಚಾಣಾಕ್ಯ, ತತ್ವಜ್ಞಾನಿ ಚಾಣಕ್ಯನಲ್ಲ ಎಂದಿದ್ದಾರೆ.

ವಿಜ್ಞಾನಿಗಳು ಶ್ರಮವಹಿಸಿ ತತ್ವಜ್ಞಾನಿ ಚಾಣಾಕ್ಯನ ಚಿತ್ರವನ್ನು ಅಭಿವೃೃದ್ಧಿಪಡಿಸಿದ್ದಾರೆ. ಚಿತ್ರ ಪೂರ್ಣಗೊಳಿಸಲು ಕೆಲ ದಿನಳು ತೆಗೆದುಕೊಂಡಿದ್ದಾರೆ. 3ಡಿ ಇಮೇಜ್ ಅಭಿವೃದ್ಧಿ ಪಡಿಸಿದ ಖುಷಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಈ ಚಿತ್ರ ಕ್ರಿಕೆಟಿಗ ಧೋನಿ ರೀತಿ ಕಾಣುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರ ವೈರಲ್ ಆಗಿದೆ.

ಹೊಸ ಅವತಾರದಲ್ಲಿ ಕಾಣಿಸಿಕೊಂಡು ಐಪಿಎಲ್‌ಗೆ ಕಿಚ್ಚು ಹಚ್ಚಿದ ಧೋನಿ!

ಧೋನಿ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ಕ್ರಿಕೆಟ್ ತತ್ವಜ್ಞಾನಿ, ಕ್ರಿಕೆಟ್ ಚಾಣಾಕ್ಯ. ಚಾಣಾಕ್ಯನ ಚಿತ್ರ ಪರ್ಫೆಕ್ಟ್ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲ ಅಭಿಮಾನಿಗಳು, ಥಲಾ ಧೋನಿ ಚಾಣಾಕ್ಯನ ಅವತಾರ. ಹೀಗಾಗಿ ಇದು ಸರಿ ಎಂದು ಪ್ರತಿಕ್ರಿಯಿಸಿದ್ದಾರೆ. ಧೋನಿ ಕ್ರಿಕೆಟ್ ಜಗತ್ತಿನ ಚಾಣಾಕ್ಯ ಅನ್ನೋದರಲ್ಲಿ ಅನುಮಾನವಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

 

 

ಧೋನಿಗೆ ಕ್ರಿಕೆಟ್ ಚಾಣಾಕ್ಯ ಅನ್ನೋ ಬಿರುದು ಇದೆ. ಯಾವುದೇ ಸಂದರ್ಭವನ್ನೂ ಅಷ್ಟೇ ತಾಳ್ಮೆಯಿಂದ ನಿರ್ವಹಿಸುವ ಧೋನಿ, ಸೋಲು ಪಂದ್ಯಗಳಿಗೆ ರೋಚಕ ತಿರುವು ನೀಡಿ ಗೆಲುವು ಸಾಧಿಸಿದ್ದಾರೆ. ಎದುರಾಳಿಗಳ ಅಬ್ಬರಕ್ಕೆ ಬ್ರೇಕ್ ಹಾಕಿ ರೋಚಕ ಗೆಲುವು ತಂದುಕೊಟ್ಟ ಕೀರ್ತಿಯೂ ಧೋನಿಗಿದೆ. ಪಂದ್ಯಕ್ಕೆ, ಸಂದರ್ಭಕ್ಕೆ ತಕ್ಕಂತೆ ಪ್ಲಾನ್ ಬದಲಿಸಿ ಅಭೂತಪೂರ್ವ ಗೆಲುವಿಗೆ ಕಾರಣವಾಗಿರುವ ಧೋನಿ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ.

 

ಹೊಸ ಆವೃತ್ತಿಯಲ್ಲಿ ಹೊಸ ಜವಾಬ್ದಾರಿ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಂಎಸ್ ಧೋನಿ!

ಐಪಿಎಲ್ 2024 ಟೂರ್ನಿಯಲ್ಲಿ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಧೋನಿ ನಾಯಕತ್ವ, ಬ್ಯಾಟಿಂಗ್ ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. 2024ರ ಐಪಿಎಲ್ ಟೂರ್ನಿ ಮೂಲಕ ಧೋನಿ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆಗಳಿವೆ. 


 

Follow Us:
Download App:
  • android
  • ios