Asianet Suvarna News Asianet Suvarna News

IPL Auction 2022 : ಮಿ. ಐಪಿಎಲ್ ಸುರೇಶ್ ರೈನಾ, ಐಪಿಎಲ್ ಟೂರ್ನಿಗೇ ಇಲ್ಲ!

ಐಪಿಎಲ್ ಇತಿಹಾಸದಲ್ಲಿಯೇ ಹಲವು ದಾಖಲೆಗಳನ್ನು ಒಲಿಸಿಕೊಂಡ ಆಟಗಾರ
ಮಿ.ಐಪಿಎಲ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡ ಪ್ಲೇಯರ್
ಐಪಿಎಲ್ ನ ಮೊದಲ ಆವೃತ್ತಿಯಿಂದಲೂ ಟೂರ್ನಿಯಲ್ಲಿ ಆಡಿದ್ದ ಆಟಗಾರ

IPL Auction 2022 Suresh Raina Goes Unsold In Mega Auction san
Author
Bengaluru, First Published Feb 13, 2022, 7:31 PM IST

ಬೆಂಗಳೂರು (ಫೆ.13): ಐಪಿಎಲ್ ಇತಿಹಾಸದ ಶ್ರೇಷ್ಠ ಆಟಗಾರರ ಪೈಕಿ ಒಬ್ಬರಾದ ಮಿ. ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಿಂದ ಹೊರಬಿದ್ದಂತಾಗಿದೆ. ಇದರೊಂದಿಗೆ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ಅನ್ ಸೋಲ್ಡ್ ಆದಂತಾಗಿದೆ.  2022ರ ಐಪಿಎಲ್ ಹರಾಜು ಪ್ರಕ್ರಿಯೆ ಎಕ್ಸಲರೇಟೆಡ್ ಪ್ರಕ್ರಿಯೆಯ 2ನೇ ಹಂತದಲ್ಲಿ ಸುರೇಶ್ ರೈನಾ ಹೆಸರು ಶಾರ್ಟ್ ಲಿಸ್ಟ್ ಆಗದೇ ಇರುವುದರೊಂದಿಗೆ 35 ವರ್ಷದ ಕ್ರಿಕೆಟಿಗನ ವೃತ್ತಿಜೀವನದ ಸ್ಮರಣೀಯ ಅಧ್ಯಾಯವೊಂದು ಕೊನೆಗೊಂಡಂತಾಗಿದೆ.

ಐಪಿಎಲ್ ನಲ್ಲಿ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಲಯನ್ಸ್ ತಂಡದ ಪರವಾಗಿ ಆಡಿದ್ದ ಸುರೇಶ್ ರೈನಾ, 2008ರಿಂದಲೂ ಐಪಿಎಲ್ ಟೂರ್ನಿಯ ಭಾಗವಾಗಿದ್ದರು. ಇದೇ ಮೊದಲ ಬಾರಿಗೆ ಅವರು ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದಾರೆ. ಮೊದಲ ದಿನ ಸುರೇಶ್ ರೈನಾ ಅವರ ಹೆಸರು ಪ್ರಕಟಗೊಂಡಾಗ ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಯಾವ ತಂಡವೂ ಅವರನ್ನು ಖರೀದಿ ಮಾಡಲು ಆಸಕ್ತಿ ತೋರಲಿಲ್ಲ. 2ನೇ ದಿನದಲ್ಲೂ ಇದೇ ಪುನರಾವರ್ತನೆ ಆಗುವುದರೊಂದಿಗೆ ರೈನಾ ಅವರ ಐಪಿಎಲ್ ಜೀವನ ಬಹುತೇಕ ಅಂತ್ಯಗೊಂಡಂತಾಗಿದೆ.

ಐಪಿಎಲ್ ಹರಾಜಿನಲ್ಲಿ (IPL Auction 2022) 2 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಸುರೇಶ್ ರೈನಾ (Suresh Raina), 2008ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಭಾಗವಾಗಿದ್ದರು. 2016 ಹಾಗೂ 2017ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿಎಲ್ ನಿಂದ ನಿಷೇಧ ಹೇರಿದ್ದಾಗ ಗುಜರಾತ್ ಲಯನ್ಸ್ (Gujrath Lions)ತಂಡದ ಪರವಾಗಿ ಸುರೇಶ್ ರೈನಾ ಅಡಿದ್ದರು. ಎಂಎಸ್ ಧೋನಿಯಂತೆ (MS Dhoni) ಸುರೇಶ್ ರೈನಾ ಕಳೆದ ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನ ಭಾಗವಾಗಿದ್ದರು.

IPL Auction 2022 Live: ಕೊನೆಗೂ ಕರ್ನಾಟಕದ ಆಟಗಾರನನ್ನು ಖರೀದಿಸಿದ ಆರ್‌ಸಿಬಿ..!... 
ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿರುವ ಅನುಭವಿ ಎಡಗೈ ಆಟಗಾರ, 205 ಐಪಿಎಲ್ ಪಂದ್ಯಗಳಿಂದ 5528 ರನ್ ಬಾರಿಸಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಗರಿಷ್ಟ ರನ್ ಬಾರಿಸಿದ ಆಟಗಾರನ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ನಲ್ಲಿ 1 ಶತಕ ಹಾಗೂ 39 ಅರ್ಧಶತಕ ಬಾರಿಸಿದ ದಾಖಲೆ ಇವರದಾಗಿದ್ದು, ಸಂಕಷ್ಟದ ಸಮಯದಲ್ಲಿ ಹಲವಾರು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಗಳನ್ನು ಆಡಿದ ಶ್ರೇಯ ಇವರದಾಗಿದೆ.

IPL Auction 2022 : "ಆದಷ್ಟು ಬೇಗ ಸಿದ್ಧವಾಗಿ ಬನ್ನಿ, ಎಮರ್ಜನ್ಸಿ ಇದೆ" ಬ್ರಿಜೇಶ್ ಪಟೇಲ್ ಒಂದೇ ಮಾತಿಗೆ ಬಂದ್ರು ಚಾರು ಶರ್ಮ!
ಚೆನ್ನೈ ಅಭಿಮಾನಿಗಳಿಂದ "ಚಿನ್ನಥಲಾ" ಎಂದೇ ಕರೆಸಿಕೊಂಡಿದ್ದ ಸುರೇಶ್ ರೈನಾ, 2008ರ ಐಪಿಎಲ್ ನಲ್ಲಿ 421 ರನ್ ಸಿಡಿಸುವ ಮೂಲಕ ಗಮನಸೆಳೆದಿದ್ದರೆ, 2009ರಲ್ಲೂ 434 ರನ್ ಸಿಡಿಸಿ ಮುಂಚಿದ್ದರು. 2014ರ ಐಪಿಎಲ್ ವರೆಗೂ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಐಪಿಎಲ್ ನಲ್ಲಿ ಕನಿಷ್ಠ 400 ರನ್ ಸಿಡಿಸಿದ ದಾಖಲೆ ಇವರದಾಗಿದೆ. ಐಪಿಎಲ್ ನಿಷೇಧದ ಬಳಿಕ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಖರೀದಿ ಮಾಡಿತು. ಆದರೆ, 2020ರ ಐಪಿಎಲ್ ನಲ್ಲಿ ವೈಯಕ್ತಿಕ ಕಾರಣದಿಂದಾಗಿ ಹಿಂದೆ ಸರಿದಿದ್ದ ರೈನಾ, 2021ರಲ್ಲಿ 12 ಪಂದ್ಯಗಳಿಂದ ಕೇವಲ 160 ರನ್ ಬಾರಿಸಿದ್ದರು. ಆದರೆ, ಐಪಿಎಲ್ 2022 ಹರಾಜಿಗೂ ಮುನ್ನ ಸುರೇಶ್ ರೈನಾ ಅವರನ್ನು ಬಿಡುಗಡೆ ಮಾಡಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸುರೇಶ್ ರೈನಾ, ಟೀಂ ಇಂಡಿಯಾದಲ್ಲೂ ಧೋನಿ ಜೊತೆಗೆ ಹಲವು ವರ್ಷಗಳ ಕಾಲ ಸಹಪಾಠಿಯಾಗಿದ್ದವು. 2020ರಲ್ಲಿ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ ಕೆಲವೇ ಹೊತ್ತಿನಲ್ಲಿಯೇ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರು.

Follow Us:
Download App:
  • android
  • ios