Asianet Suvarna News Asianet Suvarna News

IPL Retention: ನಾಯಕ ರಾಹುಲ್‌, ಶಮಿ, ಪೂರನ್ ಕೈಬಿಟ್ಟು ಕೇವಲ ಇಬ್ಬರನ್ನು ರೀಟೈನ್ ಮಾಡಿಕೊಂಡ ಪಂಜಾಬ್‌

* 15ನೇ ಆವೃತ್ತಿಯ ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಇಬ್ಬರು ಆಟಗಾರರನ್ನು ಉಳಿಸಿಕೊಂಡ ಪಂಜಾಬ್ ಕಿಂಗ್ಸ್

* ಕನ್ನಡಿಗ ಕೆ.ಎಲ್‌. ರಾಹುಲ್, ಶಮಿ, ಗೇಲ್ ಅವರನ್ನು ಕೈಬಿಟ್ಟ ಪಂಜಾಬ್

* ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್‌ವಾಲ್‌, ಆರ್ಶದೀಪ್ ಸಿಂಗ್‌ಗೆ ಸ್ಥಾನ

IPL Retention 2020 Punjab Kings Release KL Rahul Shami Retained Mayank Agarwal and Arshdeep Singh kvn
Author
Bengaluru, First Published Nov 30, 2021, 9:41 PM IST
  • Facebook
  • Twitter
  • Whatsapp

ಬೆಂಗಳೂರು(ನ.30): ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೆಗಾ ಹರಾಜು (IPL Mega Auction) ನಡೆಯಲಿದೆ. ಇದಕ್ಕೂ ಮುನ್ನ ಈಗಿರುವ ಎಂಟು ಫ್ರಾಂಚೈಸಿಗಳಿಗೆ ತಮಗೆ ಬೇಕಾದ ಗರಿಷ್ಠ ನಾಲ್ಕು ಆಟಗಾರರನ್ನು ರೀಟೈನ್‌ ಮಾಡಲು ಬಿಸಿಸಿಐ (BCCI) ಅವಕಾಶ ನೀಡಿತ್ತು. ಇದೀಗ ಪ್ರೀತಿ ಝಿಂಟಾ ಸಹ ಒಡೆತನದ ಪಂಜಾಬ್ ಕಿಂಗ್ಸ್‌ (Punjab Kings) ಫ್ರಾಂಚೈಸಿ ತನ್ನ ತಾರಾ ನಾಯಕ ಕೆ.ಎಲ್. ರಾಹುಲ್ (KL Rahul), ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ (Chris Gayle), ಪಾಕೆಟ್ ಡೈನಮೊ ನಿಕೋಲಸ್ ಪೂರನ್ ಹಾಗೂ ವೇಗಿ ಮೊಹಮ್ಮದ್ ಶಮಿ ಅವರಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟಿದ್ದು, ಕನ್ನಡಿಗ ಮಯಾಂಕ್ ಅಗರ್‌ವಾಲ್ (Mayank Agarwal) ಹಾಗೂ ಯುವ ವೇಗಿ ಅರ್ಶದೀಪ್ ಸಿಂಗ್ (Arshdeep Singh) ಅವರನ್ನು ರೀಟೈನ್ ಮಾಡಿಕೊಂಡಿದೆ.

ನಿರೀಕ್ಷೆಯಂತೆಯೇ ರಾಹುಲ್ ಪಂಜಾಬ್ ತಂಡವನ್ನು ತೊರೆಯಲಿದ್ದಾರೆ ಎಂದು ಈ ಮೊದಲೇ ವರದಿಯಾಗಿತ್ತು. ಇದೀಗ ಈ ಸುದ್ದಿ ನಿಜ ಆಗಿದೆ. ಅದರಂತೆ ರಾಹುಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ರಾಹುಲ್‌ ಕಳೆದೆರಡು ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್‌ ಪರ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಇನ್ನು ಟೀಂ ಇಂಡಿಯಾ (Team India) ತಾರಾ ಆಟಗಾರ ಮಯಾಂಕ್ ಅಗರ್‌ವಾಲ್ ಕೂಡಾ ಐಪಿಎಲ್‌ನಲ್ಲಿ ರಾಹುಲ್ ಅವರಂತೆಯೇ ರನ್‌ ಗಳಿಸಿದ್ದರು. ಇದೀಗ ಮಯಾಂಕ್ ಅಗರ್‌ವಾಲ್ ಅವರನ್ನು ರೀಟೈನ್ ಮಾಡಿಕೊಳ್ಳಲಾಗಿದೆ. ಹೀಗಾಗಿ ಮಯಾಂಕ್ ಅಗರ್‌ವಾಲ್ ಬರೋಬ್ಬರಿ 14 ಕೋಟಿ ರುಪಾಯಿಗಳನ್ನು ಜೇಬಿಗಿಳಿಸಲಿದ್ದಾರೆ. ಇನ್ನು ಇನ್ನು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡದ ಪ್ರತಿಭಾನ್ವಿತ ಯುವ ವೇಗಿ ಆರ್ಶದೀಪ್ ಸಿಂಗ್ 4 ಕೋಟಿ ರುಪಾಯಿಗಳನ್ನು ಪಡೆಯಲಿದ್ದಾರೆ. 

IPL Retention: ಇಬ್ಬರು ಸ್ಪೋಟಕ ಬ್ಯಾಟರ್‌ಗಳನ್ನು ತಂಡದಿಂದ ಕೈಬಿಟ್ಟ ಸನ್‌ರೈಸರ್ಸ್‌ ಹೈದರಾಬಾದ್‌..!

ತಾರಾ ಆಟಗಾರರಿಗೆ ಕೋಕ್‌: ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಯಾವಾಗಲೂ ಅತಿಹೆಚ್ಚು ಹಣವನ್ನು ಪರ್ಸ್‌ನಲ್ಲಿಟ್ಟುಕೊಂಡು ಹರಾಜಿನಲ್ಲಿ ಪಾಲ್ಗೊಳ್ಳುತ್ತದೆ. ಹೀಗಾಗಿ ತಂಡದ ಪ್ರಮುಖ ಆಟಗಾರರಿಗೆ ಕೊಕ್ ನೀಡಲಾಗಿದೆ. ಸ್ಪೋಟಕ ಬ್ಯಾಟರ್‌ ಕ್ರಿಸ್ ಗೇಲ್‌, ನಿಕೋಲಸ್ ಪೂರನ್‌, ಶಾರುಖ್ ಖಾನ್, ಬೌಲರ್‌ಗಳಾದ ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡನ್‌, ಮುರುಗನ್ ಅಶ್ವಿನ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಈ ಬಾರಿಗೆ ಮೆಗಾ ಹರಾಜಿನಲ್ಲಿ ಹೊಸದಾಗಿ ಮತ್ತೆರಡು ತಂಡಗಳು ಸೇರ್ಪಡೆಯಾಗುವುದರಿಂದ ಫ್ರಾಂಚೈಸಿಗಳು 90 ಕೋಟಿ ರುಪಾಯಿ ಹಣದಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ. ಅದರಂತೆ ಪಂಜಾಬ್ ಪರ್ಸ್‌ನಲ್ಲಿ ಇದೀಗ 18 ಕೋಟಿ ರುಪಾಯಿ ಖರ್ಚಾಗಿದ್ದು, ಇನ್ನುಳಿದ 72 ಕೋಟಿ ರುಪಾಯಿಗಳಲ್ಲಿ ತಮಗೆ ಬೇಕಾದ ಅಟಗಾರರನ್ನು ಖರೀದಿಸಬಹುದಾಗಿದೆ.

ಕಳೆದೆರಡು ಅವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್‌ ಪಂಜಾಬ್‌ ಕಿಂಗ್ಸ್ ತಂಡದ ಪರ ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸಿದ್ದ ಆಟಗಾರ ಎನಿಸಿದ್ದರು. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಹುಲ್ ಕೇವಲ 13 ಪಂದ್ಯಗಳನ್ನಾಡಿ 626 ರನ್‌ ಬಾರಿಸುವ ಮೂಲಕ ಟೂರ್ನಿಯಲ್ಲಿ ಮೂರನೇ ಗರಿಷ್ಠ ಸ್ಕೋರರ್ ಎನಿಸಿದ್ದರು. ಇನ್ನು ರಾಹುಲ್ ಅವರನ್ನು ಪಂಜಾಬ್ ತಂಡದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಲಾಯಿತು. ಆದರೆ ಅವರು ಹರಾಜಿನಲ್ಲಿ ಪಾಲ್ಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಯಿತು. ಅವರ ನಿರ್ಧಾರವನ್ನು ಸ್ವಾಗತಿಸುವುದಾಗಿ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಇನ್ನು ಪಂಜಾಬ್ ತಂಡವು ರೀಟೈನ್ ಮಾಡಿಕೊಂಡ ಮಯಾಂಕ್ ಅಗರ್‌ವಾಲ್ ಕೂಡಾ ಭರ್ಜರಿ ಫಾರ್ಮ್‌ನಲ್ಲಿದ್ದು, ಕಳೆದ ಆವೃತ್ತಿಯಲ್ಲಿ 12 ಪಂದ್ಯಗಳಿಂದ 441 ರನ್‌ ಸಿಡಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದರು. ಇನ್ನು ಯುವ ವೇಗಿ ಅರ್ಶದೀಪ್ ಸಿಂಗ್ 12 ಪಂದ್ಯಗಳಿಂದ 18 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.

Follow Us:
Download App:
  • android
  • ios