Asianet Suvarna News Asianet Suvarna News

IPL Auction 2022 : ಐಸಿಸಿ ವಿಶ್ವಕಪ್ ಗೆದ್ದ ನಾಯಕರು ಅನ್ ಸೋಲ್ಡ್!

ಐಪಿಎಲ್ ಹರಾಜಿನ 2ನೇ ದಿನದ ಪ್ರಕ್ರಿಯೆಗಳು ಆರಂಭ
ಏಕದಿನ ಹಾಗೂ ಟಿ20 ವಿಶ್ವಕಪ್ ವಿಜೇತ ನಾಯಕರು ಅನ್ ಸೋಲ್ಡ್
ಇಯಾನ್ ಮಾರ್ಗನ್ ಹಾಗೂ ಆರನ್ ಫಿಂಚ್ ಗೆ ಬಿಡ್ ಮಾಡದ ಫ್ರಾಂಚೈಸಿಗಳು

IPL Auction 2022 ICC World Cup Winning Captains Eoin Morgan and Aaron Finch Unsold
Author
Bengaluru, First Published Feb 13, 2022, 12:40 PM IST

ಬೆಂಗಳೂರು (ಫೆ.13): ವಿಶ್ವ ಕ್ರಿಕೆಟ್  (World Cricket)ಒಂದು ವೇದಿಕೆಯಾದರೆ, ಐಪಿಎಲ್ (IPL ) ಅನ್ನೊದು ಇನ್ನೊಂದು ಜಗತ್ತು. ವಿಶ್ವ ಕ್ರಿಕೆಟ್ ನಲ್ಲಿ ದಿಗ್ಗಜ ಕ್ರಿಕೆಟಿಗ ಎನಿಸಿಕೊಂಡವರೂ ಐಪಿಎಲ್ ಹರಾಜಿನಲ್ಲಿ ಕನಿಷ್ಠ ಬಿಡ್ ಪಡೆಯಲು ಸಾಧ್ಯವಾಗದ ಸಾಕಷ್ಟು ಉದಾಹರಣೆಗಳಿವೆ. ಅದರಂತೆ ಈ ಬಾರಿಯ ಐಪಿಎಲ್ ಹರಾಜಿನಲ್ಲೂ ಇದು ಪುನರಾವರ್ತನೆಯಾಗಿದೆ. 2019ರ ಏಕದಿನ ವಿಶ್ವಕಪ್ (ICC World Cup 2019 ) ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ (Eoin Morgan) ಹಾಗೂ 2021ರಲ್ಲಿ ಆಸ್ಟ್ರೇಲಿಯಾ ತಂಡವನ್ನು ವಿಶ್ವ ಚಾಂಪಿಯನ್ (2021 ICC T20 World Cup) ಪಟ್ಟಕ್ಕೇರಿಸಿದ ಆರನ್ ಫಿಂಚ್ (Aaron Finch) ಈ ಬಾರಿ ಕನಿಷ್ಠ ಬಿಡ್ ಪಡೆಯಲು ವಿಫಲರಾಗಿದ್ದಾರೆ.

ಭಾನುವಾರ ದಿನದ ಆರಂಭದಲ್ಲಿಯೇ ಈ ಆಟಗಾರರನ್ನು ಬಿಡ್ ಮಾಡಲಾಯಿತು. ಕಳೆದ ವರ್ಷ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಇಂಗ್ಲೆಂಡ್ ನ ಸೀಮಿತ ಓವರ್ ಗಳ ತಂಡದ ನಾಯಕ ಇಯಾನ್ ಮಾರ್ಗನ್ ದಿನದ 6ನೇ ಆಟಗಾರನಾಗಿ ಹರಾಜಿಗೆ ಬಂದಿದ್ದರು. 1.5 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಇಯಾನ್ ಮಾರ್ಗ್ ಹೆಸರು ಘೋಷಣೆ ಆಗುತ್ತಿದ್ದಂತೆ ಫ್ರಾಂಚೈಸಿಗಳ ನಡುವೆ ಮೌನ ಆವರಿಸಿಕೊಂಡಿತು. ಕಳೆದ ವರ್ಷ ಕೆಕೆಆರ್ ತಂಡದ ಪರವಾಗಿ ಆಡಿದ್ದ ಕಾರಣ, ಹರಾಜುಗಾರ ಚಾರು ಶರ್ಮ ಹಲವು ಬಾರಿ ಕೆಕೆಆರ್ ಫ್ರಾಂಚೈಸಿ ಕಡೆ ತಿರುಗಿದರಾದರೂ ಅವರಿಗೆ ಕನಿಷ್ಠ ಬಿಡ್ ಕೂಡ ಬರದೇ ಅನ್ ಸೋಲ್ಡ್ ಆದರು.

IPL Auction 2022 Live: ಮೆಗಾ ಹರಾಜಿನ 2ನೇ ದಿನ, ಯಾರಿಗೆ ಸಿಹಿ, ಯಾರಿಗೆ ಕಹಿ?
ತಮ್ಮ ನಾಯಕತ್ವದ ಸಾಮರ್ಥ್ಯದಿಂದ ಹೆಸರುವಾಸಿಯಾಗಿರುವ ಇಯಾನ್ ಮಾರ್ಗನ್, 2021ರ ಐಪಿಎಲ್ ನಲ್ಲಿ ಕೆಕೆಆರ್ ತಂಡ ಫೈನಲ್ ಗೇರುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಐಪಿಎಲ್ ನ ಮೊದಲ ಹಾಫ್ ನಲ್ಲಿ ಕೆಕೆಆರ್ ನೀರಸ ಆಟವಾಡಿದ್ದರೆ, 2ನೇ ಅವಧಿಯ ಆಟದಲ್ಲಿ ಅದ್ಭುತ ನಿರ್ವಹಣೆ ತೋರುವ ಮೂಲಕ ಫೈನಲ್ ಗೇರಲು ಯಶಸ್ವಿಯಾಗಿತ್ತು. ನಾಯಕತ್ವದಲ್ಲಿ ಮಾರ್ಗನ್ ಮಿಂಚಿದ್ದರೂ ಅವರ ವೈಯಕ್ತಿಕ ಫಾರ್ಮ ಕಳಪೆ ಆಗಿದ್ದ ಕಾರಣ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದಾರೆ. ಫಾರ್ಮ್ ನಲ್ಲಿದ್ದಾಗ ವಿಶ್ವದ ವಿಧ್ವಂಸಕ ಪ್ಲೇಯರ್ ಗಳಲ್ಲಿ ಒಬ್ಬರೆನಿಸಿಕೊಳ್ಳು ಮಾರ್ಗನ್, ಕಳಪೆ ಫಾರ್ಮ್ ನಲ್ಲಿದ್ದಾಗ ಅತ್ಯಂತ ಕೆಟ್ಟ ಎಸೆತಕ್ಕೂ ಔಟಾದ ಉದಾಹರಣೆ ಇದೆ. ಅದರೆ, ಅವರ ನಾಯಕತ್ವದ ನಿರ್ಧಾರಗಳು ಕಳೆದ ವರ್ಷ ಪ್ಲಸ್ ಪಾಯಿಂಟ್ ಎನಿಸಿದ್ದರು.

IPL Auction 2022 : ಮೊದಲ ದಿನದ ಹರಾಜಿನ ಬಳಿಕ, RCB ಟೀಮ್ ಹೇಗೆ ಕಾಣ್ತಿದೆ?
ಕಳೆದ ವರ್ಷ ಇಡೀ ಐಪಿಎಲ್ ನಲ್ಲಿ ಕಳಪೆ ಆಟವಾಡಿದ್ದ ಮಾರ್ಗಲ್ ಆಡಿದ 17 ಪಂದ್ಯಗಳಿಂದ ಕೇವಲ 11 ರ ಸರಾಸರಿಯಲ್ಲಿ 133 ರನ್ ಬಾರಿಸಿದ್ದರು. ಇನ್ನು ಐಪಿಎಲ್ ನಲ್ಲಿ ಈವರೆಗೂ ಆಡಿರುವ 83 ಪಂದ್ಯಗಳಿಂದ ಕೇವಲ 5 ಅರ್ಧಶತಕದೊಂದಿಗೆ 1405 ರನ್ ಬಾರಿಸಿದ್ದಾರೆ. ಶಾಂತ ಸ್ವಭಾವದಲ್ಲಿ ಅವರ ಬಿಗ್ ಹಿಟ್ ಆಟ ಪ್ಲಸ್ ಪಾಯಿಂಟ್ ಆಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಅವರ ಸ್ಫೋಟಕ ಆಟ ಕಾಣೆಯಾಗಿತ್ತು.

ಆ ಬಳಿಕ ಆಸ್ಟ್ರೇಲಿಯಾದ ಸೀಮಿತ ಓವರ್ ಗಳ ತಂಡದ ನಾಯಕ ಹಾಗೂ 2021ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ ಹೆಸರು ಬಂದಿತು. 1.5 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಇವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ಐಪಿಎಲ್ ನಲ್ಲಿ ಬಹುತೇಕ ಎಲ್ಲಾ ಫ್ರಾಂಚೈಸಿಗಳ ಪರವಾಗಿ ಆಡಿರುವ ದಾಖಲೆ ಹೊಂದಿರುವ ಆರನ್ ಫಿಂಚ್ ಹೆಸರು 2ನೇ ಬಾರಿಗೆ ಅನ್ ಸೋಲ್ಡ್ ಆಯಿತು.

Follow Us:
Download App:
  • android
  • ios