ಕ್ರಿಕೆಟ್‌ಗೆ ಕೊರೋನಾ ವೈರಸ್ ಬಿಸಿ; KSCA ಪ್ರಶಸ್ತಿ ಸಮಾರಂಭ ಮುಂದೂಡಿಕೆ!

ಕೊರೋನಾ ವೈರಸ್ ಆತಂಕ ಕ್ರಿಕೆಟ್‌ಗೂ ತಟ್ಟಿದೆ. ಈಗಾಗಲೇ ಐಪಿಎಲ್ ಆಯೋಜನೆಗೆ ಬಿಸಿಸಿಐ ಹೆಣಗಾಡುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೂ ಕೊರೋನಾ ವೈರಸ್ ತಟ್ಟಿದೆ. ವೈರಸ್ ಆತಂಕದಿಂದ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮುಂದೂಡಲಾಗಿದೆ.

KSCA annual award function postponed due to coronavirus

ಬೆಂಗಳೂರು(ಮಾ.12): ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಎಲ್ಲಾ ಕಾರ್ಯಕ್ರಮಗಳು ರದ್ದಾಗುತ್ತಿದೆ. ಕ್ರೀಡಾಕೂಟ ಮುಂದೂಡಿಕೆಯಾಗುತ್ತಿದೆ. ಇದೀಗ ವೈರಸ್ ಆತಂಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೂ ತಟ್ಟಿದೆ. ಮಾರ್ಚ್ 22ರಂದು ಆಯೋಜಿಸಲಾಗಿದ್ದ ಕೆಎಸ್‌ಸಿಎ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂದೂಡಲಾಗಿದೆ.

ಇದನ್ನೂ ಓದಿ: ಕ್ರಿಕೆಟ್‌ಗೆ ತಟ್ಟಿತೂ ಕೊರೋನಾ ವೈರಸ್; ಪಂದ್ಯ ಮುಂದೂಡಿಕೆ!

ಈ ಬಾರಿಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಯ್ಯದ್ ಮುಷ್ತಾಕ್ ಆಲಿ ಹಾಗೂ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡದ ಕ್ರಿಕೆಟಿಗರು ಅಭಿನಂದಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಇದರ ಜೊತೆಗೆ ಪ್ರತಿ ವರ್ಷದಂತೆ ಕಳೆದ ಸಾಲಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು 

ಇದನ್ನೂ ಓದಿ:ಈ ವರ್ಷ IPL ಆಯೋಜನೆ ಬೇಡವೆಂದ ವಿದೇಶಾಂಗ ಸಚಿವಾಲಯ..!

ಆದರೆ ಕೊರೋನಾ ವೈರಸ್ ಆತಂಕದಿಂದ ಮೇ 22 ರಂದು ಆಯೋಜಿಸಿದ್ದ ಸಮಾರಂಭವನ್ನು ಮುಂದೂಡಲಾಗಿದೆ. ಈ ಕುರಿತು ಸಭೆ ನಡೆಸಿದ ಕೆಎಸ್‌ಸಿಎ ಪದಾಧಿಕಾರಿಗಳು ಸಮಾರಂಭ ಮುಂದೂಡಲು ನಿರ್ಧರಿಸಿದ್ದಾರೆ. ಕೊರೋನಾ ವೈರಸ್ ಹತೋಟಿಗೆ ಬಂದ ಬಳಿಕ ನೂತನ ದಿನಾಂಕ ಪ್ರಕಟಿಸಲಾಗುವುದು ಎಂದು ಕೆಎಸ್‌ಸಿಎ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ್ ಹೇಳಿದ್ದಾರೆ.
 
 

Latest Videos
Follow Us:
Download App:
  • android
  • ios