ಈದ್ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಜ್ಜಾಗುತ್ತಿದ್ದಾರೆ. ಆದರೆ ಲಾಕ್‌ಡೌನ್ ಕಾರಣ ಧಾರ್ಮಿಕ ಕೇಂದ್ರಗಳಲ್ಲಿ ಸೇರುವಂತಿಲ್ಲ. ಹೀಗಾಗಿ ಈ ಬಾರಿಯ ಈದ್ ಆಚರಣೆ ಕಷ್ಟವಾಗಲಿದೆ. ಆದರೆ ಸುಲಭವಾಗಿ ಈದ್ ಹಬ್ಬ ಹಾಗೂ ಈದ್ ಕಿ ನಮಾಜ್ ಕುರಿತು ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಹತ್ವ ಸಂದೇಶ ನೀಡಿದ್ದಾರೆ. 

ಬರೋಡ(ಮೇ.23):  ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಸಮಾಜಿಕ ಅಂತರ ಪಾಲಿಸಲು ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ. ಲಾಕ್‌ಡೌನ್ ಸಡಿಲಿಕೆಯಾದರೂ ಧಾರ್ಮಿಕ ಕೇಂದ್ರಗಳು ಬಾಗಿಲು ತೆರಯಲು ಅವಕಾಶ ನೀಡಿಲ್ಲ. ಇದೀಗ ರಂಜಾನ್ ಹಬ್ಬದ ಪವಿತ್ರ ಆಚರಣೆಯಾದ ಈದ್ ಉಲ್ ಫಿತರ್‌ಗೆ ಸಜ್ಜಾಗಿದ್ದಾರೆ. ಆದರೆ ಮಸೀದಿಗಳು ಮುಚ್ಚಲಾಗಿದೆ. ಹೀಗಾಗಿ ಈದ್ ನಮಾಜ್ ಮಾಡವುದು ಹೇಗೆ ಎಂದು ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಸುಲಭ ಸೂಚನೆ ನೀಡಿದ್ದಾರೆ.

ಬಹುನಿರೀಕ್ಷಿತ 2020ರ ಟಿ20 ವಿಶ್ವ​ಕಪ್‌ ಮುಂದ​ಕ್ಕೆ?

ಇನ್‌ಸ್ಟಾಗ್ರಾಂ ಮೂಲಕ ಮಹತ್ವದ ಸಂದೇಶವನ್ನು ಇರ್ಫಾನ್ ಹಂಚಿಕೊಂಡಿದ್ದಾರೆ. ಕೊರೋನಾ ವೈರಸ್ ಕಾರಣ ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ. ಈ ಬಾರಿಯ ಈದ್ ಕೊಂಚ ಭಿನ್ನವಾಗಿದೆ. ಕಾರಣ ಕೊರೋನಾ ವೈರಸ್. ಧಾರ್ಮಿಕ ಕೇಂದ್ರಕ್ಕೆ ತೆರಳಿ ಈದ್ ನಮಾಝ್ ಮಾಡಲು ಸಾಧ್ಯವಿಲ್ಲ. ಹಾಗಂತ ಈದ್ ನಮಾಝ್ ಮಾಡದೇ ಇರಬೇಕಾಗಿಲ್ಲ. ಮನೆಯಲ್ಲಿ ಈದ್ ನಮಾಜ್ ಮಾಡಲು ಸರಳ ಟಿಪ್ಸ್ ನೀಡುತ್ತಿದ್ದೇನೆ ಎಂದು ಇರ್ಫಾನ್ ಹೇಳಿದ್ದಾರೆ.

View post on Instagram

ಬಳಿಕ ಈದ್ ನಮಾಜ್ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಎಲ್ಲವನ್ನೂ ಸರಳವಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲ ಪ್ರತಿ ಹಂತದಲ್ಲಿ ಮಾಡಬೇಕಾದ ವಿಧಾನಗಳನ್ನು ವಿವರಿಸಿದ್ದಾರೆ. ಎರಡೂವರೆ ನಿಮಿಷದ ವಿಡಿಯೋದಲ್ಲಿ ಇರ್ಫಾನ್ ಪಠಾಣ್ ಮುಸ್ಲಿಂ ಬಾಂದವರಿಗೆ ವಿಧಾನ ಜೊತೆಗೆ ಮಹತ್ವದ ಸಂದೇಶವನ್ನು ಸಾರಿದ್ದಾರೆ.