ಕೊಲ್ಕತಾ(ಫೆ.03): ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆಲುವಿನಲ್ಲಿ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನ್ಯೂಜಿಲೆಂಡ್ ಕಡೆ ವಾಲಿದ್ದ  3ನೇ ಟಿ20 ಪಂದ್ಯಕ್ಕೆ ರೋಚಕ ತಿರುವು ನೀಡಿದ ಹೆಗ್ಗಳಿಕೆಗೆ ಶಮಿಗಿದೆ. ಭಾರತದ ಹಲವು ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಶಮಿ ಅಷ್ಟೇ ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಮಗಳ ಫೋಟೋ ಶೇರ್ ಮಾಡಿ ಮುಸ್ಲಿಂಮರ ವಿರೋಧ ಕಟ್ಟಿಕೊಂಡಿದ್ದಾರೆ.

ಇದನ್ನೂ ಓದಿ: ಸೂಪರ್ ಗೆಲುವಿನ ಹೀರೋ ಯಾರು? ಶಮಿ ಅಥವಾ ರೋಹಿತ್!.

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಮೊಹಮ್ಮದ್ ಶಮಿ, ಪುತ್ರಿ ಐರಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ತುಂಬಾ ಸುಂದರವಾಗಿ ಕಾಣುತ್ತಿದ್ದಿ, ಲವ್ ಯು ಮಗಳೇ, ಶೀಘ್ರದಲ್ಲೇ ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ. 

 

ಇದನ್ನೂ ಓದಿ: ಮೊಹಮ್ಮದ್ ಶಮಿ ಪತ್ನಿ ಅರೆಸ್ಟ್- ಹಸೀನಾ ಜಹಾನ್ ಬದುಕಲ್ಲಿ ಹೊಸ ಟ್ವಿಸ್ಟ್!

ಈ ಫೋಟೋದಲ್ಲಿ ಶಮಿ ಪುತ್ರಿ ಹಿಂದೂ ಸಂಪ್ರದಾಯದ ಪೂಜೆ ಮಾಡಿರುವುದು ಗೋಚರಿಸುತ್ತಿದೆ. ಹಿಂದು ಸಂಪ್ರದಾಯದ ಉಡುಗೆ ತೊಡೆಗೆ ಧರಿಸಿದ್ದಾರೆ. ಇಷ್ಟೇ ಅಲ್ಲ ಹಿಂದೆ ಪೂಜಾ ಸಾಮಾಗ್ರಿಗಳು, ದೀಪ, ಅಗರಬತ್ತಿ, ಹಣ್ಣು ಹಂಪಲು ಕಾಣುತ್ತಿದೆ. ಈ ಮೂಲಕ ಶಮಿ ಪುತ್ರಿ ಹಿಂದೂ ಪೂಜೆ ಮಾಡಿರುವುದು ಸ್ಪಷ್ಟವಾಗಿದೆ. ಇದಕ್ಕೆ ಮುಸ್ಲಿಂ ಸಂಪ್ರದಾಯವಾದಿಗಳು ಗರಂ ಆಗಿದ್ದಾರೆ.

ಮುಸ್ಲಿಂ ಆಗಿರುವ ಮೊಹಮ್ಮದ್ ಶಮಿ ಪುತ್ರಿಯ ಕೈಯಿಂದ ಹಿಂದೂ ಪೂಜೆ ಮಾಡಿಸಿದ್ದಾರೆ. ಮುಸ್ಲಿಂ ವಿರೋಧಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.