ನವದೆಹಲಿ(ಜು.11): 40 ಸಿಆರ್‌ಪಿಎಫ್‌ ಯೋಧರ ಬಲಿ ಪಡೆದಿದ್ದ ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿ ಘಟನೆ ನಂತರ ಕಣಿವೆ ರಾಜ್ಯದಲ್ಲಿ ಒಟ್ಟು 93 ಉಗ್ರರನ್ನು ಸೇನೆ ಹೊಡೆದು ಉರುಳಿಸಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದೆ.

ಭದ್ರತಾ ಪಡೆಗಳ ನಿರಂತರ ಕಟ್ಟೆಚ್ಚರ ಮತ್ತು ಕಾರ್ಯಾಚರಣೆ ಪರಿಣಾಮ 2018ರ ಮೊದಲಾರ್ಧದಲ್ಲಿ ಶೇ.28ರಷ್ಟುಉಗ್ರ ಕೃತ್ಯಗಳು ಕಡಿಮೆಯಾಗಿದ್ದು, ಇದೀಗ ಶೇ.43ಕ್ಕೆ ಏರಿಕೆ ಆಗಿದೆ. ಇನ್ನು ಉಗ್ರಕೃತ್ಯಗಳಿಂದ ದೂರ ಸರಿಯುತ್ತಿರುವವರ ಸಂಖ್ಯೆ ಕೂಡ ಶೇ.22ರಷ್ಟುಏರಿಕೆ ಕಂಡಿದೆ. ಪುಲ್ವಾಮಾ ದಾಳಿ ಘಟನೆಯ ವ್ಯಕ್ತಿ ಮತ್ತು ಆತನಿಗೆ ವಾಹನ ನೀಡಿದ ವ್ಯಕ್ತಿ ಸೇರಿದಂತೆ ಘಟನೆಯ ಸಂಪೂರ್ಣ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ ಎಂದು ಗೃಹ ಇಲಾಖೆ ಸಹಾಯಕ ಸಚಿವ ಜಿ. ಕಿಶನ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಬಾಲಾಕೋಟ್ ವಾಯದಾಳಿ ಬಳಿಕ ಒಳನುಸುಳುವಿಕೆ ಕಡಿಮೆ: ಕೇಂದ್ರ