ಆಫ್ಘಾನಿಸ್ತಾನದ ಅಝ್ಮತುಲ್ಲಾ ಓಮರ್‌ಝೈ 2024ರ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಗೆದ್ದಿದ್ದಾರೆ. ಓಮರ್‌ಝೈ 14 ಏಕದಿನ ಪಂದ್ಯಗಳಲ್ಲಿ 417 ರನ್ ಮತ್ತು 17 ವಿಕೆಟ್ ಪಡೆದ ಅಮೋಘ ಪ್ರದರ್ಶನ ನೀಡಿದ್ದರು. ರೋಹಿತ್ ಶರ್ಮಾ ಐಸಿಸಿ ವರ್ಷದ ಟಿ೨೦ ತಂಡದ ನಾಯಕರಾಗಿದ್ದಾರೆ. 

ದುಬೈ: 2024ನೇ ಸಾಲಿನ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗನ ಘೋಷಣೆಯಾಗಿದೆ. ಈ ಪ್ರಶಸ್ತಿಯ ರೇಸ್‌ನಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇದ್ದರು. ಈ ಪೈಕಿ ಈ ಇಬ್ಬರು ದಿಗ್ಗಜ ಆಟಗಾರರನ್ನು ಹಿಂದಿಕ್ಕಿ ಆಫ್ಘಾನಿಸ್ತಾನದ ಯುವ ಕ್ರಿಕೆಟಿಗ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 2024ನೇ ಸಾಲಿನ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗನಾಗಿ ಆಫ್ಘಾನಿಸ್ತಾನದ ಯುವ ಬ್ಯಾಟರ್ ಅಝ್ಮತುಲ್ಲಾ ಓಮರ್‌ಝೈ ಹೊರಹೊಮ್ಮಿದ್ದಾರೆ. 2023-24ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ಓಮರ್‌ಝೈ ಅತ್ಯಮೋಘ ಪ್ರದರ್ಶನ ತೋರಿದ್ದರು.

ಕಳೆದ ವರ್ಷ ಅದ್ಭುತ ಪ್ರದರ್ಶನ ತೋರಿದ ಓಮರ್‌ಝೈ:

ಕಳೆದ ವರ್ಷ ಓಮರ್‌ಝೈ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಇನ್ನು ಬೌಲಿಂಗ್‌ನಲ್ಲಿಯೂ ಓಮರ್‌ಝೈ ಆಫ್ಘಾನಿಸ್ತಾನ ಪರ ಮಿಂಚಿದ್ದರು. ಕಳೆದ ವರ್ಷ ಓಮರ್‌ಝೈ 14 ಏಕದಿನ ಪಂದ್ಯಗಳನ್ನಾಡಿ 417 ರನ್ ಸಿಡಿಸಿದ್ದರು. ಇನ್ನು ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲೂ 17 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

Scroll to load tweet…

ಐಸಿಸಿ ವರ್ಷದ ಟಿ20 ಟೀಂಗೆ ರೋಹಿತ್‌ ಶರ್ಮಾ ನಾಯಕ

ದುಬೈ: ಭಾರತ ತಂಡದ ನಾಯಕ ರೋಹಿತ್‌ ಶರ್ಮಾ 2024ರ ಐಸಿಸಿ ವರ್ಷದ ಟಿ20 ತಂಡದ ನಾಯಕರಾಗಿ ಘೋಷಿಸಲ್ಪಟ್ಟಿದ್ದಾರೆ. ಭಾರತ ತಂಡವನ್ನು ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಕ್ಕೆ ರೋಹಿತ್‌ಗೆ ಐಸಿಸಿ ಗೌರವ ಸಿಕ್ಕಿದೆ.

ಇದೇ ವೇಳೆ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ, ಅರ್ಶ್‌ದೀಪ್‌ ಸಿಂಗ್‌ ಹಾಗೂ ಆಲ್ರೌಂಡರ್‌ ಹಾರ್ದಿಕ್ ಪಾಂಡ್ಯಗೂ ಸ್ಥಾನ ಸಿಕ್ಕಿದೆ. ಇದೇ ವೇಳೆ ಐಸಿಸಿ ವರ್ಷದ ಮಹಿಳಾ ತಂಡದಲ್ಲಿ ಭಾರತದ ಸ್ಮೃತಿ ಮಂಧನಾ, ರಿಚಾ ಘೋಷ್‌ ಹಾಗೂ ದೀಪ್ತಿ ಶರ್ಮಾಗೆ ಸ್ಥಾನ ಸಿಕ್ಕಿದೆ.

ಚೆಪಾಕ್‌ನಲ್ಲಿ ಟೀಂ ಇಂಡಿಯಾಗೆ ಗೆಲುವಿನ ತಿಲಕ! ಇಂಗ್ಲೆಂಡ್ ಎದುರು ಸತತ ಎರಡನೇ ಗೆಲುವು

ವರ್ಷದ ಟಿ20 ತಂಡ (ಪುರುಷರು): ರೋಹಿತ್ ಶರ್ಮಾ (ನಾಯಕ), ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ಅರ್ಶ್‌ದೀಪ್‌ ಸಿಂಗ್‌ (ಎಲ್ಲ ಭಾರತೀಯರು), ಟ್ರ್ಯಾವಿಸ್‌ ಹೆಡ್‌ (ಆಸ್ಟ್ರೇಲಿಯಾ), ಫಿಲ್‌ ಸಾಲ್ಟ್‌ (ಇಂಗ್ಲೆಂಡ್‌), ಬಾಬರ್‌ ಆಜಂ (ಪಾಕಿಸ್ತಾನ), ನಿಕೋಲಸ್‌ ಪೂರನ್‌ (ವಿಂಡೀಸ್‌), ಸಿಕಂದರ್‌ ರಾಜಾ (ಜಿಂಬಾಬ್ವೆ), ರಶೀದ್‌ ಖಾನ್‌ (ಅಫ್ಘಾನಿಸ್ತಾನ), ವನಿಂಡು ಹಸರಂಗ (ಶ್ರೀಲಂಕಾ).

ವರ್ಷದ ಟಿ20 ತಂಡ (ಮಹಿಳೆಯರು): ಲಾರಾ ವೂಲ್ವಾರ್ಟ್‌(ನಾಯಕಿ), ಮಾರಿಯಾನೆ ಕಾಪ್‌ (ಇಬ್ಬರೂ ದ.ಆಫ್ರಿಕಾ), ಸ್ಮೃತಿ ಮಂಧನಾ, ದೀಪ್ತಿ ಶರ್ಮಾ, ರಿಚಾ ಘೋಷ್‌ (ಎಲ್ಲ ಭಾರತೀಯರು), ಚಾಮರಿ ಅಟಾಪಟ್ಟು (ಶ್ರೀಲಂಕಾ), ಹೇಯ್ಲಿ ಮ್ಯಾಥ್ಯೂಸ್‌ (ವಿಂಡೀಸ್‌), ನ್ಯಾಥಲಿ ಸ್ಕೀವರ್‌ (ಇಂಗ್ಲೆಂಡ್‌), ಅಮೇಲಿ ಕೆರ್ರ್‌ (ನ್ಯೂಜಿಲೆಂಡ್‌), ಒರ್ಲಾ ಪ್ರೆಂಡರ್‌ಗಾಸ್ಟ್‌ (ಐರ್ಲೆಂಡ್‌), ಸಾದಿಯಾ ಇಕ್ಬಾಲ್‌ (ಪಾಕಿಸ್ತಾನ).