IPL Auction 2023 ಐಪಿಎಲ್ ಹರಾಜು ಇತಿಹಾಸದಲ್ಲಿ ದಾಖಲೆ, 18.50 ಕೋಟಿ ರೂ 'ಸ್ಯಾಮ್' ಸೇಲ್!
ಐಪಿಎಲ್ ಹರಾಜಿನಲ್ಲಿ ಹೊಸ ಇತಿಹಾಸ ಬರೆದ ಸ್ಯಾಮ್ ಕರ್ರನ್. 18.25 ಕೋಟಿ ರುಪಾಯಿ ಬಿಡ್ ಮಾಡಿದ ಪಂಜಾಬ್ ಕಿಂಗ್ಸ್

ಕೊಚ್ಚಿ(ಡಿ.23): ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಕುರ್ರನ್ ದಾಖಲೆ ಬರೆದಿದ್ದಾರೆ. ಸ್ಯಾಮ್ ಕುರ್ರನ್ ಐಪಿಎಲ್ ಹರಾಜು ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಿಗಿದ್ದಾರೆ. ಬರೋಬ್ಬರಿ 18.50 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ತೀವ್ರ ಪೈಪೋಟಿ ನಡುವೆ ಪಂಜಾಬ್ ಕಿಂಗ್ಸ್ 18.50 ಕೋಟಿ ರೂಪಾಯಿ ನೀಡಿ ಸ್ಯಾಮ್ ಖರೀದಿ ಮಾಡಿತು. ಐಪಿಎಲ್ ಹರಾಜು ಇತಿಹಾಸದಲ್ಲಿ ಇದುವರೆಗೆ 16.25 ಕೋಟಿ ರೂಪಾಯಿ ಗರಿಷ್ಠ ಬಿಡ್ ಆಗಿತ್ತು. 2021ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೌತ್ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೊರಿಸ್‌ಗೆ 16.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು.
ಸ್ಯಾಮ್ ಕುರ್ರನ್ ಖರೀದಿಗೆ ಹಲವು ಫ್ರಾಂಚೈಸಿಗಳು ಪೈಪೋಟಿ ನಡೆಸಿತ್ತು. ಅಂತಿಮವಾಗಿ 18.50 ಕೋಟಿ ರೂಪಾಯಿ ನೀಡಿ ಪಂಜಾಬ್ ಕಿಂಗ್ಸ್ ಸ್ಯಾಮ್ ಕುರ್ರನ್ ಅವರನ್ನು ತಂಡ ಖರೀದಿ ಮಾಡಿತು. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ಯಾಮ್ ಖರೀದಿಸಲು ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ತೀವ್ರ ಪೈಪೋಟಿ ನಡೆಯಿತು. ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ್ದ ಸ್ಯಾಮ್ ಕರ್ರನ್ ಬಹುಬೇಡಿಕೆಯ ಆಟಗಾರನಾಗಿದ್ದರು.
IPL 2023 Mini Auction Live Updates: ಐಪಿಎಲ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸ್ಯಾಮ್ ಹರಾಜು
ಐಪಿಎಲ್ ಹರಾಜು ಇತಿಹಾಸದಲ್ಲಿ ಗರಿಷ್ಠ ಮೊತ್ತ ದಾಖಲೆ
ಸ್ಯಾಮ್ ಕುರ್ರನ್; 18.50 ಕೋಟಿ ರೂಪಾಯಿ, ಪಂಜಾಬ್ ಕಿಂಗ್ಸ್ (2022)
ಕ್ಯಾಮರೂನ್ ಗ್ರೀನ್, 17.50 ಕೋಟಿ ರೂಪಾಯಿ(ಮುಂಬೈ ಇಂಡಿಯನ್ಸ್(2023)
ಕ್ರಿಸ್ ಮೊರಿಸ್; 16.26 ಕೋಟಿ ರೂಪಾಯಿ, ರಾಜಸ್ಥಾನ ರಾಯಲ್ಸ್(2021)
ಯುವರಾಜ್ ಸಿಂಗ್; 16 ಕೋಟಿ ರೂಪಾಯಿ, ಡೆಲ್ಲಿ ಡೇರ್‌ಡೆವಿಲ್ಸ್(2015)
ಪ್ಯಾಟ್ ಕಮಿನ್ಸ್: 15.50 ಕೋಟಿ ರೂಪಾಯಿ, ಕೋಲ್ಕತಾ ನೈಟ್ ರೈಡರ್ಸ್(2020)
ಇಶಾನ್ ಕಿಶನ್; 15.25 ಕೋಟಿ ರೂಪಾಯಿ, ಮುಂಬೈ ಇಂಡಿಯನ್ಸ್(2022)
ಕೈಲ್ ಜ್ಯಾಮಿನ್ಸನ್; 15 ಕೋಟಿ ರೂಪಾಯಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(2021)
ಬೆನ್ ಸ್ಕೋಕ್ಸ್, 14.50 ಕೋಟಿ ರೂಪಾಯಿ, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್(2017)
ಗ್ಲೆನ್ ಮ್ಯಾಕ್ಸ್‌ವೆಲ್, 14.25 ಕೋಟಿ ರೂಪಾಯಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(2021)
ಜೇ ರಿಚರ್ಡ್ಸನ್; 14 ಕೋಟಿ ರೂಪಾಯಿ, ಪಂಜಾಬ್ ಕಿಂಗ್ಸ್(2021)
ಯುವರಾಜ್ ಸಿಂಗ್; 14 ಕೋಟಿ ರೂಪಾಯಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(2014)
ದೀಪಕ್ ಚಹಾರ್, 14 ಕೋಟಿ ರೂಪಾಯಿ, ಚೆನ್ನೈ ಸೂಪರ್ ಕಿಂಗ್ಸ್(2022)
ಐಪಿಎಲ್ ಟೂರ್ನಿಯಲ್ಲಿ ಸ್ಯಾಮ್ ಕುರ್ರನ್ 32 ಪಂದ್ಯಗಳನ್ನಾಡಿದ್ದಾರೆ. 337ರನ್ ಸಿಡಿಸಿದ್ದಾರೆ. ಅಜೇಯ 55 ರನ್ ಕುರ್ರನ್ ಗರಿಷ್ಠ ಮೊತ್ತ. 149.78ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಕುರ್ರನ್ 2 ಅರ್ಧಶತ ಸಿಡಿಸಿದ್ದಾರೆ. ಕುರ್ರನ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ. ಬೌಲಿಂಗ್‌ನಲ್ಲಿ 32 ವಿಕೆಟ್ ಕಬಳಿಸಿದ್ದಾರೆ.
ಹರಾಜಿಗೂ ಮೊದಲು 10 ತಂಡಗಳು ಒಟ್ಟು 163 ಆಟಗಾರರನ್ನು ರೀಟೈನ್ ಮಾಡಿಕೊಂಡಿವೆ. ಹರಾಜಿನಲ್ಲಿರುವ 87 ಖಾಲಿ ಸ್ಥಾನಗಳಲ್ಲಿ ಗರಿಷ್ಠ 30 ಸ್ಥಾನಗಳು ವಿದೇಶಿ ಆಟಗಾರರ ಪಾಲಾಗಬಹುದು. ಹರಾಜಿನಲ್ಲಿ 10 ಫ್ರಾಂಚೈಸಿಗಳು ಸೇರಿ ಒಟ್ಟು 206.5 ಕೋಟಿ ರು. ಖರ್ಚು ಮಾಡಬಹುದಾಗಿದೆ.