ಬೆಂಗಳೂರು(ಫೆ.19): ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್ ಫ್ರಾಂಚೈಸಿ 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್‌ ಶಕೀಬ್ ಅಲ್ ಹಸನ್‌ ಸೇರಿದಂತೆ 8 ಆಟಗಾರರನ್ನು ಖರೀದಿಸಿದೆ.

ಬಾಲಿವುಡ್‌ ಸೂಪರ್ ಸ್ಟಾರ್ ಶಾರುಕ್ ಖಾನ್‌ ಒಡೆತದ ಕೆಕೆಆರ್ ಫ್ರಾಂಚೈಸಿ 7.75 ಕೋಟಿ ರುಪಾಯಿ ಖರ್ಚು ಮಾಡಿ 8 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೋಲ್ಕತ ನೈಟ್‌ ರೈಡರ್ಸ್‌ ಫ್ರಾಂಚೈಸಿ ಶಕೀಬ್ ಅಲ್‌ ಹಸನ್‌ ಮಾತ್ರವಲ್ಲದೇ ಎರಡನೇ ವಿದೇಶಿ ಆಟಗಾರನ ರೂಪದಲ್ಲಿ ಬೆನ್ ಕಟ್ಟಿಂಗ್ಸ್‌ರನ್ನು ಖರೀದಿಸಿದೆ. ಇನ್ನುಳಿದಂತೆ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್‌, ಕರುಣ್‌ ನಾಯರ್‌, ಪವನ್ ನೇಗಿ, ವೆಂಕಟೇಶ್ ಐಯ್ಯರ್ ಹಾಗೂ ವೈಭವ್ ಅರೋರರನ್ನು ಕೆಕೆಆರ್ ಫ್ರಾಂಚೈಸಿ ಖರೀದಿಸಿದೆ. 

IPL 2021: ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್‌ ತಂಡ ಹೀಗಿದೆ ನೋಡಿ
 
ಹರಾಜಿನ ಬಳಿಕ ಕೋಲ್ಕತ ನೈಟ್‌ ರೈಡರ್ಸ್ ತಂಡ ಹೀಗಿದೆ ನೋಡಿ:

ಇಯಾನ್‌ ಮಾರ್ಗನ್‌, ಆಂಡ್ರೆ ರಸೆಲ್‌, ದಿನೇಶ್ ಕಾರ್ತಿಕ್, ಕಮಲೇಶ್ ನಾಗರಕೋಟಿ, ಕಲ್ದೀಪ್ ಯಾದವ್‌, ಲಾಕಿ ಫರ್ಗ್ಯೂಸನ್‌, ನಿತಿಶ್‌ ರಾಣಾ, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಸಂದೀಪ್‌ ವಾರಿಯರ್, ಶಿವಂ ಮಾವಿ, ಶುಭ್‌ಮನ್‌ ಗಿಲ್, ಸುನಿಲ್ ನರೈನ್‌, ಪ್ಯಾಟ್‌ ಕಮಿನ್ಸ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಟಿಮ್‌ ಸೈಫರ್ಟ್, ಶಕೀಬ್ ಅಲ್‌ ಹಸನ್‌, ಶೆಲ್ಡನ್ ಜಾಕ್ಸನ್‌, ಹರ್ಭಜನ್ ಸಿಂಗ್, ಬೆನ್ ಕಟ್ಟಿಂಗ್ಸ್‌, ವೆಂಕಟೇಶ್ ಐಯ್ಯರ್, ಪವನ್ ನೇಗಿ, ವೈಭವ್ ಅರೋರಾ, ಕರುಣ್ ನಾಯರ್.