Asianet Suvarna News Asianet Suvarna News

IPL ವಿಶ್ವದಲ್ಲೇ ನಂ.1 ಕ್ರೀಡಾ ಲೀಗ್‌ ಆಗಲಿದೆ: ಅರುಣ್ ಧುಮಾಲ್‌

ಐಪಿಎಲ್‌ನ ಭವಿಷ್ಯದಲ್ಲಿ ದೊಡ್ಡ ಯಶಸ್ಸು ಗಳಿಸಲಿದೆ
ವಿಶ್ವದಲ್ಲೇ ನಂ.1 ಕ್ರೀಡಾ ಲೀಗ್‌ ಆಗಿ ಹೊರಹೊಮ್ಮಲಿದೆ ಎಂದು ಧುಮಾಲ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 10 ತಂಡಗಳು ಭಾಗಿ

IPL will become world biggest sporting league Says Arun Dhumal kvn
Author
First Published Nov 9, 2022, 12:11 PM IST

ನವದೆಹಲಿ(ನ.09): ಐಪಿಎಲ್‌ ಈಗ ಇರುವುದಕ್ಕಿಂತ ದೊಡ್ಡ ಯಶಸ್ಸು ಗಳಿಸಲಿದೆ. ವಿಶ್ವದಲ್ಲೇ ನಂ.1 ಕ್ರೀಡಾ ಲೀಗ್‌ ಆಗಿ ಹೊರಹೊಮ್ಮಲಿದೆ ಎಂದು ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಟೂರ್ನಿಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ನಾವು ಹಲವು ವಿಧಾನಗಳನ್ನು ಕಂಡುಕೊಳ್ಳುತ್ತಿದ್ದೇವೆ. ವಿಶ್ವದೆಲ್ಲೆಡೆಯ ಕ್ರೀಡಾಭಿಮಾನಿಗಳು ಐಪಿಎಲ್‌ ನೋಡುವಂತಾಗಬೇಕು ಎಂದರು.

ಸದ್ಯಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 10 ತಂಡಗಳಿವೆ. ಫುಟ್ಬಾಲ್‌ ಅಥವಾ ಇತರೆ ಕ್ರೀಡೆಗಳ ಜೊತೆ ಕ್ರಿಕೆಟನ್ನು ಹೋಲಿಸಲು ಸಾಧ್ಯವಿಲ್ಲ. ಭಾರತೀಯ ಆಟಗಾರರು ವಿದೇಶಿ ಟೂರ್ನಿಗಳಲ್ಲಿ ಆಡಲು ಅವಕಾಶವಿಲ್ಲ. ನಮ್ಮ ನಿಯಮದಲ್ಲಿ ಬದಲಾವಣೆ ಮಾಡಲ್ಲ ಎಂದರು. ಅಲ್ಲದೇ ಮಹಿಳಾ ಐಪಿಎಲ್‌ ಆಯೋಜನೆಗೆ ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.

ಚೊಚ್ಚಲ ದಕ್ಷಿಣ ಆಫ್ರಿಕಾ ಟಿ20 ಲೀಗ್‌ ಜನವರಿ10ರಂದು ಆರಂಭ

ಕೇಪ್‌ಟೌನ್‌: ಚೊಚ್ಚಲ ಆವೃತ್ತಿಯ ದ.ಆಫ್ರಿಕಾ ಟಿ20 ಲೀಗ್‌ 2023ರ ಜ.10ಕ್ಕೆ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಎಂಐ ಕೇಪ್‌ಟೌನ್‌ ಹಾಗೂ ಪಾಲ್‌ರ್‍ ರಾಯಲ್ಸ್‌ ತಂಡಗಳು ಸೆಣಸಲಿವೆ. ಮಂಗಳವಾರ ಲೀಗ್‌ ಹಂತದ 33 ಪಂದ್ಯಗಳ ವೇಳಾಪಟ್ಟಿಪ್ರಕಟಿಸಲಾಯಿತು. 6 ಕ್ರೀಡಾಂಗಣಗಳು 6 ತಂಡಗಳ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಫೆ.11ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ಭಾರತದಲ್ಲಿ ಪಂದ್ಯಗಳನ್ನು ವಯಾಕಾಂ 18 ಪ್ರಸಾರ ಮಾಡಲಿದೆ.

ಧನುಷ್ಕಾ ರೇಪ್‌ ಪ್ರಕರಣ: ತನಿಖೆಗೆ 3 ಜನರ ಸಮಿತಿ

ಕೊಲಂಬೊ: ಅತ್ಯಾಚಾರ ಆರೋಪದಲ್ಲಿ ಸಿಡ್ನಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಪ್ರಕರಣದ ಬಗ್ಗೆ ತನಿಖೆ ನಡೆಸಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಂಗಳವಾರ 3 ಮಂದಿಯ ಸಮಿತಿಯನ್ನು ರಚಿಸಿದೆ. ಸಮಿತಿಯಲ್ಲಿ ನಿವೃತ್ತ ಹೈಕೋಟ್ಸ್‌ರ್‍ ನ್ಯಾಯಾದೀಶ ಸಿಸಿರಾ ರತ್ನಾಯಕೆ, ವಕೀಲರಾದ ನಿರೋಶನಾ ಪೆರೆರಾ ಹಾಗೂ ಅಸೇಲಾ ರೆಕಾವ ಇರಲಿದ್ದು, ಗುಣತಿಲಕ ಆಸ್ಪ್ರೇಲಿಯಾದಲ್ಲಿ ಇದ್ದ ವೇಳೆ ನಡೆದ ಘಟನೆಗಳ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಿ ವರದಿ ಸಲ್ಲಿಸಲಿದೆ. ಸಮಿತಿ ಸಲ್ಲಿಸುವ ವರದಿಗಳ ಆಧಾರದಲ್ಲಿ ಆಟಗಾರನ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಂಡಳಿ ತಿಳಿಸಿದೆ.

ಚಂದ್ರಪಾಲ್‌, ಖಾದರ್‌ಗೆ ಐಸಿಸಿ ಹಾಲ್‌ ಆಫ್‌ ಫೇಮ್‌

ದುಬೈ: ವೆಸ್ಟ್‌ಇಂಡೀಸ್‌ ಬ್ಯಾಟಿಂಗ್‌ ದಿಗ್ಗಜ ಶಿವನಾರಾಯಣ್‌ ಚಂದ್ರಪಾಲ್‌, ಪಾಕಿಸ್ತಾನದ ಸ್ಪಿನ್ನರ್‌ ಅಬ್ದುಲ್‌ ಖದೀರ್‌, ಇಂಗ್ಲೆಂಡ್‌ ಮಹಿಳಾ ತಂಡದ ನಾಯಕಿ ಶಾರ್ಲೊಟ್‌ ಎಡ್ವರ್ಡ್ಸ್ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಂಡೀಸ್‌ ಪರ 164 ಟೆಸ್ಟ್‌, 268 ಏಕದಿನ ಪಂದ್ಯಗಳನ್ನಾಡಿರುವ ಚಂದ್ರಪಾಲ್‌ ಗರಿಷ್ಠ ಟೆಸ್ಟ್‌ ರನ್‌ ಸರದಾರರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.

T20 World Cup: ಜೋರಾಯ್ತು ಫೈನಲ್ ಕ್ರೇಜ್‌, ಫನ್ನಿ ವೀಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಪಾಕ್‌ನ ಖದೀರ್‌ 13 ವರ್ಷಗಳಲ್ಲಿ 67 ಟೆಸ್ಟ್‌, 104 ಏಕದಿನ ಪಂದ್ಯಗಳನ್ನಾಡಿದ್ದು, 3 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಇನ್ನು ಎಡ್ವರ್ಡ್ಸ್ 2009ರಲ್ಲಿ ಏಕದಿನ, ಟಿ20 ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌ ತಂಡಕ್ಕೆ ನಾಯಕಿಯಾಗಿದ್ದರು. 2016ರಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಈ ಮೂವರನ್ನೂ ನ್ಯೂಜಿಲೆಂಡ್‌-ಪಾಕಿಸ್ತಾನ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ಗೌರವಿಸಲಾಗುವುದು ಎಂದು ಐಸಿಸಿ ತಿಳಿಸಿದೆ.

Follow Us:
Download App:
  • android
  • ios