ವಿಶ್ವಕಪ್ ಸ್ಟೇಡಿಯಂನಲ್ಲಿ ಲೈಟ್ ಶೋಗೆ ಮ್ಯಾಕ್ಸ್‌ವೆಲ್ ಅಸಮಾಧಾನ, ಮೆಚ್ಚಿದ ಡೇವಿಡ್ ವಾರ್ನರ್!
ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪ್ರೇಕ್ಷಕರ ಗಮನಸೆಳೆಯುವ ನಿಟ್ಟಿನಲ್ಲಿ ಕೆಲ ಸ್ಟೇಡಿಯಂನಲ್ಲಿ ಲೈಟ್ ಶೋಗಳನ್ನು ಏರ್ಪಡಿಸಲಾಗುತ್ತಿದೆ. ಆದರೆ, ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಅ.26): ನೆದರ್ಲೆಂಡ್ಸ್ ವಿರುದ್ಧ ದಾಖಲೆಯ ವಿಶ್ವಕಪ್ ಶತಕದ ಬಳಿಕ ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸಂಘಟಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ವಿಶ್ವಕಪ್ ಸಂಘಟಕರು ಪಂದ್ಯದ ಇನ್ನಿಂಗ್ಸ್ ನಡುವೆ ದೊಡ್ಡ ಪ್ರಮಾಣದಲ್ಲಿ ಲೈಟ್ ಶೋ ಆಯೋಜನೆ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾದ 309 ರನ್ ಗೆಲುವಿನ ವೇಳೆಯಲ್ಲೂ ಸ್ಟೇಡಿಯಂನಲ್ಲಿ ಲೈಟ್ ಶೋ ಏರ್ಪಡಿಸಲಾಗಿತ್ತು. ಆದರೆ, ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಎರಡು ನಿಮಿಷದ ಲೈಟ್ ಶೋಗೆ ದಿ ಬಿಗ್ ಶೋ ಖ್ಯಾತಿಯ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ ಕಿಡಿಕಾರಿದ್ದಾರೆ. ಈ ಎರಡು ನಿಮಿಷದ ಸಮಯದಲ್ಲಿ ಇಡೀ ಸ್ಟೇಡಿಯಂನಲ್ಲಿ ಲೈಟ್‌ಗಳನ್ನು ಫ್ಲ್ಯಾಶ್ ಮಾಡಲಾಗುವ ಕಾರಣ ನೈಟ್‌ಕ್ಲಬ್ ರೀತಿ ಕಾಣತ್ತದೆ. ಅದರೊಂದಿಗೆ ಡಿಜೆ ಸೌಂಡ್‌ಗಳು ಮೈದಾನದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿತ್ತು. ಈ ಹಂತದಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಪಂದ್ಯದ ಗೆಲುವಿಗಾಗಿ 400 ರನ್ ಚೇಸ್ ಮಾಡುವ ಅಸಾಧ್ಯ ಗುರಿ ನೀಡಲಾಗಿತ್ತು. ಮ್ಯಾಕ್ಸ್‌ವೆಲ್ ಅವರು ಲೈಟ್ ಶೋಗಾಗಿ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು, ಬಿಗ್ ಬ್ಯಾಷ್ ಆಟದ ಸಮಯದಲ್ಲಿ ಪರ್ತ್ ಕ್ರೀಡಾಂಗಣದಲ್ಲಿ ಹಿಂದಿನ ಅನುಭವವನ್ನು ಉಲ್ಲೇಖಿಸಿದ ಅವರು, ಇದು ತನಗೆ ತೀವ್ರ ತಲೆನೋವು ನೀಡುತ್ತದೆ ಮಾತ್ರವಲ್ಲದೆ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಣ್ಣುಗಳಿಗೆ ಕೆಲ ಸಮಯ ಹಿಡಿಯುತ್ತದೆ ಎಂದಿದ್ದಾರೆ.
'ಬಿಗ್ ಬ್ಯಾಷ್ ಪಂದ್ಯದ ವೇಳೆ ಪರ್ತ್ ಸ್ಟೇಡಿಯಂನಲ್ಲೂ ಇದೇ ರೀತಿಯ ಲೈಟ್ ಶೋಗಳು ಆಗುತ್ತಿದ್ದವು' ಎಂದು ವಿಶ್ವಕಪ್ ಇತಿಹಾಸದಲ್ಲಿಯೇ ಅತಿವೇಗದ ಶತಕ ಬಾರಿಸಿ ಪಂದ್ಯದ ಗೆಲುವಿಗೆ ಕಾರಣರಾದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ. ಆದರೆ, ಈ ಲೈಟ್ ಶೋಗಳು ನನಗೆ ಶಾಕ್ ಆಗುವ ರೀತಿಯ ತಲೆನೋವು ನೀಡುತ್ತಿದ್ದವು. ನನ್ನ ಕಣ್ಣುಗಳನ್ನು ಆಟಕ್ಕೆ ರೀ ಅಡ್ಜಸ್ಟ್ ಮಾಡಿಕೊಳ್ಳಲು ಕೆಲ ಸಮಯ ಹಿಡಿಯುತ್ತಿತ್ತು. ನನ್ನ ಪ್ರಕಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಥ ಲೈಟ್ ಶೋಗಳನ್ನು ಆಯೋಜಿಸುವುದು ಅತ್ಯಂತ ಮೂರ್ಖತನದ ಐಡಿಯಾ ಎಂದು ಹೇಳಿದ್ದಾರೆ. ಹಾಗಾಗಿ ಇಂಥ ಲೈಟ್ ಶೋಗಳು ಆದಾಗ ನಾನು ಕವರ್‌ಅಪ್ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ಬಹುತೇಕವಾಗಿ ಇದನ್ನು ನಾನು ಇಗ್ನೋರ್ ಮಾಡುತ್ತೇನೆ. ಆದರೆ, ಇದು ಬಹಳ ಕೆಟ್ಟದಾಗಿರುತ್ತದೆ. ಅತ್ಯಂತ ಕೆಟ್ಟ ಐಡಿಯಾ ಇದು. ಇದು ಪ್ರೇಕ್ಷಕರಿಗೆ ಒಳ್ಳೆಯದಾಗಿದ್ದರೂ, ಆಟಗಾರರಿಗೆ ಮಾತ್ರ ಬಹಳ ಕಷ್ಟವಾಗುತ್ತದೆ' ಎಂದು ಹೇಳಿದ್ದಾರೆ.
ಇನ್ನೊಂದೆಡೆ ನೆದರ್ಲೆಂಡ್ಸ್ ವಿರುದ್ಧ ಶತಕ ಬಾರಿಸಿದ ಆಸೀಸ್‌ನ ಮತ್ತೊಬ್ಬ ಹಿರಿಯ ಆಟಗಾರ ಡೇವಿಡ್ ವಾರ್ನರ್, ಮ್ಯಾಕ್ಸ್‌ವೆಲ್ ಮಾತನ್ನು ನಿರಾಕರಿಸಿದ್ದಾರೆ. ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಬಹಳ ಚಟುವಟಿಕೆಯಿಂದ ಇರುವ ಡೇವಿಡ್ ವಾರ್ನರ್, ಈ ಪೋಸ್ಟ್‌ಅನ್ನು ರೀ ಪೋಸ್ಟ್ ಮಾಡಿದ್ದು ಸಹ ಆಟಗಾರನ ಅಭಿಪ್ರಾಯಕ್ಕಿಂತ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ., “ನಾನು ಬೆಳಕಿನ ಪ್ರದರ್ಶನವನ್ನು ಸಂಪೂರ್ಣವಾಗಿ ಇಷ್ಟಪಟ್ಟೆ, ಎಂತಹ ವಾತಾವರಣ. ಇದು ಅಭಿಮಾನಿಗಳ ಬಗ್ಗೆ ಅಷ್ಟೆ. ನೀವೆಲ್ಲರೂ ಇಲ್ಲದೆ ನಾವು ಇಷ್ಟಪಡುವದನ್ನು ಮಾಡಲು ಸಾಧ್ಯವಾಗುವುದಿಲ್ಲ' ಎಂದು ವಾರ್ನರ್ ಬರೆದುಕೊಂಡಿದ್ದಾರೆ.
ಲಂಕಾ ಬೌಲರ್‌ಗಳ ಮಾರಕ ದಾಳಿ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಣಿಸಲು ಕೇವಲ 157 ರನ್ ಗುರಿ..!
ನೆದರ್ಲೆಂಡ್ಸ್ ವಿರುದ್ಧದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಪಾಕಿಸ್ತಾನಕ್ಕಿಂತ ಎರಡು ಅಂಕಗಳ ಮುನ್ನಡೆಯನ್ನು ಕಂಡುಕೊಂಡಿದೆ. ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ತಲಾ 8 ಅಂಕದೊಂದಿಗೆ 2 ಹಾಗೂ ಮೂರನೇ ಸ್ಥಾನದಲ್ಲಿದ್ದರೆ, ಟೂರ್ನಿಯಲ್ಲಿ ಈವರೆಗೂ ಅಜೇಯವಾಗಿರುವ ಭಾರತ 5 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
IPL ಆಟಗಾರರ ಹರಾಜಿಗೆ ಡೇಟ್ ಫಿಕ್ಸ್..? ಎಲ್ಲಿ? ಯಾವಾಗ? ಇಲ್ಲಿದೆ ನೋಡಿ ಲೇಟೆಸ್ಟ್ ಅಪ್‌ಡೇಟ್