* ತವರಿನಲ್ಲೇ ಹರಿಣಗಳೆದುರು ಹೀನಾಯ ಸೋಲು ಕಂಡ ವಿಂಡೀಸ್* ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಇನಿಂಗ್ಸ್‌ ಗೆಲುವು* 5 ವಿಕೆಟ್ ಕಬಳಿಸಿ ಫಾರ್ಮ್‌ಗೆ ಮರಳಿದ ರಬಾಡ

ಸೇಂಟ್‌ ಲೂಸಿಯಾ(ಜೂ.14): ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಇನ್ನಿಂಗ್ಸ್‌ ಹಾಗೂ 63 ರನ್‌ಗಳ ಗೆಲುವು ಸಾಧಿಸಿ, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ತವರಿನಲ್ಲಿ ಕೆರಿಬಿಯನ್ನರು ಹೀನಾಯ ಸೋಲು ಅನುಭವಿಸಿದ್ದಾರೆ

ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಕೇವಲ 97 ರನ್‌ಗೆ ಆಲೌಟ್‌ ಆಗಿತ್ತು. ಲುಂಗಿ ಎಂಗಿಡಿ ಟೆಸ್ಟ್‌ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ 5 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ನೊಕಿಯೆ 4 ವಿಕೆಟ್ ಕಬಳಿಸಿ ವಿಂಡೀಸ್ ತಂಡವನ್ನು ಮೂರಂಕಿ ಮೊತ್ತದೊಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.

Scroll to load tweet…

ಇನ್ನು ದಕ್ಷಿಣ ಆಫ್ರಿಕಾ ತಂಡವು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ ಬಾರಿಸಿದ ಟೆಸ್ಟ್ ವೃತ್ತಿಜೀವನದ 6ನೇ ಶತಕ(141*)ದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 322 ರನ್‌ಗಳನ್ನು ಕಲೆಹಾಕಿತ್ತು. 

ಅಜೇಯ 141 ಚಚ್ಚಿದ ಕ್ವಿಂಟನ್ ಡಿ ಕಾಕ್; ಹರಿಣಗಳ ಹಿಡಿತದಲ್ಲಿ ವಿಂಡೀಸ್

ಬರೋಬ್ಬರಿ 225 ರನ್‌ಗಳ ಬಾರೀ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಕೇವಲ 162 ರನ್‌ಗಳಿಗೆ ಸರ್ವಪತನ ಕಾಣುವ ಇನಿಂಗ್ಸ್ ಹಾಗೂ 63 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ಪರ ಎರಡನೇ ಇನಿಂಗ್ಸ್‌ನಲ್ಲಿ ಕಗಿಸೋ ರಬಾಡ 5 ವಿಕೆಟ್ ಪಡೆದರೆ, ನೊಕಿಯೆ 3 ವಿಕೆಟ್ ಕಬಳಿಸಿ ಮಿಂಚಿದರು. 

ಡೀನ್‌ ಎಲ್ಗರ್‌ ನಾಯಕನಾಗಿ ತಮ್ಮ ಮೊದಲ ಟೆಸ್ಟ್‌ನಲ್ಲೇ ಗೆಲುವು ಸಾಧಿಸಿದರು. ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ ಪಂದ್ಯವು ಜೂನ್ 18ರಿಂದ ಸೇಂಟ್ ಲೂಸಿಯಾದಲ್ಲೇ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌: 

ವಿಂಡೀಸ್‌ 97 ಹಾಗೂ 162 
ದ.ಆಫ್ರಿಕಾ 322/10