ನವದೆಹಲಿ(ನ.27): ಭಾರತ ತಂಡದ ತಾರಾ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ, ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರೆ. ನ್ಯೂಜಿಲೆಂಡ್‌ ಪ್ರವಾಸದ ವೇಳೆ ಟೀಂ ಇಂಡಿಯಾ ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ಬೂಮ್ರಾ, ಕಳೆದ ಕೆಲ ಸರಣಿಗಳಿಂದ ದೂರ ಉಳಿದಿದ್ದರು. ಇದೀಗ ಚೇತರಿಸಿಕೊಂಡಿರುವ ಬೂಮ್ರಾ ಜ. 24 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್‌ ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಇದನ್ನೂ ಓದಿ: ICC ರ‍್ಯಾಂಕಿಂಗ್‌ ಪ್ರಕಟ; ಟಾಪ್ 10 ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್!

ಇದರ ಮಧ್ಯೆಯೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬೂಮ್ರಾ ಫಿಟ್ನೆಸ್‌ ಬಗ್ಗೆ ತಂಡದಿಂದ ವರದಿ ಕೇಳಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ವಿಂಡೀಸ್‌ ವಿರುದ್ಧದ ಸರಣಿಗೆ ಬೂಮ್ರಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ. ಒಂದೊಮ್ಮೆ ಬೂಮ್ರಾ ಫಿಟ್‌ ಆಗಿದ್ದರೇ ನ್ಯೂಜಿಲೆಂಡ್‌ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಜ. 24 ರಿಂದ ಮಾಚ್‌ರ್‍ 4 ರವರೆಗೆ ನ್ಯೂಜಿಲೆಂಡ್‌ ಪ್ರವಾಸ ನಡೆಯಲಿದ್ದು, ಭಾರತ ತಂಡ 5 ಟಿ20, 3 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳನ್ನಾಡಲಿದೆ.

ಇದನ್ನೂ ಓದಿ: BCCI ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ ಹರ್ಭಜನ್ ಸಿಂಗ್..!

ಅಭ್ಯಾಸದಲ್ಲಿ ಸ್ಟಂಪ್‌ ಮುರಿದ ಬೂಮ್ರಾ
ಗಾಯದಿಂದ ಚೇತರಿಸಿಕೊಂಡಿರುವ ಬೂಮ್ರಾ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೆಟ್ಸ್‌ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ವೇಳೆಯಲ್ಲಿ ಮಧ್ಯದ ಸ್ಟಂಪ್‌ ವಿಕೆಟ್‌ ತುಂಡಾಗುವಂತೆ ಬೌಲಿಂಗ್‌ ಮಾಡಿದ ಬೂಮ್ರಾ, ಆ ಚಿತ್ರವನ್ನು ಮಂಗಳವಾರ ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ದಿ ಎಂಡ್‌’ ಅಭ್ಯಾಸ ಮತ್ತು ಸ್ಟಂಫ್ಸ್‌ ಎರಡೂ ಎಂಬ ಒಕ್ಕಣೆಯನ್ನು ಬರೆದಿದ್ದಾರೆ. ಫಿಟ್‌ ಆಗಿರುವುದನ್ನು ಸಾಬೀತುಪಡಿಸಲು ಬೂಮ್ರಾ ಹೀಗೆ ಮಾಡಿದ್ದಾರೆ ಎನ್ನಲಾಗಿದೆ.