Asianet Suvarna News Asianet Suvarna News

ಆರ್‌ಸಿಬಿ ಟ್ವಿಟ್ಟರ್‌ ಖಾತೆ ಹ್ಯಾಕ್‌: ಎನ್‌ಎಫ್‌ಟಿ ಟ್ವೀಟ್‌ಗಳನ್ನು ನೋಡಿ ಅಭಿಮಾನಿಗಳು ಶಾಕ್..!

ಹ್ಯಾಕರ್‌ಗಳು ಎನ್‌ಎಫ್‌ಟಿ ಸಂಬಂಧಿತ ಟ್ವೀಟ್‌ಗಳನ್ನು ಟೈಮ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದ ತಕ್ಷಣ ಬಳಕೆದಾರರು ನಮ್ಮ ಆರ್‌ಸಿಬಿ ಟ್ವಿಟ್ಟರ್‌ ಅಕೌಂಟ್‌ ಹ್ಯಾಕ್‌ ಆಗಿದೆ ಎಂಬುದನ್ನು ಅರಿತುಕೊಂಡರು.

ipl franchise rcb twitter account hacked renamed to bored ape yacht club ash
Author
First Published Jan 21, 2023, 12:00 PM IST

ಬೆಂಗಳೂರು (ಜನವರಿ 21, 2023):  ಐಪಿಎಲ್‌ ಸಂಬಂಧಿತ ಹಾಗೂ ಭಾರತ ಕ್ರಿಕೆಟ್‌ ಆಟಗಾರರಿಗೆ ಸಪೋರ್ಟ್‌ ಮಾಡುತ್ತಾ ಹಲವು ಪೋಸ್ಟ್‌ಗಳನ್ನು ಹಾಕುತ್ತಿದ್ದ ಹಾಗೂ 6 ಮಿಲಿಯನ್‌ಗೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟ್ಟರ್ ಖಾತೆ ಹ್ಯಾಕ್‌ ಆಗಿದೆ. ಈ ಹಿನ್ನೆಲೆ, ಕ್ರಿಕೆಟ್‌ ಪೋಸ್ಟ್‌ಗಳಿಗಾಗಿ ಕಾಯುತ್ತಿದ್ದ ಅಭಿಮಾಣಿಗಳಿಗೆ ಶಾಕ್‌ ಆಗಿದೆ. ಹೌದು, ಶನಿವಾರ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್‌ಗಳು NFT-ಸಂಬಂಧಿತ ಟ್ವೀಟ್‌ಗಳನ್ನು ಟೈಮ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದ ತಕ್ಷಣ ಬಳಕೆದಾರರು ನಮ್ಮ ಆರ್‌ಸಿಬಿ ಟ್ವಿಟ್ಟರ್‌ ಅಕೌಂಟ್‌ ಹ್ಯಾಕ್‌ ಆಗಿದೆ ಎಂಬುದನ್ನು ಅರಿತುಕೊಂಡರು. ಇತರೆ ಟ್ವಿಟ್ಟರ್‌ ಬಳಕೆದಾರರು ಎನ್‌ಎಫ್‌ಟಿ ಬಗ್ಗೆ ಮಾಡಿರುವ ಟ್ವೀಟ್‌ಗಳನ್ನು ಸಹ ಈ ಹ್ಯಾಕ್‌ ಮಾಡಿರುವ ಅಕೌಂಟ್‌ನಲ್ಲಿ ರೀಟ್ವೀಟ್‌ ಮಾಡಲಾಗಿದೆ.

ಹ್ಯಾಕರ್ (Hacker) ಡಿಸ್‌ಪ್ಲೇ ಚಿತ್ರವನ್ನು (Display Picture) ಬದಲಾಯಿಸುವುದಲ್ಲದೆ, ಪ್ರೊಫೈಲ್ ಹೆಸರನ್ನು ಸಹ 'ಬೋರ್ಡ್ ಏಪ್ ಯಾಚ್ ಕ್ಲಬ್' (Bored Ape Yacht Club) ಎಂದು ಬದಲಾಯಿಸಿದ್ದಾರೆ. ಎನ್‌ಎಫ್‌ಟಿ (NFT) ಸಂಬಂಧಿತ ಟ್ವೀಟ್‌ಗಳನ್ನು (Tweet) ಪೋಸ್ಟ್ ಮಾಡಿರುವುದಲ್ಲದೆ, ಇತರ ಕೆಲವು NFT ಸಂಬಂಧಿತ ಬಳಕೆದಾರರನ್ನು ರೀಟ್ವೀಟ್ ಮಾಡಿದೆ. ಆದರೆ, ಕುತೂಹಲಕರವೆಂದರೆ, ಆರ್‌ಸಿಬಿ (RCB) ಈವರೆಗೆ ಈ ಕಂಟೆಂಟ್‌ ಅನ್ನು ತೆಗೆದುಹಾಕಿಲ್ಲ. ಅಲ್ಲದೆ, ತಮ್ಮ ಅಕೌಂಟ್‌ ಹ್ಯಾಕ್‌ ಆಗಿರುವ ಬಗ್ಗೆ ಅವರು ಯಾವುದೇ ಅಧಿಕೃತ ದೃಢೀಕರಣವನ್ನೂ ನೀಡಿಲ್ಲ. ಇದಲ್ಲದೆ, RCB ತನ್ನ ಅಕೌಂಟ್‌ ಹ್ಯಾಕ್‌ (Account Hack) ಆಗುತ್ತಿರುವ ವೇಳೆ ಪ್ರೊಮೋಷನಲ್‌ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.

ಇದನ್ನು ಓದಿ: ಆರ್‌ಸಿಬಿ ಮಾಜಿ ಆಟಗಾರ, 19 ವಯೋಮತಿ ತಂಡದ ಮಾಜಿ ನಾಯಕ ವಿಜಯ್‌ ಜೋಲ್‌ ಬಂಧನ!

ಹ್ಯಾಕರ್‌ಗಳು, ಐಪಿಎಲ್‌ ಆರ್‌ಸಿಬಿ ಕ್ಲಬ್‌ನ ಹೆಸರನ್ನು 'ಬೋರ್ಡ್ ಏಪ್ ಯಾಚ್ ಕ್ಲಬ್’ ಎಂದು ಬದಲಾಯಿಸಿದ್ದಾರೆ. ಜತೆಗೆ ಅವರ ಲಿಂಕ್‌ಗಳನ್ನು ಸಹ ಟ್ವಿಟ್ಟರ್‌ ಬಯೋದಲ್ಲಿ ಸೇರಿಸಿದ್ದಾರೆ. "ಸದಸ್ಯರಾಗಲು, OpenSea ನಲ್ಲಿ ಬೋರ್ಡ್ ಏಪ್ ಅಥವಾ ಮ್ಯೂಟೆಂಟ್‌ ಏಪ್ ಅನ್ನು ಖರೀದಿಸಿ. @yugalabs ನಿಂದ ರಚಿಸಲಾಗಿದೆ ಎಂದು ಹ್ಯಾಕ್‌ ಆಗಿರುವ ಟ್ವಿಟ್ಟರ್‌ ಬಯೋ ಹೇಳುತ್ತದೆ.

2009 ರಲ್ಲಿ ಆರ್‌ಸಿಬಿ ಟ್ವಿಟ್ಟರ್‌ ಹ್ಯಾಂಡಲ್‌ ಅನ್ನು ಕ್ರಿಯೇಟ್‌ ಮಾಡಲಾಗಿತ್ತು. ಇದು, ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ 6.4 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದೆ. ಇನ್ನು, ಆರ್‌ಸಿಬಿ ಫ್ರಾಂಚೈಸಿ ಖಾತೆ ಹ್ಯಾಕ್ ಆಗಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 2021 ರಲ್ಲಿ, ಸಹ ಅದನ್ನು ಹ್ಯಾಕ್ ಮಾಡಲಾಗಿತ್ತು. ಆದರೆ ಆ ವೇಳೆ ಸ್ವಲ್ಪ ಸಮಯದಲ್ಲೇ ತನ್ನ ಫ್ರ್ಯಾಂಚೈಸ್ ಖಾತೆಯನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ: ಐಪಿಎಲ್‌ಗೆ RCB ಸ್ಟಾರ್‌ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್‌ವೆಲ್‌ ಡೌಟ್?

“ಆತ್ಮೀಯ 12ನೇ ಮ್ಯಾನ್ ಆರ್ಮಿ, ನಮ್ಮ ಟ್ವಿಟ್ಟರ್‌ ಖಾತೆಯನ್ನು ಕೆಲವು ಗಂಟೆಗಳ ಹಿಂದೆ ಕಾಂಪ್ರೊಮೈಸ್‌ ಮಾಡಿಕೊಳ್ಳಲಾಗಿದೆ ಮತ್ತು ನಾವು ಈಗ ಆಕ್ಸೆಸ್ ಅನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಹ್ಯಾಕರ್‌ಗಳು ಹಾಕಿರುವ ಟ್ವೀಟ್ ಅನ್ನು ನಾವು ಖಂಡಿಸುತ್ತೇವೆ ಮತ್ತು ನಾವು ಈಗ ಅಳಿಸಿರುವ ಆ ಟ್ವೀಟ್‌ನಿಂದ ಯಾವುದೇ ಕಂಟೆಂಟ್‌ ಅನ್ನು ಅನುಮೋದಿಸುವುದಿಲ್ಲ. ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ’’ ಎಂದು RCB ಆಗ ಟ್ವೀಟ್ ಮಾಡಿತ್ತು.

ಇದನ್ನೂ ಓದಿ: 10 ತಿಂಗಳ ಹಿಂದಷ್ಟೇ ಲೆದರ್‌ಬಾಲ್‌ನಲ್ಲಿ ಬೌಲಿಂಗ್‌ ಆರಂಭಿಸಿದ್ದ ಅವಿನಾಶ್ ಸಿಂಗ್, RCB ಸರ್ಪ್ರೈಸ್ ಪ್ಯಾಕೇಜ್..!

Follow Us:
Download App:
  • android
  • ios