ಟೀಂ ಇಂಡಿಯಾ ಮಾಜಿ ನಾಯಕ, 1983ರ ವಿಶ್ವಕಪ್ ಕಪ್ ವಿಜೇತ ನಾಯಕ ಕಪಿಲ್ ದೇವ್‌ ತೀವ್ರ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ.  

ದೆಹಲಿ(ಅ.23): ಐಪಿಎಲ್ ಕ್ರಿಕೆಟ್ ಹಬ್ಬದಲ್ಲಿ ಮಿಂದಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇದೀಗ ಆಘಾತ ಎದುರಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ, ಭಾರತದಕ್ಕೆ ಚೊಚ್ಚಲ ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್ ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನವದೆಹಲಿಯ ಫೋರ್ಟೀಸ್ ಆಸ್ಪತ್ರೆಗೆ ಕಪಿಲ್ ದೇವ್ ಅವರನ್ನು ದಾಖಲಿಸಲಾಗಿದೆ.

ಭಾರತದ ಈ ಕ್ರಿಕೆಟರ್ಸ್‌ಗಳಲ್ಲಿದೆ ಲಕ್ಷುರಿ ಪ್ರೈವೆಟ್ ಜೆಟ್..!..

ತೀವ್ರ ಪ್ರಮಾಣದ ಹೃದಯಾಘಾತವಾಗಿರುವ ಕಾರಣ 61 ವರ್ಷದ ಕಪಿಲ್ ದೇವ್ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ನಡೆಸಲಾಗಿದೆ. ಕಪಿಲ್ ದೇವ್ ಹೃದಯಾಘಾತ ಸುದ್ದಿ ಹೊರಬೀಳುತ್ತಿದ್ದಂತೆ ಟೀಂ ಇಂಡಿಯಾ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು, ವಿಶ್ವ ಕ್ರಿಕೆಟಿಗರು ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ. ಇತ್ತ ಅಭಿಮಾನಿಗಳು ಕೂಡ ಹರಿಯಾಣ ಹರಿಕೇನ್ ಶೀಘ್ರವೇ ಚೇತರಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ.

Scroll to load tweet…
Scroll to load tweet…
Scroll to load tweet…

ಕಪಿಲ್ ದೇವ್ ಮಧುಮೇಹ ಸೇರಿದಂತೆ ಇತರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಐಪಿಎಲ್ 2020 ಟೂರ್ನಿಯಲ್ಲಿ ಸಕ್ರೀಯರಾಗಿದ್ದ ಕಪಿಲ್ ದೇವ್, ಪಂದ್ಯದ ವಿಮರ್ಶೆ ಸೇರಿದಂತೆ ಹಲವು ರೀತಿಯಲ್ಲಿ ಸಕ್ರಿಯರಾಗಿದ್ದರು. ಆದರೆ ಮಧ್ಯಾಹ್ನ ವೇಳೆ ತೀವ್ರ ಎದೆ ನೋವು ಕಾಣಿಸಿಕೊಂಡ ಕಪಿಲ್ ದೇವ್ ದಿಢೀರ್ ಕುಸಿದಿದ್ದಾರೆ. ತಕ್ಷಣವೇ ಫೋರ್ಟೀಸ್ ಆಸ್ಪತ್ರೆ ತುರ್ತುು ಘಟಕ್ಕೆ ದಾಖಲಿಸಲಾಗಿದೆ. ಮಹ್ಯಾಹ್ನ 1 ಗಂಟೆಗೆ ವೈದ್ಯ ಅತುಲ್ ಮಾಥುರ್ ನೇತೃತ್ವದಲ್ಲಿ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ನಡೆಸಲಾಗಿದೆ. 

ತೀವ್ರ ಎದೆನೋವು ಕಾಣಿಸಿಕೊಂಡ ಕ್ರಿಕೆಟಿಗ ಕಪಿಲ್ ದೇವ್ ಆಸ್ಪತ್ರೆ ದಾಖಲಾಗಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ಪ್ರಕಟಣೆಯಲ್ಲಿ ಹೇಳಿದ್ದಾರೆ.