ದುಬೈ(ಮಾ.10): ಲೆಗ್‌ ಸ್ಪಿನ್ನರ್‌ ಪೂನಂ ಯಾದವ್‌ ಟಿ20 ವಿಶ್ವಕಪ್‌ನ ಕನಸಿನ ತಂಡದಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಆಟಗಾರ್ತಿ. ಇನ್ನು 16 ವರ್ಷದ ಶಫಾಲಿ ವರ್ಮಾ 12ನೇ ಆಟಗಾರ್ತಿಯಾಗಿ ಸ್ಥಾನ ಪಡೆದಿದ್ದಾರೆ. 

ಸೋಮವಾರ ಐಸಿಸಿ ವಿಶ್ವಕಪ್‌ ತಂಡವನ್ನು ಪ್ರಕಟಿಸಿತು. ಆಸ್ಪ್ರೇಲಿಯಾದ ಐವರು, ಇಂಗ್ಲೆಂಡ್‌ನ ನಾಲ್ವರು ಆಟಗಾರ್ತಿಯರು ತಂಡದಲ್ಲಿದ್ದು, ಆಸ್ಪ್ರೇಲಿಯಾದ ಮೆಗ್‌ ಲ್ಯಾನಿಂಗ್‌ರನ್ನು ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. 

ಶಫಾಲಿ ಆಡಲಿಲ್ಲ, ಭಾರತ ಗೆಲ್ಲಲಿಲ್ಲ; ಆಸ್ಟ್ರೇಲಿಯಾಗೆ ಮಹಿಳಾ ಟಿ20 ವಿಶ್ವಕಪ್ ಟ್ರೋಫಿ

ಪೂನಂ ಯಾದವ್ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಕೇವಲ 19 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿನ ರೂವಾರಿ ಎನಿಸಿದ್ದರು. ಆಡಿದ 5 ಪಂದ್ಯಗಳಲ್ಲಿ ಪೂನಂ 10 ವಿಕೆಟ್ ಪಡೆದಿದ್ದರು.  ಇನ್ನು ಶಫಾಲಿ ವರ್ಮಾ 163 ರನ್ ಬಾರಿಸಿ ಮಿಂಚಿದ್ದರು.

ಮೈದಾನದಲ್ಲಿ ಕಣ್ಣೀರಿಟ್ಟ ಭಾರತ ಮಹಿಳಾ ತಂಡಕ್ಕೆ ದಿಗ್ಗಜರ ಬೆಂಬಲ!

ಮಾರ್ಚ್ 08ರಂದು ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 85 ರನ್‌ಗಳಿಂದ ಶರಣಾಗಿತ್ತು. ಈ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಗಿತ್ತು.  ವೀಕ್ಷಕ ವಿವರಣೆಗಾರರಾದ ಇಯಾನ್‌ ಬಿಷಪ್‌, ಅಂಜುಂ ಚೋಪ್ರಾ, ಲೀಸಾ ಸ್ತಾಲೇಕರ್‌, ಪತ್ರಕರ್ತ ರಾಫ್‌ ನಿಕೋಲ್ಸನ್‌ ಹಾಗೂ ಐಸಿಸಿ ಪ್ರತಿನಿಧಿ ಹೋಲಿ ಕೊಲ್ವಿನ್‌ ತಂಡವನ್ನು ಆಯ್ಕೆ ಮಾಡಿದರು.

ಐಸಿಸಿ ಕನಸಿನ ತಂಡ: ಅಲೀಸಾ ಹೀಲಿ, ಬೆಥ್‌ ಮೂನಿ (ಆಸ್ಪ್ರೇಲಿಯಾ), ನತಾಲಿ ಶೀವರ್‌, ಹೀಥರ್‌ ನೈಟ್‌ (ಇಂಗ್ಲೆಂಡ್‌), ಮೆಗ್‌ ಲ್ಯಾನಿಂಗ್‌ (ಆಸ್ಪ್ರೇಲಿಯಾ, ನಾಯಕಿ), ಲಾರಾ ವುಲ್ವಾರ್ಟ್‌ (ದ.ಆಫ್ರಿಕಾ), ಜೆಸ್‌ ಜೊನಾಸೆನ್‌ (ಆಸ್ಪ್ರೇಲಿಯಾ), ಸೋಫಿ ಎಕ್ಲೆಸ್ಟೋನ್‌, ಆನ್ಯಾ ಶ್ರಬ್‌ಸೋಲ್‌ (ಇಂಗ್ಲೆಂಡ್‌), ಮೆಗಾನ್‌ ಶ್ಯುಟ್‌ (ಆಸ್ಪ್ರೇಲಿಯಾ), ಪೂನಂ ಯಾದವ್‌ , ಶಫಾಲಿ ವರ್ಮಾ (ಭಾರತ, 12ನೇ ಆಟಗಾರ್ತಿ)

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"