ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಖರೀದಿಸಿದ ಮುಂಬೈ ಇಂಡಿಯನ್ಸ್ ಇಂಜುರಿಯಿಂದ ಈ ವರ್ಷ ಐಪಿಎಲ್ ಆಡೋದು ಅನುಮಾನ ಭಾರಿ ಲೆಕ್ಕಾಚಾರಾ ಹಾಕಿ 8 ಕೋಟಿ ರೂಪಾಯಿ ನೀಡಿದ ಮುಂಬೈ
ಬೆಂಗಳೂರು(ಫೆ.13): ಐಪಿಎಲ್ ಹರಾಜಿನಲ್ಲಿ(IPL Auction 2022) ಮುಂಂಬೈ ಇಂಡಿಯನ್ಸ್ ಆಯ್ಕೆ ಕೆಲವರಿಗೆ ಅಚ್ಚರಿ ಅನಿಸಿದರೂ ಇದರ ಹಿಂದೆ ದೂರ ದೃಷ್ಟಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹರಾಜಿನ ಎರಡನೇ ದಿನ ಮುಂಬೈ ಹಲವು ಪ್ರತಿಭಾನ್ವಿತ ಕ್ರಿಕೆಟಿರನ್ನು ಖರೀದಿಸಿದೆ. ಇದರಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್(Jofra Archer) ಖರೀದಿ ಭಾರಿ ಚರ್ಚೆಯಾಗುತ್ತಿದೆ. ಕಾರಣ ಈ ವರ್ಷ ಜೋಫ್ರಾ ಆರ್ಚರ್ ಐಪಿಎಲ್ ಆಡೋದೇ ಅನುಮಾನವಾಗಿದೆ. ಆದರೂ ಮುಂಬೈ ಇಂಡಿಯನ್ಸ್ 8 ಕೋಟಿ ರೂಪಾಯಿ ನೀಡಿ ಆರ್ಚರ್ ಖರೀದಿಸಿದೆ.
ಗಾಯಗೊಂಡಿರುವ(Injury) ಜೋಫ್ರಾ ಆರ್ಚರ್ ಈಗಾಗಲೇ ಪ್ರತಿಷ್ಠಿತ ಆ್ಯಷಸ್(Ahesh Series) ಸರಣಿಯಿಂದಲೂ ಹೊರಗುಳಿದಿದ್ದಾರೆ. ಸಂಪೂರ್ಣ ಚೇತರಿಸಿಕೊಳ್ಳದ ಜೋಫ್ರಾ 2022ರ ಐಪಿಎಲ್ ಟೂರ್ನಿ ಆಡೋದು ಅನುಮಾನವಾಗಿದೆ. ಇಷ್ಟಾದರೂ ಮುಂಬೈ ಇಂಡಿಯನ್ಸ್ ಜೋಫ್ರಾ ಖರೀದಿ ಮಾಡಿದ್ದು ಯಾಕೆ? ಅನ್ನೋ ಪ್ರಶ್ನೆ ಇದೀಗ ಹಲವರನ್ನು ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ.
IPL Auction 2022 ಕರ್ನಾಟಕದ ಪ್ರವೀಣ್ ಡೆಲ್ಲಿ ಪಾಲು, ಸುಯಾಶ್ ಹಾಗೂ ಮಿಲಿಂದ್ ಖರೀದಿಸಿದ ಆರ್‌ಸಿಬಿ!
2022ರ ಐಪಿಎಲ್ ಟೂರ್ನಿ ದೃಷ್ಟಿಲ್ಲಿಟ್ಟುಕೊಂಡು ಮುಂಬೈ ಇಂಡಿಯನ್ಸ್ ಜೋಫ್ರಾ ಖರೀದಿ ಮಾಡಿಲ್ಲ. ಬದಲಾಗಿದೆ. 2023 ಸೇರಿದಂತೆ ಮುಂಬರುವ ಐಪಿಎಲ್ ಟೂರ್ನಿಗಳನ್ನು ದೃಷ್ಟಿಲ್ಲಿಟ್ಟುಕೊಂಡು ಮುುಂಬೈ ಇಂಡಿಯನ್ಸ್ ಜೋಫ್ರಾ ಖರೀದಿ ಮಾಡಿದೆ. ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿಗಳ ಪೈಕಿ ಜಸ್ಪ್ರೀತ್ ಬುಮ್ರಾ ಹಾಗೂ ಜೋಫ್ರಾ ಆರ್ಚರ್ ಜೋಡಿ ಎದುರಾಳಿಗಳಿಗೆ ಮಾರಕವಾಗಲಿದೆ. ಇದೇ ಕಾರಣಕ್ಕೆ 8 ಕೋಟಿ ರೂಪಾಯಿ ನೀಡಿ ಜೋಫ್ರಾ ಖರೀಸಿದೆ.
ಲಸಿತ್ ಮಲಿಂಗ ವಿದಾಯದ ಬಳಿಕ ಮುಂಬೈ ಇಂಡಿಯನ್ಸ್ ಹಲವು ವಿದೇಶಿ ವೇಗಿಗಳನ್ನು ಪ್ರಯೋಗಿಸಿದೆ. ಆದರೆ ಯಾರೂ ಖಾಯಂ ಆಗಿಲ್ಲ. ಜಸ್ಪ್ರೀತ್ ಬುಮ್ರಾಗೆ ಉತ್ತಮ ಸಾಥ್ ನೀಡಬಲ್ಲ ಮತ್ತೊಬ್ಬ ಮಾರಕ ವೇಗಿ ಎಂದರೆ ಜೋಫ್ರಾ ಆರ್ಚರ್. ಈಗಾಗಲೇ ಇಂಗ್ಲೆಂಡ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಜೋಫ್ರಾ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಹೀಗಾಗಿ ಜೋಫ್ರಾ ಹಾಗೂ ಬುಮ್ರಾ ಜೋಡಿ ಮತ್ತೊಂದು ಟ್ರೋಫಿ ಗೆಲ್ಲಿಸಿಕೊಡಬಹುದು ಅನ್ನೋ ಲೆಕ್ಕಾಚಾರಾ ಮುಂಬೈ ಇಂಡಿಯನ್ಸ್ ಮಾಡಿದೆ.
IPL Auction 2022 : ಹರಾಜಿನಲ್ಲಿ ಮುಗಿಯೋಲ್ಲ ಬ್ಲಂಡರ್ಸ್, RCB ಆಯ್ಕೆ ಬಗ್ಗೆ ವೆಂಕಿ ಗರಂ
ಜೋಫ್ರಾ ಆರ್ಚರ್ 2021ರ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿದಿದ್ದರು. ಟಿ20 ವಿಶ್ವಕಪ್ ಟೂರ್ನಿ ಕಾರಣ ಜೋಫ್ರಾ ಐಪಿಎಲ್ ಟೂರ್ನಿಯಿಂದ ದೂರ ಉಳಿದಿದ್ದರು. ಇದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ತೀವ್ರ ಹೊಡೆತ ನೀಡಿತ್ತು. 2018ರಿಂದ ಐಪಿಎಲ್ ಟೂರ್ನಿಯಲ್ಲಿ ಸಕ್ರಿಯವಾಗಿರುವ ಜೋಫ್ರಾ 2021ರ ಐಪಿಎಲ್‌ನಿಂದ ಹೊರಗುಳಿದಿದ್ದರೆ, 2022ರ ಟೂರ್ನಿಯಿಂದಲೂ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
2018ರಿಂದ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದ ಜೋಫ್ರಾ ಆರ್ಚರ್ ಇದೀಗ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಇದೀಗ ಜೋಫ್ರಾ ಆರ್ಚರ್ ಆಗಮನದಿಂದ ಮತ್ತಷ್ಟು ಬಲಿಷ್ಠವಾಗಿದೆ.
ಐಪಿಎಲ್ ಟೂರ್ನಿಯಲ್ಲಿ ಒಟ್ಟು 35 ಪಂದ್ಯಗಳನ್ನು ಆಡಿರುವ ಜೋಫ್ರಾ ಆರ್ಚರ್ 46 ವಿಕೆಟ್ ಕಬಳಿಸಿದ್ದಾರೆ. 15 ರನ್ ನೀಡಿ 3 ವಿಕೆಟ್ ಕಬಳಿಸಿರುವುದು ಜೋಫ್ರಾ ಬೆಸ್ಟ್ ಬೌಲಿಂಗ್ ಆಗಿದೆ. ಇನ್ನು ಬ್ಯಾಟಿಂಗ್‌ನಲ್ಲೂ ಜೋಫ್ರಾ ಕಾಣಿಕೆ ನೀಡಿದ್ದಾರೆ. 197 ರನ್ ಸಿಡಿಸಿದ್ದಾರೆ. ಇಂಗ್ಲೆಂಡ್ ಪರ 12 ಟಿ20 ಪಂದ್ಯ ಆಡಿರುವ ಜೋಫ್ರಾ ಆರ್ಚರ್ 14 ವಿಕೆಟ್ ಉರುಳಿಸಿದ್ದಾರೆ. 13 ಟೆಸ್ಟ್ ಪಂದ್ಯ ಹಾಗೂ 17 ಏಕದಿನ ಪಂದ್ಯವನ್ನೂ ಆಡಿದ್ದಾರೆ.
