Asianet Suvarna News Asianet Suvarna News

ಟೀಂ ಇಂಡಿಯಾ ವಿರುದ್ಧ ಪಂದ್ಯ ಗೆಲ್ಲಲು ಬಾಲ್ ಟ್ಯಾಂಪರ್ ಮಾಡಿತಾ ಇಂಗ್ಲೆಂಡ್?

  • ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರ್ ಮಾಡಿತಾ ಇಂಗ್ಲೆಂಡ್?
  • ಶೂ ಸ್ಪೈಕ್‌ನಿಂದ ಚೆಂಡು ವಿರೂಪಗೊಳಿಸದ ಆರೋಪ
  • ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಫೋಟೋ, ವಿಡಿಯೋ
Lords test fans question New way of ball tampering by England against team india ckm
Author
Bengaluru, First Published Aug 15, 2021, 9:38 PM IST
  • Facebook
  • Twitter
  • Whatsapp

ಲಂಡನ್(ಆ.15): ಲಾರ್ಡ್ಸ್ ಟೆಸ್ಟ್ ಪಂದ್ಯದ 3 ಮತ್ತು ನಾಲ್ಕನೇ ದಿನ ಇಂಗ್ಲೆಂಡ್ ಹಿಡಿತ ಸಾಧಿಸಿದೆ. 4ನೇ ದಿನದಾಟದಲ್ಲಿ ಟೀಂ ಇಂಡಿಯಾ ದಿಢೀರ್ 3 ವಿಕೆಟ್ ಕಳೆದುಕೊಂಡ ಬಳಿಕ ದಿಟ್ಟ ಹೋರಾಟ ನೀಡಿತು. ಇದರಿಂದ ಕುಪಿತಗೊಂಡ ಇಂಗ್ಲೆಂಡ್ ಪಂದ್ಯ ಗೆಲ್ಲಲು ಅಡ್ಡದಾರಿ ಹಿಡಿಯಿತಾ ಅನ್ನೋ ಅನುಮಾನಗಳು ಬಲಗೊಳ್ಳುತ್ತಿದೆ. ಇದಕ್ಕೆ ಪೂರಕವಾದ ಪಂದ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

ಟೀಂ ಇಂಡಿಯಾ ಪರ ಆಡಲು ಮೈದಾನಕ್ಕಿಳಿದ ಇಂಗ್ಲೆಂಡ್ ಅಭಿಮಾನಿ; ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ!

ಲಾರ್ಡ್ಸ್ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಟೀಂ ಇಂಡಿಯಾ ಜೊತೆಯಾಟ ಗಟ್ಟಿಗೊಳ್ಳುತ್ತಿದ್ದಂತೆ ಇಂಗ್ಲೆಂಡ್ ಬಾಲ್ ಟ್ಯಾಂಪರ್ ಮಾಡಲಾಗಿದೆ ಅನ್ನೋ ಫೋಟೋಗಳನ್ನು ಸಾಮಾಜಿಕ ಜಲಾತಾಣದಲ್ಲಿ ಹರಿದಾಡುತ್ತಿದೆ. ಇಂಗ್ಲೆಂಡ್ ಆಟಗಾರರು ಬಾಲ್‌ನ್ನು ಶೂ ಸ್ಪೈಕ್ ಮೂಲಕ ವಿರೂಪ ಗೊಳಿಸುತ್ತಿರುವ ಫೋಟೋ ಭಾರಿ ಸಂಚಲ ಸೃಷ್ಟಿಸಿದೆ.

ಭೋಜನ ವಿರಾಮದ ಬಳಿಕ ಟೀಂ ಇಂಡಿಯಾ ಪರ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಜೊತೆಯಾಟ ಇಂಗ್ಲೆಂಡ್‌ಗೆ ತಲೆನೋವಾಗಿ ಪರಿಣಮಿಸಿತ್ತು. ಈ ಜೋಡಿ ಬೇರ್ಪಡಿಸಲು ಚೆಂಡು ವಿರೂಪಗೊಳಿಸಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

ಕೆಎಲ್ ರಾಹುಲ್ ಮೇಲೆ ಬಿಯರ್ ಬಾಟಲಿ ಕಾರ್ಕ್ ಎಸೆತ; ಇಂಗ್ಲೆಂಡ್ ಅಭಿಮಾನಿಗಳ ವರ್ತನೆಗೆ ಆಕ್ರೋಶ!

ಅಭಿಮಾನಿಗಳು ಆಸ್ಟ್ರೇಲಿಯಾ ರೀತಿ ಇಂಗ್ಲೆಂಡ್ ಕೂಡ ಮೋಸದಾಟವಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಈ ಫೋಟೋ ಹಿಂದಿನ ಸತ್ಯವೇನು ಅನ್ನೋದನ್ನು ಪ್ರಶ್ನಿಸಿದ್ದಾರೆ. ಇದು ಬಾಲ್ ಟ್ಯಾಂಪರಿಂಗ್ ಅಥವಾ ಕೊರೋನಾಗೆ ತೆಗೆದುಕೊಂಡ ಮುಂಜಾಗ್ರತಾ ಕ್ರಮವೇ ಎಂದು ಸೆಹ್ವಾಗ್ ಪ್ರಶ್ನಿಸಿದ್ದಾರೆ.

 

ಈ ರೀತಿ ಮಾಡಲು ಅನುಮತಿ ಇದೆಯಾ?  ಐಸಿಸಿ ನಿಯಮ ಉಲ್ಲಂಘನೆಯಾಗಿದೆ ಎಂದು ಹಲವು ಅಭಿಪ್ರಾಯಪಟ್ಟಿದ್ದಾರೆ 


 

Follow Us:
Download App:
  • android
  • ios