Asianet Suvarna News Asianet Suvarna News

'ಯಶಸ್ವಿ ಜೈಸ್ವಾಲ್‌ ಪಾನಿಪೂರಿ ಮಾರಿದ್ದ ಎನ್ನುವುದು ಬರೀ ಸುಳ್ಳು..' ಬಾಲ್ಯದ ಕೋಚ್‌ ಜ್ವಾಲಾ ಸಿಂಗ್‌ ಬೇಸರ!

ಯಶಸ್ವಿ ಜೈಸ್ವಾಲ್ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಪಾದಾರ್ಪಣಾ ಟೆಸ್ಟ್‌ ಪಂದ್ಯದಲ್ಲಿಯೇ ಶತಕ ಬಾರಿಸುವ ಮೂಲಕ ಗಮನಸೆಳೆದಿದ್ದರು.
 

jwala Singh rubbishes rumours on Yashasvi Jaiswal's fake pani puri stories Azad Maidan days san
Author
First Published Aug 3, 2023, 10:44 PM IST

ಮುಂಬೈ (ಆ.3): ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಬಗ್ಗೆ ಇರುವ ಬಹುದೊಡ್ಡ ಸಂಗತಿ ಏನೆಂದರೆ, ತನ್ನ ಕ್ರಿಕೆಟ್‌ ಕನಸನ್ನು ಸಾಕಾರ ಮಾಡಿಕೊಳ್ಳುವ ಹಾದಿಯಲ್ಲಿ ಅವರು ಪಟ್ಟ ಪರಿಶ್ರಮ. ಬಾಲ್ಯದಲ್ಲಿ ಅವರು ಪಾನಿಪೂರಿ ಮಾರುತ್ತಾ ಕ್ರಿಕೆಟ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದರು ಎನ್ನುವ ವರದಿಗಳು ಬಂದಿದ್ದವು. ಆದರೆ, ಟೀಮ್‌ ಇಂಡಿಯಾ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡದ ಬ್ಯಾಟ್ಸ್‌ ಮನ್‌ ಯಶಸ್ವಿ ಜೈಸ್ವಾಲ್‌ ಅವರ ಬಾಲ್ಯದ ಕೋಚ್‌ ಜ್ವಾಲಾ ಸಿಂಗ್‌, ಇದೆಲ್ಲವೂ ಸುಳ್ಳು ಸುದ್ದಿ. ಯಶಸ್ವಿ ಜೈಸ್ವಾಲ್‌ ಕ್ರಿಕೆಟ್ ಜೀವನದ ಆರಂಭದಲ್ಲಿ ಪಾನೂ ಪೂರಿ ಮಾರುತ್ತಿದ್ದ ಎನ್ನುವ ಸಂಗತಿಗಳನ್ನು ಕೇಳಿ ಬೇಸರವಾಗಿದೆ ಎಂದು ಹೇಳಿದ್ದಾರೆ. ಇಂದು ಯಶಸ್ವಿ ಜೈಸ್ವಾಲ್‌ ಇಡೀ ದೇಶದ ಮನೆಮಾತಾಗಿದ್ದಾರೆ. ಅದಕ್ಕೆ ಕಾರಣ ಅವರ ಸ್ಫೋಟಕ ಬ್ಯಾಟಿಂಗ್‌ ಶೈಲಿ. ಅವರು ಕ್ರಿಕೆಟ್‌ ಮೈದಾನದಲ್ಲಿ ಜನಪ್ರಿಯರಾಗುತ್ತಿದ್ದಂತೆ, ಅವರ ಜೊತೆಗೆ ಪಾನಿಪೂರಿ ಕಥೆ ಕೂಡ ಜನಪ್ರಿಯವಾಗಿತ್ತು. ಕ್ರಿಕೆಟ್‌ ಕನಸನ್ನು ಜೀವಂತವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ತಂಡದ ಗಮನಸೆಳೆಯುವ ನಿಟ್ಟಿನಲ್ಲಿ ಯಶಸ್ವಿ ಜೈಸ್ವಾಲ್‌ ಪರಿಶ್ರಮ ಪಟ್ಟಿದ್ದು, ಕಷ್ಟಪಟ್ಟಿದ್ದು ನಿಜ. ಆದರೆ, ಇದಕ್ಕಾಗಿ ಅವರೆಂದೂ ಮುಂಬೈನ ಬೀದಿಗಳಲ್ಲಿ ಪಾನಿಪೂರಿ ಮಾರಿರಲಿಲ್ಲ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಜೈಸ್ವಾಲ್ ಅವರ ಬಾಲ್ಯದ ಕೋಚ್‌ ಜ್ವಾಲಾ ಸಿಂಗ್ ಅವರು, ಯಶಸ್ವಿ ಜೈಸ್ವಾಲ್‌ ಮುಂಬೈನ ಬೀದಿಗಳಲ್ಲಿ ಪಾನಿಪುರಿ ಮಾಡುತ್ತಿದ್ದರು ಎನ್ನುವ ವೈರಲ್ ಸುದ್ದಿಯ ಬಗ್ಗೆ ತಮ್ಮ ಬೇಸರವನ್ನು  ವ್ಯಕ್ತಪಡಿಸಿದ್ದಾರೆ. ಜೈಸ್ವಾಲ್‌ ಅವರ ಕ್ರಿಕೆಟ್‌ ಪ್ರಯಾಣ, ಆರ್ಥಿಕ ಹೊರೆ, ಎದುರಿಸಿದ ಹೋರಾಟ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಚಿತ್ರದ ಹಿಂದಿನ ಸತ್ಯದ ಬಗ್ಗೆ ಮಾತನಾಡಿದರು.

2013ರಲ್ಲಿ ಆಜಾದ್‌ ಮೈದಾನದ ಟೆಂಟ್‌ನಲ್ಲಿ ವಾಸ ಮಾಡುತ್ತಿದ್ದ ವೇಳೆ ಯಶಸ್ವಿ ಜೈಸ್ವಾಲ್‌ ಮೊದಲ ಬಾರಿಗೆ ನನ್ನ ಭೇಟಿಯಾಗಿದ್ದ. ಆತನಿಗೆ ಹೆಚ್ಚಿನ ಆರ್ಥಿಕ ಬೆಂಬಲ ಇದ್ದಿರಲಿಲ್ಲ. ಅವರ ತಂದೆ ಕುಟುಂಬಕ್ಕೆ ಮೂರು ಹೊತ್ತು ಊಟ ಹಾಕುವ ನಿಟ್ಟಿನಲ್ಲಿ ಭಾರಿ ಶ್ರಮ ವಹಿಸುತ್ತಿದ್ದರು. ಕೆಲವೊಂದು ಲಿಮಿಟ್‌ಗಳು ಅವರ ಕುಡುಂಬಕ್ಕೆ ಇದ್ದವು. ಇಂಥ ಸಮಯದಲ್ಲಿ ಆಜಾದ್ ಮೈದಾನದಲ್ಲಿ ಕೆಲವೊಂದು ಪಾನಿ ಪೂರಿ ಟ್ರಾನಿಗಳು ಇರುತ್ತಿದ್ದವು. ಕೆಲವೊಬ್ಬರು ಸ್ನೇಹಿತರೂ ಆಗಿದ್ದರು. ಸ್ನೇಹಪೂರ್ಣವಾಗಿ ಜೈಸ್ವಾಲ್‌ ಅವರೊಂದಿಗೆ ಮಾತನಾಡುತ್ತಿದ್ದ. ಅವರು ಬೇರೆ ಕಡೆ ಹೋಗುತ್ತಿದ್ದಾಗ ತಾನೇ ಕೆಲವೊಂದು ಪಾನಿಪೂರಿ ಮಾರಾಟ ಮಾಡಿ 20-25 ರೂಪಾಯಿ ಸಂಪಾದಿಸುತ್ತಿದ್ದ ಅಷ್ಟೇ' ಎಂದು ಹೇಳಿದ್ದಾರೆ.

ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಒಂದು ಫೋಟೋ ಹಾಗೂ ವಿಡಿಯೋ ವೈರಲ್‌ ಆಗಿದ್ದು. ಇದರಲ್ಲಿ ಪಾನಿಪೂರಿ ಮಾರುತ್ತಿರುವ ವ್ಯಕ್ತಿಯ ಪಕ್ಕದಲ್ಲಿ ಜೈಸ್ವಾಲ್‌ ನಿಂತಿದ್ದಾಗಿ ತೋರಿಸಲಾಗಿದ್ದು. ಆ ವ್ಯಕ್ತಿಯನ್ನು ಜೈಸ್ವಾಲ್‌ ಅವರ ತಂದೆ ಎಂದೇ ಬಿಂಬಿಸಲಾಗಿದೆ. ಇದು 2018ರ ಫೋಟೋ. 19 ವಯೋಮಿತಿ ತಂಡಕ್ಕೆ ಆತ ಮೊದಲ ಬಾರಿಗೆ ಆಯ್ಕೆಯಾಗಿದ್ದ. ಟಿವಿ ಚಾನೆಲ್‌ವೊಂದು ಆತನ ಸಂದರ್ಶನಕ್ಕಾಗಿ ನನ್ನನ್ನು ಕೇಳಿತ್ತು. ಈ ವೇಳೆ ಆತ ಪಾನಿಪೂರಿ ಮಾರುತ್ತಿರುವ ಹಾಗೆ ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಸಿತ್ತು. ನನಗೆ ಆಗಲೂ ಬೇಸರವಾಗಿತ್ತು. ಆದರೆ, ಇದೆಲ್ಲವೂ ಸಾಮಾನ್ಯ ಎಂದು ಹೇಳಿದ್ದ ಚಾನೆಲ್‌ ಆ ದೃಶ್ಯಗಳನ್ನು ಪಡೆದುಕೊಂಡಿತ್ತು ಎಂದಿದ್ದಾರೆ.

WTC Final: ಯಶಸ್ವಿ ಜೈಸ್ವಾಲ್‌ಗೆ ಬ್ಯಾಟಿಂಗ್ ಟಿಪ್ಸ್ ನೀಡಿದ ಕಿಂಗ್ ಕೊಹ್ಲಿ..!

ನನ್ನ ಕುಟುಂಬ ಯಶಸ್ವಿ ಜೈಸ್ವಾಲ್‌ನನ್ನು ಮನೆಯ ಮಗನಂತೆ ಬೆಳೆಸಿದೆ. ಆತನಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದೆ. ಆದರೆ, ಇಂಥ ಸುಳ್ಳು ಸ್ಟೋರಿಗಳು ಹರಿದಾಡಿದಾಗ ಬಹಳ ಬೇಸರವಾಗುತ್ತದೆ ಎಂದಿದ್ದಾರೆ. 

ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ಗೆ ಶಿಸ್ತಿನ ಪಾಠ ಮಾಡಿ ಮೈದಾನದ ಹೊರಗೆ ಕಳಿಸಿದ ಅಜಿಂಕ್ಯ ರಹಾನೆ..!

ಆ ವಿಡಿಯೋದಲ್ಲಿ ಜೈಸ್ವಾಲ್‌ನ ಪಕ್ಕದಲ್ಲಿರುವ ವ್ಯಕ್ತಿಯನ್ನು ಆತನ ತಂದೆ ಎಂದು ಹೇಳಲಾಗಿದೆ. ಆದರೆ, ಜೈಸ್ವಾಲ್‌ ಅವರ ತಂದೆ ಏನಾದರೂ ಕೆಲಸಿದ್ದಲ್ಲಿ ಮಾತ್ರವೇ 2013 ರಿಂದ 2022ರ ಅವಧಿಯಲ್ಲಿ ಮುಂಬೈಗೆ ಬರುತ್ತಿದ್ದರು. ಈ ಅವಧಿಯಲ್ಲಿ ಜೈಸ್ವಾಲ್‌ ನನ್ನ ಮನೆಯಲ್ಲಿ ನನ್ನ ಕುಟುಂಬದವರೊಂದಿಗೆ ಇರುತ್ತಿದ್ದ. ಆತನನ್ನು ನಾವು ಕ್ರಿಕೆಟ್‌ನ ವಿದ್ಯಾರ್ಥಿ ಎಂದು ನೋಡಿರಲಿಲ್ಲ. ಮನೆ ಮಗನಂತೆ ನೋಡಿ ಎಲ್ಲಾ ಸೌಲಭ್ಯ ನೀಡಿದ್ದೆವು. ಈಗ ಈ ರೀತಿಯ ಫೇಕ್‌ ಪಾನಿ ಪುರಿ ಸ್ಟೋರಿಗಳನ್ನು ನೋಡುತ್ತಿದ್ದರೆ ಬೇಸರವಾಗುತ್ತದೆ. ಇದರಲ್ಲಿ ಕೆಲವೇ ಒಂದು ಅಂಶ ಮಾತ್ರವೇ ಸತ್ಯ. ಕೋಚ್‌ ಆಗಿ ನನಗೂ ಇದು ಬೇಸರ ತರಿಸುತ್ತದೆ ಎಂದು ಜ್ವಾಲಾ ಸಿಂಗ್‌ ಹೇಳಿದ್ದಾರೆ.
 

Follow Us:
Download App:
  • android
  • ios