ಐಪಿಎಲ್ ಹರಾಜಿಗೆ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿಯ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾರತೀಯ ಯುವ ಆಟಗಾರರ ಮೇಲೆ ಕಣ್ಣಿಟ್ಟಿದೆ. ಅದರಲ್ಲೂ ಕನ್ನಡಿಗರ ಖರೀದಿಗೆ ಸಜ್ಜಾಗಿದೆ. ಈ ಬಾರಿ ಆರ್‌ಸಿಬಿ ಖರೀದಿಗೆ ಪಟ್ಟಿ ಮಾಡಿರುವ ಆಟಗಾರರ ವಿವರ ಇಲ್ಲಿದೆ.

ಕೊಚ್ಚಿ(ಡಿ.22): ಐಪಿಎಲ್ 2023ರ ಟೂರ್ನಿಗೆ ಸಜ್ಜಾಗುತ್ತಿರುವ ಬಿಸಿಸಿಐ ನಾಳೆ ಹರಾಜಿನ ಮೂಲಕ ಅಧಿಕೃತ ಚಾಲನೆ ನೀಡಲಿದೆ. ಕೊಚ್ಚಿಯಲ್ಲಿ ನಡೆಯಲಿರುವ ಹರಾಜಿಗೆ 10 ತಂಡಗಳು ಭರ್ಜರಿಯಾಗಿ ತಯಾರಿ ಮಾಡಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಭಾರತೀಯ ಯುವ ಕ್ರಿಕೆಟಿಗರ ಮೇಲೆ ಚಿತ್ತ ನೆಟ್ಟಿದೆ. ಅದರಲ್ಲೂ ಕನ್ನಡಿಗರ ಖರೀದಿಗೆ ಆರ್‌ಸಿಬಿ ತಯಾರಿ ಮಾಡಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕ ಅಥವಾ ಮಧ್ಯಮ ಕ್ರಮಾಂಕಕ್ಕೆ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗತ್ಯವಿದೆ. ಈ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆಯನ್ನು ಆಯ್ಕೆ ಮಾಡಲು ಆರ್‌ಸಿಬಿ ಚಿಂತನೆ ನಡೆಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಳಿಕ ಬಾಕಿ ಉಳಿದಿರುವ ಹಣ 8.75 ಕೋಟಿ ರೂಪಾಯಿ. ಬಾಕಿ ಉಳಿದಿರುವ ಸ್ಥಾನ ಒಟ್ಟು 7. ಇದರಲ್ಲಿ ಇಬ್ಬರು ವಿದೇಶಿ ಆಟಾಗರರನ್ನು ಖರೀದಿ ಮಾಡಲು ಅವಕಾಶ ಆರ್‌ಸಿಬಿಗಿದೆ. ಹೆಚ್ಚು ಹಣ ಉಳಿದಿಲ್ಲದ ಕಾರಣ ಆರ್‌ಸಿಬಿ ಯುವ ಆಟಗಾರರತ್ತ ಮುಖಮಾಡಬೇಕಿದೆ. ಇಷ್ಟೇ ಅಲ್ಲ ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಬಿಡ್ಡಿಂಗ್ ಮಾಡಿದರೆ, ಆರ್‌ಸಿಬಿ ಹರಾಜಿನಲ್ಲಿ ಪ್ರಮುಖ ಘಟ್ಟ ಮುಗಿಸಲಿದೆ. ಜೊತೆಗೆ ಮೂಲ ಬೆಲೆಗೆ ಯುವ ಆಟಾಗರರ ಖರೀದಿಗೆ ಮುಂದಾಗಲಿದೆ.

IPL AUCTION 2022: ಮಿನಿ ಹರಾಜಿಗೂ ಮುನ್ನ ಯಾವ ತಂಡದ ಬಳಿ ಎಷ್ಟು ಹಣವಿದೆ..?

ವಿದೇಶಿ ಆಟಾಗಾರರತ್ತ ಒಲವು ತೋರುವ ಸಾಧ್ಯತೆಗಳು ಕಡಿಮೆ ಇದೆ. ಬಾಕಿ ಇರುವ ಹಣ ಹಾಗೂ ಪ್ಲೇಯಿಂಗ್ 11ನಲ್ಲಿರುವ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ವಿದೇಶಿಗರಿಗಿಂತ ಭಾರತೀಯ ಯುವ ಆಟಗಾರರತ್ತ ಹೆಚ್ಚಿನ ಒಲವು ತೋರಲಿದೆ. ಕಾರಣ ಈಗಾಗಲೇ ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಾನಿಂಡು ಹಸರಂಗ, ಜೋಶ್ ಹೇಜಲ್‌ವುಡ್ ತಂಡದಲ್ಲಿದ್ದಾರೆ.

ಕರ್ನಾಟಕದ 16 ಆಟಗಾರರು
ಹರಾಜು ಪಟ್ಟಿಯಲ್ಲಿ ಕರ್ನಾಟಕ 16 ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಮಯಾಂಕ್‌, ಮನೀಶ್‌, ಕರುಣ್‌ ನಾಯರ್‌, ಸುಚಿತ್‌, ಶ್ರೇಯಸ್‌ ಜೊತೆ ಯುವ ತಾರೆಗಳಾದ ರೋಹನ್‌ ಪಾಟೀಲ್‌, ಚೇತನ್‌, ಮನೋಜ್‌, ಶರತ್‌, ವೈಶಾಕ್‌, ಲುವ್‌ನಿತ್‌, ವಿದ್ವತ್‌ ಕಾವೇರಪ್ಪ, ವೆಂಕಟೇಶ್‌, ಕೌಶಿಕ್‌, ಶುಭಾಂಗ್‌, ಸಂಜಿತ್‌ ಕೂಡಾ ಅದೃಷ್ಟಪರೀಕ್ಷೆಗಿಳಿಯಲಿದ್ದಾರೆ.

IPL Auction 2023: ಕೊಚ್ಚಿಯಲ್ಲಿ ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಇರುವ 87 ಸ್ಥಾನಗಳಿಗೆ ಡಿ.23ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಭಾರತ 273 ಆಟಗಾರರ ಜೊತೆ 132 ವಿದೇಶಿ ಆಟಗಾರರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 119 ಅಂತಾರಾಷ್ಟಿ್ರಯ ಆಟಗಾರರು, 282 ಅನ್‌ಕ್ಯಾಪ್‌್ಡ ಆಟಗಾರರು ಪಟ್ಟಿಯಲ್ಲಿದ್ದಾರೆ. ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರ್ರನ್‌, ಹ್ಯಾರಿ ಬ್ರೂಕ್‌, ಆಸ್ಪ್ರೇಲಿಯಾದ ಕ್ಯಾಮರೋನ್‌ ಗ್ರೀನ್‌ ಸೇರಿದಂತೆ ಪ್ರಮುಖ ಆಟಗಾರರ ಬಂಪರ್‌ ನಿರೀಕ್ಷೆಯಲ್ಲಿದ್ದಾರೆ. ಶುಕ್ರವಾರ ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಹರಾಜು ಆರಂಭವಾಗಲಿದ್ದು, ಬಹುತೇಕ ಫ್ರಾಂಚೈಸಿಗಳು ಕೊಚ್ಚಿ ತಲುಪಿದ್ದಾರೆ.

16ನೇ ಆವೃತ್ತಿಯ ಐಪಿಎಲ್‌ ಹರಾಜಿನಲ್ಲಿ ಪಾಲ್ಗೊಳ್ಳಲು ಒಟ್ಟು 991 ಆಟಗಾರರ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 273 ಭಾರತೀಯ ಆಟಗಾರರು ಹಾಗೂ 132 ವಿದೇಶಿ ಆಟಗಾರರ ಹೆಸರನ್ನು ಅಂತಿಮಗೊಳಿಸಲಾಗಿದೆ.