ಕೆ.ಎಲ್.ರಾಹುಲ್ ಜನವರಿ 30ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮೊಣಕೈ ನೋವಿನಿಂದ ಚೇತರಿಸಿಕೊಂಡ ರಾಹುಲ್, 2020ರ ನಂತರ ಮೊದಲ ಬಾರಿಗೆ ರಣಜಿ ಪಂದ್ಯವನ್ನಾಡಲಿದ್ದಾರೆ. ವೇಗಿ ವಿದ್ವತ್ ಕಾವೇರಪ್ಪ ತಂಡಕ್ಕೆ ಮರಳಿದ್ದಾರೆ. ವಿದ್ಯಾಧರ್ ಪಾಟೀಲ್ ತಂಡದಿಂದ ಹೊರಬಿದ್ದಿದ್ದಾರೆ.
ಬೆಂಗಳೂರು: ತಾರಾ ಬ್ಯಾಟರ್ ಕೆ.ಎಲ್.ರಾಹುಲ್ ಜ.30ರಿಂದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಸೋಮವಾರ 17 ಸದಸ್ಯರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಎ) ಪ್ರಕಟಿಸಿದ್ದು, ಪಟ್ಟಿಯಲ್ಲಿ ರಾಹುಲ್ ಹೆಸರಿದೆ.
ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬಂದ ಬಳಿಕ ರಾಹುಲ್‌ಗೆ ಮೊಣಕೈ ನೋವು ಕಾಣಿಸಿಕೊಂಡಿತ್ತು. ಬಿಸಿಸಿಐ ವೈದ್ಯಕೀಯ ತಂಡದಿಂದ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿ ಕೊಂಡಿರುವ ರಾಹುಲ್, ಪಂದ್ಯದಲ್ಲಿ ಆಡಲು ಫಿಟ್ ಇದ್ದಾರೆ. ಕಳೆದ ಬಾರಿ ಅವರು ರಣಜಿ ಪಂದ್ಯದಲ್ಲಿ ಆಡಿದ್ದು 2020ರಲ್ಲಿ, ಕೋಲ್ಕತಾದಲ್ಲಿ ಬಂಗಾಳ ವಿರುದ್ಧ ಆಡಿದ್ದರು. ಇನ್ನು, ವೇಗಿ ವಿದ್ವತ್ ಕಾವೇರಪ್ಪ ಸಹ ತಂಡಕ್ಕೆ ವಾಪಸಾಗಿದ್ದಾರೆ. ವಿದ್ಯಾಧ ಪಾಟೀಲ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಕೊಹ್ಲಿ ರೋಹಿತ್ ಹಿಂದಿಕ್ಕಿ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗನಾಗಿ ಹೊರಹೊಮ್ಮಿದ ಈ ಆಟಗಾರ!
ಇಂದು ದೆಹಲಿ ತಂಡ ಸೇರಿಕೊಳ್ಳಲಿರುವ ಕೊಹ್ಲಿ
12 ವರ್ಷ ಬಳಿಕ ರಣಜಿ ಪಂದ್ಯವನ್ನು ಆಡಲು ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ ಮಂಗಳವಾರ ದೆಹಲಿ ತಂಡ ಕೂಡಿಕೊಂಡು ಅಭ್ಯಾಸ ಮುಂದುವರಿಸಲಿದ್ದಾರೆ. ಕಳೆದೆರಡು ಮೂರು ದಿನಗಳಿಂದ ವಿರಾಟ್, ಮುಂಬೈನಲ್ಲಿ ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಜೊತೆ ಅಭ್ಯಾಸ ನಡೆಸುತ್ತಿದ್ದರು.
ಚೆಪಾಕ್‌ನಲ್ಲಿ ಟೀಂ ಇಂಡಿಯಾಗೆ ಗೆಲುವಿನ ತಿಲಕ! ಇಂಗ್ಲೆಂಡ್ ಎದುರು ಸತತ ಎರಡನೇ ಗೆಲುವು
34 ವರ್ಷ ಬಳಿಕ ಪಾಕ್‌ನಲ್ಲಿ ಟೆಸ್ಟ್ ಗೆದ್ದ ವಿಂಡೀಸ್
ಮುಲ್ತಾನ್: ಪಾಕಿಸ್ತಾನ ವಿರುದ್ಧ 2ನೇ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ 120 ರನ್‌ಗಳ ಜಯ ಸಾಧಿಸಿ, 2 ಪಂದ್ಯಗಳ ಸರಣಿಯನ್ನು ಡ್ರಾ ಮಾಡಿಕೊಂಡಿದೆ. ಇದು 34 ವರ್ಷ ಬಳಿಕ ಪಾಕಿಸ್ತಾನ ನೆಲದಲ್ಲಿ ವಿಂಡೀಸ್‌ಗೆ ಸಿಕ್ಕ ಮೊದಲ ಟೆಸ್ಟ್ ಗೆಲುವು. ಇದಕ್ಕೂ ಮುನ್ನ 1990ರ ನವೆಂಬರ್‌ನಲ್ಲಿ ಫೈಸ್ಲಾಬಾದ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯವನ್ನು ವಿಂಡೀಸ್ 7 ವಿಕೆಟ್‌ಗಳಿಂದ ಗೆದ್ದಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದೆ. ಗೆಲ್ಲಲು 254 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ, 2ನೇ ಇನ್ನಿಂಗ್ಸಲ್ಲಿ 133 ರನ್‌ಗೆ ಆಲೌಟ್ ಆಯಿತು. ಜೊಮೆಲ್ ವಾರಿಕನ್ 5 ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸಲ್ಲಿ 38ಕ್ಕೆ 7 ವಿಕೆಟ್‌ನಿಂದ ಚೇತರಿಸಿಕೊಂಡು 163 ರನ್ ಕಲೆಹಾಕಿದ್ದ ವಿಂಡೀಸ್, ಪಾಕಿಸ್ತಾನವನ್ನು 154 ರನ್‌ಗೆ ಕಟ್ಟಿಹಾಕಿತ್ತು. 2ನೇ ಇನ್ನಿಂಗ್ಸಲ್ಲಿ ವಿಂಡೀಸ್ 244 ರನ್ ಗಳಿಸಿತ್ತು.
