ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ದಾಪುಗಾಲಿಡುತ್ತಿದ್ದು, ಪಾಕಿಸ್ತಾನ ತವರಿನಲ್ಲಿ ಟೆಸ್ಟ್ ಗೆಲುವಿನ ಕನಸು ಕಾಣುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕರಾಚಿ(ಜ.29): ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡವು ಗೆಲುವಿನ ನಿರೀಕ್ಷೆಯಲ್ಲಿದೆ. ಮೂರನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 187 ರನ್‌ ಬಾರಿಸಿದ್ದು, ಕೇವಲ 29 ರನ್‌ ಮುನ್ನಡೆ ಸಾಧಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ 378 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದ ಪಾಕಿಸ್ತಾನ ತಂಡವು ಒಟ್ಟಾರೆ ಮೊದಲ ಇನಿಂಗ್ಸ್‌ನಲ್ಲಿ 158 ರನ್‌ಗಳ ಮುನ್ನಡೆ ಸಾಧಿಸಿತ್ತು. ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು 48 ರನ್‌ ಕಲೆಹಾಕುವಷ್ಟರಲ್ಲೇ ಡೀನ್ ಎಲ್ಗಾರ್(29) ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಏಯ್ಡನ್ ಮಾರ್ಕ್‌ರಮ್‌ ಹಾಗೂ ರಾಸಿ ವಾನ್ ಡರ್‌ ಡುಸೇನ್‌ ಜೋಡಿ 127 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಾಸಿರ್ ಶಾ ಯಶಸ್ವಿಯಾದರು. ರಾಸಿ ಡುಸೇನ್‌ 64 ರನ್‌ ಬಾರಿಸಿ ಯಾಸಿರ್ ಶಾಗೆ ವಿಕೆಟ್ ಒಪ್ಪಿಸಿದರು. ಇನ್ನು ಇದಾಗಿ ತಂಡ ಇನ್ನು 8 ರನ್ ಕಲೆಹಾಕುವಷ್ಟರಲ್ಲಿ ಮಾರ್ಕ್‌ರಮ್‌(74) ಹಾಗೂ ಮಾಜಿ ನಾಯಕ ಫಾಫ್‌ ಡುಪ್ಲೆಸಿಸ್‌(10) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Scroll to load tweet…

ಫವಾದ್‌ ಆಲಂ ಆಕರ್ಷಕ ಶತಕ: ಪಾಕ್‌ಗೆ ಇನ್ನಿಂಗ್ಸ್‌ ಮುನ್ನಡೆ

ಇದೀಗ ಸ್ಪಿನ್ನರ್ ಕೇಶವ್‌ ಮಹರಾಜ್(2) ಹಾಗೂ ನಾಯಕ ಕ್ವಿಂಟನ್‌ ಡಿ ಕಾಕ್(0) ನಾಲ್ಕನೇ ದಿನದಾಟದಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ಡಿಕಾಕ್ ಬ್ಯಾಟಿಂಗ್‌ ಮೇಲೆ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 220&187/4
ಪಾಕಿಸ್ತಾನ: 378/10

(*ಮೂರನೇ ದಿನದಾಟ ಮುಕ್ತಾಯದ ವೇಳೆಗೆ)