ಬೇ ಓವಲ್[ನ.25]: ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಹಲವು ಬಾರಿ ಬ್ಯಾಟ್ಸ್’ಮನ್’ಗಳು ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸಿರುವುದನ್ನು ನೋಡಿರುತ್ತೇವೆ. ಆದರೆ ಬಹುಶಃ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜೋಸ್ ಬಟ್ಲರ್ ರೀತಿ ಔಟ್ ಆಗಿರುವುದನ್ನು ನೀವು ಈವರೆಗೂ ನೋಡಿರಲು ಸಾಧ್ಯವೇ ಇಲ್ಲ.

ಮುಷ್ತಾಕ್ ಅಲಿ ಟ್ರೋಫಿ: ಪಂತ್ ಫೇಲ್, ಡೆಲ್ಲಿಗೆ ಸೋಲು..!

ಹೌದು, ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಜೋಸ್ ಬಟ್ಲರ್ ಇನ್ ಸ್ವಿಂಗ್ ಯಾರ್ಕರ್ ಬೌಲಿಂಗ್ ಸರಿಯಾಗಿ ಗ್ರಹಿಸದೇ ವಿಕೆಟ್ ಒಪ್ಪಿಸಿದ ವಿಲಕ್ಷಣ ಘಟನೆ ನಡೆದಿದೆ. ಕಿವೀಸ್ ಎಡಗೈ ವೇಗಿ ನೀಲ್ ವ್ಯಾಗ್ನರ್ ಎಸೆದ ಪಂದ್ಯದ 81ನೇ ಓವರ್’ನಲ್ಲಿ ಬಟ್ಲರ್ ವಿಕೆಟ್ ಒಪ್ಪಿಸಿದರು. ತಾವೆದುರಿಸಿದ 18ನೇ ಎಸೆತವನ್ನು ಸರಿಯಾಗಿ ಗ್ರಹಿಸದಿದ್ದಕ್ಕೆ ಬಟ್ಲರ್ ಬೆಲೆ ತೆರಬೇಕಾಯಿತು. ಸರಿಯಾದ ಲೈನ್ ಹಾಗೂ ಲೆಂಗ್ತ್ ಎಸೆತವನ್ನು ಗ್ರಹಿಸುವಲ್ಲಿ ಬಟ್ಲರ್ ವಿಫಲವಾಗಿದ್ದರು.
ಹೀಗಿತ್ತು ನೋಡಿ ಆ ಕ್ಷಣ...

ಸೇಡು ತೀರಿಸಿಕೊಂಡ ಕಿವೀಸ್:

ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಾಗೂ ತವರಿನಲ್ಲಿ ಟಿ20 ಸರಣಿಯಲ್ಲಿ ಇಂಗ್ಲೆಂಡ್’ಗೆ ಶರಣಾಗಿದ್ದ ನ್ಯೂಜಿಲೆಂಡ್ ಇದೀಗ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಆಂಗ್ಲರ ವಿರುದ್ಧ ಸೇಡು ತೀರಿಸಿಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಮೊದಲ ಇನಿಂಗ್ಸ್’ನಲ್ಲಿ 353 ರನ್ ಬಾರಿಸಿತ್ತು. ಇನ್ನು ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್[205] ದ್ವಿಶತಕ ಹಾಗೂ ಮಿಚೆಲ್ ಸ್ಯಾಂಟ್ನರ್[126] ಭರ್ಜರಿ ಶತಕದ ನೆರವಿನಿಂದ 615 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಇನ್ನು ದ್ವಿತಿಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 33 ವರ್ಷದ ವೇಗಿ ನೀಲ್ ವ್ಯಾಗ್ನರ್ ಮಾರಕ ದಾಳಿಗೆ ತತ್ತರಿಸಿ ಕೇವಲ 197 ರನ್’ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.