SA vs India Boxing Day Test : ಸೆಂಚುರಿಯನ್ ಟೆಸ್ಟ್ ನಲ್ಲಿ ಜಯದ ಸನಿಹ ಟೀಂ ಇಂಡಿಯಾ!

ಗೆಲುವಿನಿಂದ 6 ವಿಕೆಟ್ ದೂರದಲ್ಲಿರುವ ಟೀಮ್ ಇಂಡಿಯಾ
305 ರನ್ ಗಳ ಚೇಸಿಂಗ್ ವೇಳೆ ಪ್ರಮುಖ 4 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ
ನಾಯಕ ಡೀನ್ ಎಲ್ಗರ್ ಹೋರಾಟ ಆಟ
 

Jasprit Bumrahs late strikes help Team India surge ahead vs South Africa in Centurion Test san

ಸೆಂಚುರಿಯನ್ (ಡಿ. 29): ದಿನದ ಕಟ್ಟಕಡೆಯ ಎಸೆತದಲ್ಲಿ ಕೇಶವ್ ಮಹಾರಾಜ್, ಜಸ್ ಪ್ರೀತ್ ಬುಮ್ರಾ (Jasprit Bumrah)ಎಸೆದ ಯಾರ್ಕರ್ ಎಸೆತಕ್ಕೆ ಬೌಲ್ಡ್ ಆಗುವುದರೊಂದಿಗೆ ದಕ್ಷಿಣ ಆಫ್ರಿಕಾ (South Africa) ಹಾಗೂ ಪ್ರವಾಸಿ ಭಾರತ (India) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮುಕ್ತಾಯ ಕಂಡಿದೆ. ಸೆಂಚುರಿಯನ್ (Centurion) ಟೆಸ್ಟ್ ನಲ್ಲಿ ಭಾರತದ ಗೆಲುವಿಗೆ ಇನ್ನು 6 ವಿಕಟ್ ಅಗತ್ಯವಿದ್ದರೆ, ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 211 ರನ್ ಗಳು ಬೇಕಿದೆ. ಇನ್ನು ಪಂದ್ಯದ ಸೋಲನ್ನು ತಪ್ಪಿಸಿಕೊಳ್ಳಲು ಉಳಿದ 6 ವಿಕೆಟ್ ಗಳಿಂದ ದಿನಪೂರ್ತಿ ಹೋರಾಟ ನಡೆಸಬೇಕಿದೆ. ಆದರೆ, ಅಂತಿಮ ದಿನದಾಟಕ್ಕೆ ಮಳೆಯ ಮುನ್ಸೂಚನೆ ಇರುವ ಕಾರಣ ಪಂದ್ಯದ ಫಲಿತಾಂಶದ ಬಗ್ಗೆ ಕುತೂಹಲ ಗರಿಗೆದರಿದೆ.

ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4ನೇ ದಿನವಾದ ಬುಧವಾರ 1 ವಿಕೆಟ್ ಗೆ 16 ರನ್ ಗಳಿಂದ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 174 ರನ್ ಗೆ ಆಲೌಟ್ ಆಯಿತು. ಇದರೊಂದಿಗೆ ಗೆಲುವಿಗೆ 305 ರನ್ ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ ದಿನದಾಟದ ಅಂತ್ಯಕ್ಕೆ 40.5 ಓವರ್ ಗಳಲ್ಲಿ 4 ವಿಕೆಟ್ ಗೆ 94 ರನ್ ಪೇರಿಸಿದ್ದು ಸೋಲು ತಪ್ಪಿಸಿಕೊಳ್ಳುವ ಹೋರಾಟದಲ್ಲಿದೆ. 122 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 52 ರನ್ ಬಾರಿಸಿರುವ ನಾಯಕ ಡೀನ್ ಎಲ್ಗರ್ (Dean Elgar) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮಾರ್ಕೋ ಜಾನ್ಸೆನ್ ಹಾಗೂ ಕಗಿಸೋ ರಬಾಡ (Kagiso Rabada) ದಿನದ ಭೋಜನ ವಿರಾಮದ ಬಳಿಕ ತಲಾ 4 ವಿಕೆಟ್ ಉರುಳಿಸಿ ಭಾರತ ತಂಡದ ಅಲ್ಪ ಮೊತ್ತಕ್ಕೆ ಕಾರಣರಾದರು. ದಿನದ ಬೆಳಗಿನ ಅವಧಿಯ ಆಟದಲ್ಲಿ ರನ್ ಗಳಿಸುವ ಉತ್ಸಾಹ ತೋರದ ಭಾರತ ತಂಡ ಕೇವಲ 61 ರನ್ ಗಳನ್ನು ಕೂಡಿಸಿತ್ತ. ಕೆಎಲ್ ರಾಹುಲ್ ಹಾಗೂ ಶಾರ್ದೂಲ್ ಠಾಕೂರ್ ಇನ್ನಿಂಗ್ಸ್ ಅನ್ನು ಆಧರಿಸಿದರೆ ಭೋಜನ ವಿರಾಮದ ಬಳಿಕ ಇನ್ನಿಂಗ್ಸ್ ವೇಗ ಪಡೆದುಕೊಂಡಿತು. ಇದರಿಂದಾಗಿ 3ನೇ ದಿನದಾಟದಲ್ಲಿಯೇ 146 ರನ್ ಮುನ್ನಡೆ ಪಡೆದಿದ್ದ ಭಾರತ ಈ ಮೊತ್ತಕ್ಕೆ ಹೆಚ್ಚಿನ ರನ್ ಗಳನ್ನು ಸೇರಿಸಲು ಸಾಧ್ಯವಾಗಲಿಲ್ಲ.


ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (Virat Kohli) ಹಾಗೂ ಅಜಿಂಕ್ಯ ರಹಾನೆ ದೊಡ್ಡ ಕಾಣಿಕೆ ನೀಡಲು ವಿಫಲರಾದರು. 4 ರನ್ ಗಳಿದ್ದಾಗ ಒಮ್ಮೆ ಜೀವದಾನ ಪಡೆದುಕೊಂಡರೂ ಕೇವಲ 16 ರನ್ ಬಾರಿಸಿ ಔಟಾದರು. ವಿರಾಟ್ ಕೊಹ್ಲಿ ಕೂಡ ಜೀವದಾನದ ಲಾಭ ಪಡೆದುಕೊಳ್ಳಲು ವಿಫಲರಾಗಿ 18 ರನ್ ಬಾರಿಸಿ ನಿರ್ಗಮಿಸಿದರು. ಅಜಿಂಕ್ಯ ರಹಾನೆ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 20 ರನ್ ಸಿಡಿಸಿ ಔಟ್‌ ಆದರೆ, 34 ಎಸೆತಗಳಲ್ಲಿ 6 ಭರ್ಜರಿ ಬೌಂಡರಿಯೊಂದಿಗೆ 34 ರನ್ ಬಾರಿಸಿದ ರಿಷಭ್ ಪಂತ್ ಮೊತ್ತವನ್ನು ಏರಿಸಲು ನೆರವಾದರು. ಇವರಿಗೆ ಉತ್ತಮ ಸಾಥ್ ನೀಡಿದ ಅಶ್ವಿನ್ 14 ರನ್ ಸಿಡಿಸಿ, ದಕ್ಷಿಣ ಆಫ್ರಿಕಾ ತಂಡಕ್ಕೆ ನೀಡುವ ಗುರಿಯನ್ನು 300ಕ್ಕೇರಿಸುವಲ್ಲಿ ನೆರವಾಗಿದ್ದರು.

Kohli Century Wait Continued : ಶತಕವಿಲ್ಲದೆ ಸತತ 2ನೇ ವರ್ಷ ಮುಗಿಸಿದ ವಿರಾಟ್ ಕೊಹ್ಲಿ!
ಚೇಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಎಚ್ಚರಿಕೆಯಲ್ಲಿಯೇ ಬ್ಯಾಟಿಂಗ್ ನಡೆಸಿತು. ಏಡನ್ ಮಾರ್ಕ್ರಮ್ (1)  (Aiden Markram)ಮತ್ತೊಮ್ಮೆ ಮೊಹಮದ್ ಶಮಿಗೆ ವಿಕೆಟ್ ನೀಡಿದರೆ, ಕೀಗನ್ ಪೀಟರ್ ಸೆನ್ ನಾಯಕ ಡೀನ್ ಎಲ್ಗರ್ ಜೊತೆಗೂಡಿ ಕೆಲ ರನ್ ಗಳನ್ನು ಪೇರಿಸಿದರು. ತಂಡದ ಮೊತ್ತ 34 ರನ್ ಆಗಿದ್ದಾಗ ಸಿರಾಜ್ ಎಸೆತದಲ್ಲಿ ಪೀಟರ್ ಸೆನ್ ವಿಕೆಟ್ ಕೀಪರ್ ಪಂತ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, 65 ಎಸೆತಗಳಲ್ಲಿ ತಾಳ್ಮೆಯ 11 ರನ್ ಬಾರಿಸಿದ ರಸ್ಸಿ ವಾನ್ ಡರ್ ಡುಸೆನ್  ಹಾಗೂ ನೈಟ್ ವಾಚ್ ಮನ್ ಕೇಶವ್ ಮಹಾರಾಜ್, ಜಸ್ ಪ್ರೀತ್ ಬುಮ್ರಾಗೆ ವಿಕೆಟ್ ನೀಡಿದರು. ಒಟ್ಟಾರೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲನ್ನು ತಪ್ಪಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಲಿದ್ದು, ವರುಣ ಕೂಡ ಅವರ ನೆರವಿಗೆ ಧಾವಿಸುವ ನಿರೀಕ್ಷೆ ಇದೆ. ಇನ್ನೊಂದೆಡೆ ಭಾರತ ಕನಿಷ್ಠ 1 ಅವಧಿಯ ಆಟವಾದರೂ ಸಿಕ್ಕಲ್ಲಿ ದಕ್ಷಿಣ ಆಫ್ರಿಕಾವನ್ನು ಆಲೌಟ್ ಮಾಡುವ ವಿಶ್ವಾಸದಲ್ಲಿದೆ.

Kohli-Kumble Controversy: ಕೋಚ್-ಕ್ಯಾಪ್ಟನ್ ನಡುವೆ ವಿವಾದಕ್ಕೆ ಕಾರಣವಾಗಿದ್ದು ಈ ಆಟಗಾರನ ಆಯ್ಕೆ!
ಭಾರತ: 327 ಮತ್ತು 174 (ರಿಷಭ್ ಪಂತ್ 34, ಕಗೀಸೋ ರಬಾಡ 42ಕ್ಕೆ 4, ಮಾರ್ಕೋ ಜಾನ್ಸೆನ್ 55ಕ್ಕೆ 4), ದಕ್ಷಿಣ ಅಫ್ರಿಕಾ: 197 ಮತ್ತು 40.5 ಓವರ್ ಗಳಲ್ಲಿ 4 ವಿಕೆಟ್ ಗೆ 94 (ಡೀನ್ ಎಲ್ಗರ್ 52*, ಕೀಗನ್ ಪೀಟರ್ ಸೆನ್ 17, ರಸ್ಸಿ ವಾನ್ ಡರ್ ಡಸೆನ್ 11, ಕೇಶವ್ ಮಹರಾಜ್ 8, ಬುಮ್ರಾ 22ಕ್ಕೆ 2, ಶಮಿ 29ಕ್ಕೆ 1, ಸಿರಾಜ್ 25ಕ್ಕೆ 1).

 

Latest Videos
Follow Us:
Download App:
  • android
  • ios