Asianet Suvarna News Asianet Suvarna News

ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ನಗುವಿಗೆ ಕ್ಲೀನ್ ಬೋಲ್ಡ್, ಹರಾಜಿನಲ್ಲಿ ವೈರಲ್ ವಿಡಿಯೋ!

ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯ ಮಾರನ್ ಮತ್ತೆ ವೈರಲ್ ಆಗಿದ್ದಾರೆ. ಆಟಗಾರರ ಖರೀದಿ ವೇಳೆ ಕಾವ್ಯ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ

IPL Auction 2023 National Crush kaviya maran reaction goes viral during players bidding  ckm
Author
First Published Dec 23, 2022, 4:52 PM IST

ಕೊಚ್ಚಿ(ಡಿ.23): ಕಳೆದ ಬಾರಿಯ ಐಪಿಎಲ್ ಹರಾಜಿನಂತೆ ಈ ಬಾರಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಮಾಲೀಕರ ಪುತ್ರಿ ಹಾಗೂ ಸಿಇಒ ಕಾವ್ಯ ಮಾರನ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಆಟಗಾರರ ಖರೀದಿ ವೇಳೆ ಕಾವ್ಯ ಮಾರನ್ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ಆರೆಂಜ್ ಆರ್ಮಿ ತಂಡ ತೀವ್ರ ಪೈಪೋಟಿ ನಡುವೆ ಪ್ರತಿಭಾನಿತ್ವತ ಆಟಗಾರ ಹ್ಯಾರಿ ಬ್ರೂಕ್ ಖರೀದಿ ಮಾಡಿತ್ತು. 13.25 ಕೋಟಿ ರೂಪಾಯಿ ಬಿಡ್ಡಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್‌ಗೆ ಯಾವುದೇ ತಂಡ ಪೈಪೋಟಿ ನೀಡಲಿಲ್ಲ. ಈ ವೇಳೆ ಕಾವ್ಯ ಮಾರನ್ ನೀಡಿದ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕಾವ್ಯ ಮಾರನ್ ಟ್ರೆಂಡ್ ಆಗಿದ್ದಾರೆ. ಬ್ಯೂಟಿ ವಿಥ್ ಬ್ರೈನ್ ಎಂದು ಹಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮತ್ತೂ ಕೆಲವರೂ ಪ್ರತಿ ಬಾರಿ ನಾನು ಹರಾಜು ಪ್ರಕ್ರಿಯೆಯನ್ನು ಕೂತಹಲದಿಂದ ವೀಕ್ಷಿಸುತ್ತೇನೆ. ಇದಕ್ಕೆ ಕಾರಣ ಕಾವ್ಯ ಮಾರನ್ ಎಂದಿದ್ದಾರೆ. ಕಾವ್ಯಾ ಮಾರನ್ ಈ ಹಿಂದಿನ ಹರಾಜುಗಳಲ್ಲಿ ಪಾಲ್ಗೊಂಡ ವಿಡಿಯೋಗಳು ಇದೀಗ ಟ್ರೆಂಡ್ ಆಗುತ್ತಿದೆ.

IPL 2023 Mini Auction Live Updates: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಅನುಭವಿ ವೇಗಿ

ಕಾವ್ಯ ಮಾರನ್ ಸನ್‌ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಪುತ್ರಿ. ಕಾವ್ಯ ಮಾರನ್ ಅಜ್ಜ ಮುರಸೋಲಿ ಮಾರನ್ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ಕಾವ್ಯ ಮಾರಾನ್, ತಮಿಳುನಾಡು ಮಾಜಿ ಮುಖ್ಯಮಂತ್ರಿ ಕೆ ಕರುಣಾನಿಧಿ ಸಂಬಂಧಿಯಾಗಿದ್ದಾರೆ. ಶ್ರೀಮಂತ ಕುಟುಂಬದ ಹಿನ್ನಲೆ ಇರುವ ಕಾವ್ಯ ಮಾರನ್ ಪ್ರತಿ ಐಪಿಎಲ್ ಹರಾಜಿನಲ್ಲಿ ಸುದ್ದಿಯಾಗುತ್ತಿದ್ದಾರೆ. 

ಸನ್‌ರೈಸರ್ಸ್ ಹೈದರಾಬಾದ್ ತಂಡ ಸಿಇಒ ಜವಾಬ್ದಾರಿ ಹೊತ್ತಿರುವ ಕಾವ್ಯ ಮಾರಾನ್ ಚೆನ್ನೈ ಸ್ಟೆಲ್ಲಾ ಮಾರಿಸ್ ಕಾಲೆಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಬಳಿಕ ನ್ಯೂಯಾರ್ಕ್ ವಿಶ್ವವಿದ್ಯಾಲದ ಪ್ರತಿಷ್ಠಿತ ಕಾಲೇಜು ಲಿಯಾನಾರ್ಡ್ ಎನ್ ಸ್ಟರ್ನ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. 2020ರಲ್ಲಿ ಐಪಿಎಲ್ ಹರಾಜಿನಲ್ಲಿ ಮೊದಲ ಬಾರಿಗೆ ಕಾವ್ಯಾ ಮಾರನ್ ಕಾಣಿಸಿಕೊಂಡಿದ್ದಾರೆ. 2020ರಿಂದ ಪ್ರತಿ ಐಪಿಎಲ್ ಹರಾಜಿನಲ್ಲಿ ಕಾವ್ಯ ಮಾರನ್ ವೈರಲ್ ಆಗಿದ್ದಾರೆ.

IPL 2022 ಸನ್‌ರೈಸರ್ಸ್‌ ಹೈದರಾಬಾದ್ ಬೆಡಗಿ Kavya Maran ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

2021ರಲ್ಲಿ ಕಾವ್ಯಾ ಮಾರನ್ ವಿರುದ್ಧ ಹೈದರಾಬಾದ್ ಅಭಿಮಾನಿಗಳು ತಿರುಗಿ ಬಿದ್ದಿದ್ದರು. ಇದಕ್ಕೆ ಮುಖ್ಯ ಕಾರಣ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಕಳಪೆ ಫಾರ್ಮ್‌ಗೆ ತುತ್ತಾಗಿದ್ದರು. 2021ರ ಮಧ್ಯದಲ್ಲೇ ವಾರ್ನರ್‌ಗೆ ತಂಡದಿಂದ ಗೇಟ್ ಪಾಸ್ ನೀಡಲಾಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

 

 

ಈ ಬಾರಿಯ ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 13.25 ಕೋಟಿ ರೂಪಾಯಿಗೆ ಹ್ಯಾರಿ ಬ್ರೂಕ್ ಖರೀದಿ ಮಾಡಿದ್ದರೆ, ಇದಕ್ಕೂ ಮೊದಲು ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ 8.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಅಳೆದು ತೂಗಿ ಈ ಬಾರಿಯ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆಟಗಾರರ ಖರೀದಿ ಮಾಡುತ್ತಿದೆ.


 

Follow Us:
Download App:
  • android
  • ios