ದಾಖಲೆಯ ಅಂಡರ್ 19 ವಿಶ್ವಕಪ್ ಬಳಿಕ ಐಪಿಎಲ್ ಚಾಲೆಂಜ್ ಗೆ ಸಿದ್ಧವಾದ ಬೇಬಿ ಎಬಿಡೆವಾಲ್ಡ್ ಬ್ರೆವಿಸ್ ರನ್ನು 3 ಕೋಟಿಗೆ ಖರೀದಿ ಮಾಡಿದ ಮುಂಬೈ ಇಂಡಿಯನ್ಸ್ಬೇಬಿ ಎಬಿ ಬಗ್ಗೆ ಇಲ್ಲಿದೆ ಮಾಹಿತಿ 

ಬೆಂಗಳೂರು (ಫೆ. 12): ಎಬಿ ಡಿವಿಲಿಯರ್ಸ್ (AB de Villiers) ಜಗತ್ತಿನಾದ್ಯಂತ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗರಲ್ಲಿ ಒಬ್ಬರು. ಮಿಸ್ಟರ್ 360 ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ ಮಾಡಿ ಒಂದು ವರ್ಷವಾಗುವುದರ ಒಳಗಾಗಿ ಕ್ರಿಕೆಟ್ ಜಗತ್ತು ಹೊಸ ಎಬಿ ಡಿವಿಲಿಯರ್ಸ್ ರನ್ನು ಗುರುತು ಮಾಡಿತ್ತು. ದಕ್ಷಿಣ ಆಫ್ರಿಕಾದ (South Afrcia) ಅಂಡರ್ 19 ಆಟಗಾರ "ಬೇಬಿ ಎಬಿ" ( Baby AB) ಎನ್ನುವ ಹೆಸರಿನಿಂದಲೇ ಪ್ರಖ್ಯಾತವಾಗಿರುವ ಡೆವಾಲ್ಡ್ ಬ್ರೆವಿಸ್ (Dewald Brevis) ತಮ್ಮ ದಾಖಲೆಯ ಟೂರ್ನಿಯ ಬಳಿಕ ಐಪಿಎಲ್ ಚಾಲೆಂಜ್ ಗೆ ಸಿದ್ಧರಾಗಿದ್ದು, ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 3 ಕೋಟಿ ರೂಪಾಯಿಗೆ ಇವರನ್ನು ಖರೀದಿ ಮಾಡಿದೆ.

2022 ಐಸಿಸಿ ಅಂಡರ್ 19 ವಿಶ್ವಕಪ್ ನಲ್ಲಿ (ICC U19 World Cup 2022) ತಮ್ಮ ವೀರಾವೇಶದಿಂದ ಆಟದ ಮೂಲಕ 'ಬೇಬಿ ಎಬಿ' ಎಂಬ ಅಡ್ಡಹೆಸರನ್ನು ಗಳಿಸಿರುವ ಬ್ರೆವಿಸ್, ಅಂಡರ್ 19 ಟೂರ್ನಿಯಲ್ಲಿ ಭಾರತದ ಶಿಖರ್ ಧವನ್ (Shikhar Dhawan) ಹೆಸರಲ್ಲಿದ್ದ ಅಪರೂಪದ ದಾಖಲೆಯನ್ನು ಮುರಿಯುವ ಮೂಲಕ ಗಮನಸೆಳೆದಿದ್ದರು. ಅಂಡರ್ 19 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ದಕ್ಷಿಣ ಆಫ್ರಿಕಾದ 7 ನೇ ಸ್ಥಾನದ ಪ್ಲೇಆಫ್ ಪಂದ್ಯದಲ್ಲಿ, ಬ್ರೆವಿಸ್ 130 ಎಸೆತಗಳಲ್ಲಿ 138 ರನ್ ಗಳಿಸಿದರು. ಆ ಮೂಲಕ ಅಂಡರ್ 19 ವಿಶ್ವಕಪ್ ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ರನ್ ಪೇರಿಸಿದ ಶಿಖರ್ ಧವನ್ ಅವರ ದಾಖಲೆಯನ್ನು ಮುರಿದರು.

ಬ್ರೆವಿಸ್ ಅವರು 84.33ರ ಸರಾಸರಿಯಲ್ಲಿ ಆಡಿದ ಏಳು ಪಂದ್ಯಗಳಿಂದ 506 ರನ್ ಬಾರಿಸುವ ಮೂಲಕ 2004ರಲ್ಲಿ ಭಾರತದ ಶಿಖರ್ ಧವನ್ ಬಾರಿಸಿದ್ದ 505 ರನ್ ಗಳ ದಾಖಲೆಯನ್ನು ಮುರಿದರು. ಈ ಸಾಧನೆಗಾಗಿ ಸರಣಿಶ್ರೇಷ್ಠ ಗೌರವವನ್ನೂ ಬೇಬಿ ಎಬಿ ಪಡೆದುಕೊಂಡಿದ್ದರು. ತಮ್ಮ ಬ್ಯಾಟಿಂಗ್ ಫಾರ್ಮ್ ನಿಂದ ಮಾತ್ರವಲ್ಲದೆ, ಅವರ ಆಟದ ಶೈಲಿಯು ಬಹುತೇಕವಾಗಿ ಎಬಿಡಿ ಆಟದ ಶೈಲಿಯನ್ನು ಹೋಲುವ ಕಾರಣ "ಬೇಬಿ ಎಬಿ" ಎನ್ನುವ ನಿಕ್ ನೇಮ್ ಪಡೆದುಕೊಂಡಿದ್ದಾರೆ. ಸ್ವತಃ ಎಬಿ ಡಿವಿಲಿಯರ್ಸ್ ಕೂಡ ಇವರ ಆಟವನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು.

Scroll to load tweet…


"ನಾನು ಅವರ ಆಟದಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವುದನ್ನು ಪ್ರಾಮಾಣಿಕವಾಗಿ (ನಾವು ಭೇಟಿಯಾದಾಗ) ಒಪ್ಪಿಕೊಳ್ಳುತ್ತೇನೆ. ಅವನ ಬ್ಯಾಟಿಂಗ್ ಅನ್ನು ನೋಡುವವರೆಗೆ ಮತ್ತು ಅವನಲ್ಲಿ ಎಷ್ಟು ಸಾಮರ್ಥ್ಯವಿದೆ ಎಂದು ಇಳಿಯುವವರೆಗೂ ನಾನು ಇದೇ ಯೋಚನೆಯಲ್ಲಿದ್ದೆ. ನಾನು ಆಡುವ ಶೈಲಿಗೂ ಹಾಗೂ ಆಕ್ರಮಣಕಾರಿ ಆಟಕ್ಕೂ ಹೆಚ್ಚಿನ ಸಾಮ್ಯತೆಗಳಿವೆ" ಎಂದು ಡಿವಿಲಿಯರ್ಸ್ ತಿಳಿಸಿದ್ದರು. ಬ್ರೆವಿಸ್ ಸ್ವತಃ ಎಬಿಡಿಯ ದೊಡ್ಡ ಅಭಿಮಾನಿ ಎಂದು ಹೇಳಿಕೊಳ್ಳುತ್ತಾರೆ. ವಿಶೇಷವೆಂದರೆ, ಇಬ್ಬರೂ ಒಂದೇ ಶಾಲೆಗಾಗಿ ಆಡಿದವರಾಗಿದ್ದಾರೆ (ಆಫ್ರಿಕಾನ್ಸ್ ಹೋಯರ್ ಸೆನ್‌ಸ್ಕೂಲ್ (ಅಫೀಸ್)). ಬ್ರೆವಿಸ್ ಕೂಡ ಎಬಿಡಿ ಅವರಂತೆ ನಂ. 17 ಜರ್ಸಿಯನ್ನು ಧರಿಸುತ್ತಾರೆ. "ಲಾಕ್‌ಡೌನ್ ಸಮಯದಲ್ಲಿ, ನಾನು ಎಬಿಡಿ ಅವರನ್ನು ಸಂಪರ್ಕಿಸಿದ್ದೆ ಹಾಗೂ ಕೆಲವು ಸಲಹೆಗಳನ್ನು ಕೇಳಿದೆ. ಪ್ರತಿ ಬಾರಿಯೂ ಅವರು ನನಗೆ ಉತ್ತರಿಸಲು ಸಮಯವನ್ನು ಮೀಸಲಿಟ್ಟರು" ಎಂದು ಬ್ರೆವಿಸ್ ಐಸಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. "ಅವರು ಕ್ರಿಕೆಟ್ ಅನ್ನು ವಿವರಿಸುವ ರೀತಿ ನನಗೆ ಇಷ್ಟವಾಗಿದೆ. ಆಟವನ್ನು ಆದಷ್ಟು ಸರಳವಾಗಿರಿಸಲು ಅವರು ಬಯಸುತ್ತಾರೆ ಎಂದು ಬ್ರೆವಿಸ್ ಹೇಳಿದ್ದರು.


IPL Auction 2022 Live: ಇಶಾನ್ ಕಿಶನ್, ದೀಪಕ್ ಚಹರ್ ಐಪಿಎಲ್ 2022 ಹರಾಜಿನ ದುಬಾರಿ ಆಟಗಾರರು
ನಾನು ಎಂದಿಗೂ ಎಬಿಡಿ ಅವರ ಆಟವನ್ನು ಅನುಕರಣೆ ಮಾಡಿಲ್ಲ. ಅವರ ಆಟವನ್ನು ನಾನು ಟಿವಿಯಲ್ಲಿ ಸಾಕಷ್ಟು ಬಾರಿ ನೋಡಿದ್ದೇನೆ. ಸೂಪರ್ ಸ್ಪೋರ್ಟ್ಸ್ ಪಾರ್ಕ್ ನಲ್ಲೂ ಅವರ ಆಟವನ್ನು ವೀಕ್ಷಿಸಿದ್ದೆ. ಎಬಿಡಿ ಆಡುವಂಥ ಬ್ರ್ಯಾಂಡ್ ನ ಕ್ರಿಕೆಟ್ ಆಡಬೇಕು ಎನ್ನುವುದಷ್ಟೇ ನನ್ನ ಆಸೆಯಾಗಿತ್ತು. ನನ್ನ ಆಟದಲ್ಲಿ ಭಯವೇ ಇರುವುದಿಲ್ಲ ಎಂದು ನನ್ನ ಸಹೋದರ ಕೂಡ ಹೇಳುವುದನ್ನು ಕೇಳಿದ್ದೇನೆ. ಆದರೆ, ನಾನು ಅಂಥ ಆಟಗಾರನಲ್ಲ ಎಂದು ಬ್ರೆವಿಸ್ ಹೇಳುತ್ತಾರೆ.

IPL Auction 2022 ಕನ್ನಡಿಗ ಅಭಿನವ್‌ಗೆ ಜಾಕ್‌ಪಾಟ್, 2.6 ಕೋಟಿಗೆ ಗುಜರಾತ್ ಪಾಲು!
ಅಂಡರ್ 19 ವಿಶ್ವಕಪ್ ಅನ್ನು ಸಾಕಷ್ಟು ದಾಖಲೆಯೊಂದಿಗೆ ಬ್ರೆವಿಸ್ ಮುಗಿಸಿದ್ದಾರೆ. ಗರಿಷ್ಠ ರನ್ ಮಾತ್ರವಲ್ಲದೆ, ಗರಿಷ್ಠ ಶತಕ (2), ಗರಿಷ್ಠ ಅರ್ಧಶತಕ (3), ಗರಿಷ್ಠ ಬೌಂಡರಿ ಫೋರ್ಸ್(45) ಗರಿಷ್ಠ ಸಿಕ್ಸರ್ಸ್ (18), ಅತ್ಯುತ್ತಮ ಸಸರಾಸರಿ (84.33) ದಾಖಲೆಯನ್ನು ಹೊಂದಿದ್ದಾರೆ. ಅದರೊಂದಿಗೆ ಸೀನಿಯರ್ ಮಟ್ಟದಲ್ಲಿ ಆಡದ ನಡುವೆಯೂ ಐಸಿಸಿ ಪ್ಲೇಯರ್ ಆಫ್ ದ ಮಂತ್ (ಜನವರಿ) ನಾಮನಿರ್ದೇಶನಗೊಂಡ ಮೊದಲ ಪ್ಲೇಯರ್ ಎನಿಸಿದ್ದಾರೆ.