Asianet Suvarna News Asianet Suvarna News

ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್‌..!

* ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ತೆರೆ ಕಾಣಲು ಕ್ಷಣಗಣನೆ

* ಮಿಥಾಲಿ ಪಾತ್ರದಲ್ಲಿ ಖ್ಯಾತ ನಟಿ ತಾಪ್ಸಿ ಪನ್ನು ನಟಿಸಿದ್ದಾರೆ

* ಟ್ವೀಟ್ ಮೂಲಕ ಶಬ್ಬಾಶ್ ಮಿಥು ಚಿತ್ರ ಬಿಡುಗಡೆಯ ದಿನಾಂಕ ಖಚಿತಪಡಿಸಿದ ಮಿಥಾಲಿ

Legendry Cricketer Mithali Raj Shares Biopic Release Date With Inspirational Tweet kvn
Author
Bengaluru, First Published Apr 30, 2022, 6:20 PM IST

ನವದೆಹಲಿ(ಏ.30): ಭಾರತದ ಮಹಿಳಾ ಏಕದಿನ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ (Mithali Raj) ಜೀವನಧಾರಿತ ಸಿನೆಮಾ ಬಿಡುಗಡೆಗೆ ಸಜ್ಜುಗೊಂಡಿದ್ದು, ಜುಲೈ 15ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಮಿಥಾಲಿ ಪಾತ್ರದಲ್ಲಿ ಖ್ಯಾತ ನಟಿ ತಾಪ್ಸಿ ಪನ್ನು (Tapsee Pannu) ನಟಿಸಿದ್ದು, ರಾಹುಲ್‌ ಧೊಲಾಕಿಯಾ ನಿರ್ದೇಶಿಸಿದ್ದಾರೆ. ಚಿತ್ರ ತೆರೆ ಕಾಣುವ ದಿನಾಂಕವನ್ನು ಸ್ವತಃ ತಾಪ್ಸಿ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಬಹಿರಂಗಗೊಳಿಸಿದ್ದಾರೆ.

'ಶಬ್ಬಾಶ್ ಮಿಥು' ಹೆಸರಿನ ಸಿನೆಮಾ ತೆರೆ ಕಾಣುತ್ತಿರುವುದಕ್ಕೆ ಮಿಥಾಲಿ ರಾಜ್ ಕೂಡಾ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮಿಥಾಲಿ ರಾಜ್, ಕನಸು ಹೊಂದಿರುವಂತ ಹುಡುಗಿಗಿಂತ ಬಲಿಷ್ಠವಾದದ್ದು ಬೇರ್ಯಾರು ಇಲ್ಲ. ಇದು ಕೂಡಾ ಅಂತಹದ್ದೇ ಕಥೆ. ಜಂಟಲ್‌ಮನ್ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಹೊಸ ಕನಸು ಹೊತ್ತು ಬ್ಯಾಟ್ ಹಿಡಿದ ಆಟಗಾರ್ತಿಯ ಕಥೆ. ಮುಂಬರುವ ಜುಲೈ 15ರಂದು Shabaash Mithu ಚಿತ್ರವು ತೆರೆ ಕಾಣಲಿದೆ ಎಂದು ಮಿಥಾಲಿ ರಾಜ್ ಟ್ವೀಟ್ ಮಾಡಿದ್ದಾರೆ.

ಮಿಥಾಲಿ ರಾಜ್ ಹಾಗೂ ಜೂಲನ್ ಗೋಸ್ವಾಮಿ ಕಳೆದೆರಡು ದಶಕಗಳಿಂದ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಮಿಥಾಲಿ ರಾಜ್‌ 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಜೂಲನ್ ಗೋಸ್ವಾಮಿ 2002ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದರೆ, ಜೂಲನ್ ಗೋಸ್ವಾಮಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿದ್ದಾರೆ. 

Happy Birthday Rohit Sharma: ಹಿಟ್‌ಮ್ಯಾನ್‌ ಕುರಿತಾದ ಟಾಪ್ 5 ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಇನ್ನು ಮಿಥಾಲಿ ರಾಜ್ ಅವರಂತೆಯೇ ಜೂಲನ್ ಗೋಸ್ವಾಮಿ (Jhulan Goswami) ಜೀವನಾಧಾರಿತ ಚಿತ್ರವೂ ನಿರ್ಮಾಣವಾಗುತ್ತಿದೆ. 'ಚಕ್ಡಾ ಎಕ್ಸ್‌ಪ್ರೆಸ್' ಹೆಸರಿನ ಚಿತ್ರದಲ್ಲಿ ಜೂಲನ್ ಗೋಸ್ವಾಮಿ ಪಾತ್ರವನ್ನು ಅನುಷ್ಕಾ ಶರ್ಮಾ ನಿರ್ವಹಿಸಲಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ ಶೀಘ್ರ ಲಯಕ್ಕೆ: ಗಂಗೂಲಿ ವಿಶ್ವಾಸ

ಮುಂಬೈ: ಐಪಿಎಲ್‌ನಲ್ಲಿ ರನ್‌ ಗಳಿಸಲು ಪರದಾಡುತ್ತಿರುವ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಹಾಗೂ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಬೆನ್ನಿಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ನಿಂತಿದ್ದು, ಇಬ್ಬರೂ ಶೀಘ್ರದಲ್ಲೇ ತಮ್ಮ ಎಂದಿನ ಲಯಕ್ಕೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

‘ಅವರಿಬ್ಬರೂ ಶ್ರೇಷ್ಠ ಆಟಗಾರರು. ಖಂಡಿತಾ ಅವರು ಶೀಘ್ರದಲ್ಲೇ ಲಯ ಕಂಡುಕೊಂಡು ರನ್‌ ಗಳಿಸಲು ಶುರು ಮಾಡುತ್ತಾರೆ. ಕೊಹ್ಲಿ ಈಗ ಯಾವ ಪರಿಸ್ಥಿತಿಯಲ್ಲಿದ್ದಾರೆಂದು ಗೊತ್ತಿಲ್ಲ. ಆದರೆ ಅವರು ಲಯಕ್ಕೆ ಮರಳುತ್ತಾರೆ. ಕೊಹ್ಲಿ ವಿಶ್ವ ಶ್ರೇಷ್ಠ ಆಟಗಾರ’ ಎಂದು ಕೊಂಡಾಡಿದ್ದಾರೆ.
 

Follow Us:
Download App:
  • android
  • ios