Asianet Suvarna News Asianet Suvarna News

Los Angeles Olympics 2028: ತಾತ್ಕಾಲಿಕ ಪಟ್ಟಿಯಿಂದ ಕ್ರಿಕೆಟ್ ಔಟ್..!

* ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ನೋಡಬೇಕು ಎನ್ನುವ ಆಸೆಗೆ ಕೊಂಚ ಹಿನ್ನೆಡೆ

* 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಕ್ರಿಕೆಟ್ ಹೊರಕ್ಕೆ

* ಬಾಕ್ಸಿಂಗ್ ಹಾಗೂ ವೇಟ್‌ಲಿಫ್ಟಿಂಗ್ ಸ್ಪರ್ಧೆಯ ಮೇಲೂ ಅನುಮಾನದ ತೂಗುಗತ್ತಿ

Los Angeles Olympics 2028  Cricket excluded from provisional list Uncertainty over boxing and weightlifting kvn
Author
Bengaluru, First Published Dec 11, 2021, 9:00 AM IST

ಜಿನೇವಾ(ಡಿ.11): 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಗೇಮ್ಸ್‌ನ (Los Angeles Olympics 2028) ತಾತ್ಕಾಲಿಕ ಪಟ್ಟಿಯಿಂದ ಕ್ರಿಕೆಟ್‌ (Cricket), ಬಾಕ್ಸಿಂಗ್‌ (Boxing), ವೇಟ್‌ಲಿಫ್ಟಿಂಗ್‌ (Weightlifting) ಹಾಗೂ ಮಾಡರ್ನ್‌ ಪೆಂಟಥ್ಲಾನ್‌ ಕ್ರೀಡೆಗಳನ್ನು ಹೊರಕ್ಕೆ ಇಡಲಾಗಿದೆ. ಇದರೊಂದಿಗೆ 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸಬೇಕೆಂಬ (ICC) ಐಸಿಸಿ(ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಪ್ರಯತ್ನಕ್ಕೆ ಹಿನ್ನಡೆಯುಂಟಾಗಿದೆ. ಬಾಕ್ಸಿಂಗ್‌ ಮತ್ತು ವೇಟ್‌ಲಿಪ್ಟಿಂಗ್‌ ಸ್ಥಾನ ಉಳಿಸಿಕೊಳ್ಳಬೇಕಾದರೆ, ಸಂಬಂಧಿಸಿದ ಕ್ರೀಡಾ ಸಂಸ್ಥೆಗಳು ಅಗತ್ಯ ಬದಲಾವಣೆಗಳನ್ನು ತರಬೇಕು ಎಂದು 18 ತಿಂಗಳ ಗಡುವು ವಿಧಿಸಲಾಗಿದೆ.

ಬಾಕ್ಸಿಂಗ್‌ ಮತ್ತು ವೇಟ್‌ಲಿಫ್ಟಿಂಗ್‌ ನಿರ್ವಹಿಸುವ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ಅಧ್ಯಕ್ಷ ಥಾಮಸ್‌ ಬಾಚ್‌ (Thomas Bach) ‘ಸಮಸ್ಯೆಯ ಶಿಶುಗಳು’ ಎಂದಿದ್ದಾರೆ. ಇನ್ನು ಮಾಡರ್ನ್‌ ಪೆಂಟಥ್ಲಾನ್‌ನಿಂದ ಈಕ್ವೆಸ್ಟ್ರಿಯನ್‌ ಜಂಪಿಂಗ್‌ ಈವೆಂಟ್‌ ಅನ್ನು ತೆಗೆದು ಹಾಕುವಂತೆ ಐಒಸಿ ಸ್ಪಷ್ಟವಾಗಿ ತಿಳಿಸಿದೆ. 2028ರ ಒಲಿಂಪಿಕ್ಸ್‌ನ 28 ಕ್ರೀಡೆಗಳ ಪಟ್ಟಿಗೆ ಐಒಸಿ ಫೆಬ್ರವರಿಯಲ್ಲಿ ಸಮ್ಮತಿ ನೀಡಲಿದೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಒಮ್ಮೆ ಮಾತ್ರ (1900 ಪ್ಯಾರೀಸ್‌) ಕ್ರಿಕೆಟ್‌ಗೆ ಅವಕಾಶ ನೀಡಲಾಗಿತ್ತು. 2 ತಂಡಗಳು ಮಾತ್ರ ಪಾಲ್ಗೊಂಡಿದ್ದವು. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸಲು ಐಸಿಸಿ ಇದೇ ಆಗಸ್ಟ್‌ನಲ್ಲಿ ಸಿದ್ಧತೆ ನಡೆಸಿತ್ತು.

ಆದರೆ, ಐಒಸಿ (IOC) ಕ್ರೀಡೆಯ ಜನಪ್ರಿಯತೆ, ವೆಚ್ಚ, ಅನನ್ಯತೆ, ಸಂಕೀರ್ಣತೆ ಮತ್ತು ಯುವಜನರ ಆಸಕ್ತಿಯನ್ನು ಆಧರಿಸಿ ಪಟ್ಟಿಗೆ ಆಟಗಳ ಸೇರ್ಪಡೆಗೊಳಿಸಲಿದೆ. ಸ್ಕೇಟ್‌ ಬೋರ್ಡಿಂಗ್‌, ಸರ್ಫಿಂಗ್‌ ಮತ್ತು ಕ್ರೀಡಾ ಚಾರಣವನ್ನು ಮೊದಲ ಬಾರಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಐಒಸಿ ಸೇರ್ಪಡೆಗೊಳಿಸಿತ್ತು. ಈ ಮೂರು ಸ್ಪರ್ಧೆಗಳ ಸಹ ನಿರೀಕ್ಷೆಯಂತೆ ಕ್ರೀಡಾ ಅಭಿಮಾನಿಗಳ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಇನ್ನು 2024ರ ಪ್ಯಾರೀಸ್‌ ಒಲಿಂಪಿಕ್ಸ್‌ಗೆ (Paris Olympics) ಬ್ರೇಕ್‌ ಡ್ಯಾನ್ಸ್‌ ಸೇರ್ಪಡೆಗೊಂಡಿದೆ.

2028ರ ಒಲಿಂಪಿಕ್ಸ್‌: ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌ ಮೇಲೆ ತೂಗುಗತ್ತಿ:

ಬಾಕ್ಸಿಂಗ್‌ ಮತ್ತು ವೇಟ್‌ಲಿಫ್ಟಿಂಗ್‌ ನಿರ್ವಹಿಸುವ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ಅಧ್ಯಕ್ಷ ಥಾಮಸ್‌ ಬಾಕ್‌ ‘ಸಮಸ್ಯೆಯ ಶಿಶುಗಳು’ ಎಂದಿದ್ದಾರೆ. ಅಲ್ಲದೇ ಉದ್ದೀಪನ ಮದ್ದು ಸೇವನೆ ಮತ್ತು ಭ್ರಷ್ಟಾಚಾರ ಸಂಬಂಧ ಈ ಸಂಸ್ಥೆಗಳ ವಿರುದ್ಧ ಕೇಳಿ ಬರುತ್ತಿರುವ ಹಗರಣಗಳ ಕುರಿತು ಬಾಕ್‌ ದೀರ್ಘ ಕಾಲದಿಂದ ಧ್ವನಿ ಎತ್ತುತ್ತಿದ್ದಾರೆ.

Neeraj Chopra: ಮೈದಾನದಲ್ಲಿ ಮಾತ್ರವಲ್ಲ ಫೀಲ್ಡ್ ನ ಹೊರಗೂ ಚಿನ್ನದ ಹುಡುಗ ಚಾಂಪಿಯನ್!

ಇನ್ನು ಮಾಡ್ರನ್‌ ಪೆಂಟಥ್ಲಾನ್‌ನಿಂದ ಈಕ್ವೆಸ್ಟ್ರಿಯನ್‌ ಜಂಪಿಂಗ್‌ ಈವೆಂಟ್‌ ಅನ್ನು ತೆಗೆದು ಹಾಕುವಂತೆ ಐಒಸಿ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಇದರ ವಿರುದ್ಧ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ ವೇಳೆ ಈಕ್ವೆಸ್ಟ್ರಿಯನ್‌ ಸ್ಪರ್ಧೆ ವೇಳೆ ಕುದುರೆ ಸಹಕರಿಸಲಿಲ್ಲವೆಂದು ಜರ್ಮನಿಯ ತರಬೇತುದಾರರೊಬ್ಬರು ಕುದುರೆಗೆ ಭಾರೀ ಪೆಟ್ಟು ನೀಡಿದ್ದರು. ಈ ಹಿಂಸಾತ್ಮಾಕ ಕೃತ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗಿ ವಿವಾದ ಸೃಷ್ಟಿಯಾಗಿತ್ತು. ಬಳಿಕ ತರಬೇತುದಾರರ ಮೇಲೆ ಕ್ರಮಕೈಗೊಳ್ಳಲಾಗಿತ್ತು. 2028ರ ಒಲಿಂಪಿಕ್ಸ್‌ನ 28 ಕ್ರೀಡೆಗಳ ಪೈಕಿ ಈ ಮೂರನ್ನು ಕೈಬಿಡಲಾಗಿದೆ. ಪಟ್ಟಿಯಲ್ಲಿರುವ ಕ್ರೀಡೆಗಳಿಗೆ ಐಒಸಿ ಸದಸ್ಯರು ಫೆಬ್ರವರಿಯಲ್ಲಿ ಸಮ್ಮತಿ ನೀಡಬೇಕಾಗಿದೆ.

ಕೋವಿಡ್‌: ಭಾರತ ಮಹಿಳಾ ಹಾಕಿ ತಂಡ ನಿರ್ಗಮನ

ಡೊಂಗೇ(ದ.ಕೊರಿಯಾ): ಏಷ್ಯನ್‌ ಮಹಿಳಾ ಹಾಕಿ ಚಾಂಪಿಯನ್ಸ್‌ ಟ್ರೋಫಿಯಿಂದ (Asian Women's Hockey Champions Trophy) ಭಾರತ ತಂಡ ಹಿಂದಕ್ಕೆ ಸರಿದಿದೆ. ಕೋವಿಡ್‌ (COVID 19) ಹಿನ್ನೆಲೆಯಲ್ಲಿ ಭಾರತ ಇನ್ನು ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಏಷ್ಯನ್‌ ಹಾಕಿ ಫೆಡರೇಶನ್‌ ಮೂಲಗಳು ಖಚಿತಪಡಿಸಿವೆ.

ಭಾರತೀಯ ಆಟಗಾರ್ತಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಭಾರತ ತಂಡ ಸದ್ಯ ಕ್ವಾರಂಟೈನ್‌ನಲ್ಲಿದ್ದು, ಜಪಾನ್‌ ವಿರುದ್ಧ ಡಿ.11ರಂದು ನಿಗದಿಯಾಗಿದ್ದ ಪಂದ್ಯಕ್ಕೂ ಮುನ್ನ ಟೂರ್ನಿಯಿಂದಲೇ ಹಿಂದಕ್ಕೆ ಸರಿಯಲು ನಿರ್ಧರಿಸಿದೆ. ಮೊದಲ ಪಂದ್ಯದಲ್ಲಿ ಭಾರತ, ಥಾಯ್ಲೆಂಡ್‌ ವಿರುದ್ಧ ಗೆದ್ದಿತ್ತು. ಆ ಬಳಿಕ ಕೋವಿಡ್‌ ಕಾರಣದಿಂದಾಗಿ ಮಲೇಷ್ಯಾ, ದ.ಕೊರಿಯಾ, ಚೀನಾ ವಿರುದ್ಧದ ಪಂದ್ಯಗಳು ಮುಂದೂಡಿಕೆಯಾಗಿದ್ದವು. ಈ ಮೊದಲು ಆಟಗಾರ್ತಿಗೆ ಕೋವಿಡ್‌ ದೃಢಪಟ್ಟಹಿನ್ನೆಲೆಯಲ್ಲಿ ಮಲೇಷ್ಯಾ ಕೂಡಾ ಟೂರ್ನಿಯಿಂದ ಹೊರನಡೆದಿತ್ತು.

Follow Us:
Download App:
  • android
  • ios