24ನೇ ಹುಟ್ಟುಹಬ್ಬ ಆಚರಿಸಿಕೊಂಡ ಕ್ರಿಕೆಟಿಗ ಶುಭ್‌ಮನ್ ಗಿಲ್‌ಶುಭ್‌ಮನ್ ಗಿಲ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸಚಿನ್ ತೆಂಡುಲ್ಕರ್ತೆಂಡುಲ್ಕರ್ ಟ್ವೀಟ್ ಬೆನ್ನಲ್ಲೇ ಮೀಮ್ಸ್ ವೈರಲ್

ಮುಂಬೈ(ಸೆ.09): ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್ ಶುಭ್‌ಮನ್ ಗಿಲ್, ಶುಕ್ರವಾರ(ಸೆ.08)ದಂದು ತಮ್ಮ 24ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಇದೇ ವೇಳೆ ಭಾರತದ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಗಿಲ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ. ಸಚಿನ್ ತೆಂಡುಲ್ಕರ್, ಶುಭ್‌ಮನ್ ಗಿಲ್‌ಗೆ ಶುಭ ಕೋರುತ್ತಿದ್ದಯೇ ಸಾರಾ ತೆಂಡುಲ್ಕರ್ ಹಾಗೂ ಶುಭ್‌ಮನ್ ಗಿಲ್ ಹೆಸರು ಮತ್ತೊಮ್ಮೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡ್ ಆಗಿ ಹೋಯಿತು.

ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಹಾಗೂ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಮಾತು ಸದ್ಯ ಗುಟ್ಟಾಗಿ ಏನೂ ಉಳಿದಿಲ್ಲ. ಹಾಗಂತ ಶುಭ್‌ಮನ್ ಗಿಲ್ ಆಗಲಿ ಅಥವಾ ಸಾರಾ ತೆಂಡುಲ್ಕರ್ ಆಗಲಿ ತಮ್ಮ ಡೇಟಿಂಗ್ ವಿಚಾರವನ್ನು ಖಚಿತಪಡಿಸಿಲ್ಲವಾದರೂ, ಅವರು ಹಾಕುವ ಕೆಲವು ಪೋಸ್ಟ್‌ಗಳು ಗಾಳಿಸುದ್ದಿಗೆ ಮತ್ತಷ್ಟು ಖಚಿತತೆ ತಂದು ಕೊಡುತ್ತಿದೆ.

ಹೀಗಿರುವಾಗಲೇ ಸಾರಾ ತೆಂಡುಲ್ಕರ್ ತಂದೆ ಸಚಿನ್ ತೆಂಡುಲ್ಕರ್, ಕ್ರಿಕೆಟಿಗ ಶುಭ್‌ಮನ್ ಗಿಲ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಸಚಿನ್ ತೆಂಡುಲ್ಕರ್, "ಹುಟ್ಟುಹಬ್ಬದ ಶುಭಾಶಯಗಳು ನಿಮಗೆ. ಮುಂಬರುವ ವರ್ಷಗಳು ನಿಮಗೆ ಮತ್ತಷ್ಟು ರನ್ ಗಳಿಸುವ ಹಾಗೂ ಗ್ರೇಟ್ ಮೆಮೋರಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ" ಎಂದು ಟ್ವೀಟ್ ಮಾಡಿದ್ದರು.

Scroll to load tweet…

Asia Cup 2023 ಪಾಕ್‌ ಎದುರಿನ ಹೈವೋಲ್ಟೇಜ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಮತ್ತಷ್ಟು ಬಲ..!

ಸಚಿನ್ ತೆಂಡುಲ್ಕರ್ ಹೀಗೆ ಟ್ವೀಟ್ ಮಾಡುತ್ತಿದ್ದಂತೆಯೇ, ಈಗಾಗಲೇ ಹರಿದಾಡುತ್ತಿರುವ ಸಾರಾ-ಗಿಲ್ ರೂಮರ್ಸ್‌ಗೆ ಮತ್ತಷ್ಟು ಬಲ ಬಂದಂತೆ ಆಗಿದ್ದು, ನೆಟ್ಟಿಗರು ಹಲವು ರೀತಿಯ ಮೀಮ್ಸ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಪೈಕಿ ಕೆಲವು ನೆಟ್ಟಿಗರು, ಈ ಟ್ವೀಟ್ ಹಿಂದೆ ಸಾರಾ ತೆಂಡುಲ್ಕರ್ ಕೈವಾಡವಿದೆ ಎಂದು ಕಾಲೆಳೆದಿದ್ದಾರೆ. 

ಇನ್ನೋರ್ವ ನೆಟ್ಟಿಗ, ನಿಮ್ಮ ಸ್ವಂತ ಅಕೌಟ್‌ನಿಂದ ಬನ್ನಿ ಸಾರಾ ಎಂದು ತಮಾಷೆ ಮಾಡಿದ್ದಾರೆ. ಇನ್ನೋರ್ವ ನೆಟ್ಟಿಗ, ಪಾಜಿ ದಯವಿಟ್ಟು ನಿಮ್ಮ ಫೋನ್ ಹಾಗೂ ಟ್ವಿಟರ್ ಪಾಸ್‌ವರ್ಡ್‌ ಚೇಂಜ್ ಮಾಡಿ ಎಂದು ತೆಂಡುಲ್ಕರ್ ಕಾಲೆಳೆದಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…

ಒಟ್ಟಿನಲ್ಲಿ ಸಾರಾ ತೆಂಡುಲ್ಕರ್ ಆಗಲಿ ಅಥವಾ ಶುಭ್‌ಮನ್ ಗಿಲ್ ಆಗಲಿ ಇದುವರೆಗೂ ತಮ್ಮ ಲವ್ ಸ್ಟೋರಿಯನ್ನು ಅಲ್ಲಗಳೆದೂ ಇಲ್ಲ ಅಥವಾ ಇದೇ ಎಂದು ಖಚಿತಪಡಿಸಿಯೂ ಇಲ್ಲ. ಒಟ್ಟಿನಲ್ಲಿ 2023ರ ಏಕದಿನ ವಿಶ್ವಕಪ್ ಬಳಿಕವಾದರೂ, ಈ ಕುರಿತಂತೆ ಏನಾದರೂ ಪಾಸಿಟಿವ್ ರಿಸಲ್ಟ್ ಹೊರಬೀಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.